Site icon Vistara News

ಸಿಎಸ್​ಕೆ ಸ್ಟಾರ್ ಬ್ಯಾಟರ್ ಋತುರಾಜ್ ಗಾಯಕ್ವಾಡ್​ ಮದುವೆಯ ಫೋಟೋಗಳು ವೈರಲ್​

Ruturaj Gaikwad and Utkarsha Pawar couple

#image_title

ಪುಣೆ: ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡದ ಉದಯೋನ್ಮುಖ ಬ್ಯಾಟರ್​ ಋತುರಾಜ್ ಗಾಯಕ್ವಾಡ್ ಅವರು ಮಹಾರಾಷ್ಟ್ರ ಮಹಿಳಾ ತಂಡದ ಆಲ್​ರೌಂಡರ್ ಉತ್ಕರ್ಷ ಪವಾರ್ ಅವರನ್ನು ಶನಿವಾರ ವಿವಾಹವಾಗಿದ್ದಾರೆ. ಸಿಎಸ್​ಕೆ ಆಟಗಾರ ತಮ್ಮ ಜೀವನದ ಈ ಸಂಭ್ರಮದ ದಿನಗಳನ್ನು ಇನ್​ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರಗಳು ಕ್ಷಣಾರ್ಧದಲ್ಲಿ ವೈರಲ್ ಆಗಿವೆ. ಋರುತುರಾಜ್ ಬಹಳ ಸಮಯದಿಂದ ಉತ್ಕರ್ಷನೊಂದಿಗೆ ಡೇಟಿಂಗ್ ಮಾಡುತ್ತಿದ್ದರು. ಉತ್ಕರ್ಷ ಅವರು ಆಲ್ರೌಂಡರ್ ಆಗಿದ್ದು, ಬಲಗೈ ಬ್ಯಾಟರ್​ ಮತ್ತು ವೇಗದ ಬೌಲರ್ ಕೂಡ ಆಗಿದ್ದಾರೆ.

ಋತುರಾಜ್​ ಹಾಗೂ ಉತ್ಕರ್ಷ ಜತೆಯಾಗಿ ಜಿಮ್​ನಲ್ಲ ಅಭ್ಯಾಸ ನಡೆಸಿದ್ದು ಮತ್ತು ಒಟ್ಟಿಗೆ ಊಟ ಮಾಡುವುದು ಕ್ಯಾಮೆರಾಮನ್​​ಗಳ ಕಣ್ಣಿಗೆ ಬಿದ್ದಿತ್ತು. ಇದೀಗ ಅವರಿಬ್ಬರು ಮದುವೆಯಾಗಿದ್ದಾರೆ. ಮದುವೆಯ ಕಾರಣಕ್ಕೆ ಋತುರಾಜ್ ಅವರು ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ತಂಡದ ಮೀಸಲು ಆಟಗಾರರಾಗಿ ಅವಕಾಶ ಸಿಕ್ಕರೂ ಅಲ್ಲಿಗೆ ಹೋಗಲು ನಿರಾಕರಿಸಿದ್ದರು.

ಇದನ್ನೂ ಓದಿ : ಸಿಎಸ್​ಕೆ ಆರಂಭಿಕ ಬ್ಯಾಟರ್ ಋತುರಾಜ್​ಗೆ ಜೂ.3ರಂದು ಮದುವೆ; ಅವರ ಕೈಹಿಡಿಯಲಿರುವ ಲಕ್ಕಿ ಲೇಡಿ ಯಾರು?

ಉತ್ಕರ್ಷ ಪವಾರ್ ಅವರು 18 ತಿಂಗಳ ಹಿಂದೆ ಕೊನೆಯ ಬಾರಿಗೆ ಕ್ರಿಕೆಟ್ ಪಂದ್ಯ ಆಡಿದ್ದರು. ಅವರು ಪುಣೆಯ ಇನ್ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ ಅಂಡ್ ಫಿಟ್ನೆಸ್ ಸೈನ್ಸಸ್ (ಐಎನ್ಎಫ್ಎಸ್) ನಲ್ಲಿ ಅಧ್ಯಯನ ಮಾಡುತ್ತಿದ್ದಾರೆ.

ಋತುರಾಜ್ ಅವರ ಕೈ ಹಿಡಿದಿರುವ ಉತ್ಕರ್ಷ ಅವರುಐಪಿಎಲ್​ ಫೈನಲ್ ಸಮಯದಲ್ಲಿ ಅವರು ಅಹಮದಾಬಾದ್​ನಲ್ಲಿ ಕಾಣಿಸಿಕೊಂಡಿದ್ದರು. ಗಾಯಕ್ವಾಡ್ ಮತ್ತು ಸಿಎಸ್​ಕೆ ತಂಡವನ್ನು ಪ್ರೇಕ್ಷಕರ ಗ್ಯಾಲರಿಯಲ್ಲಿ ಹುರಿದುಂಬಿಸಿದ್ದರು. ಅವರಿಬ್ಬರು ಪಂದ್ಯದ ಬಳಿಕ ಜತೆಯಾಗಿ ಕಾಣಿಸಿಕೊಂಡಿದ್ದು ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ. ಸಿಎಸ್​ಕೆ ನಾಯಕ ಧೋನಿಯೊಂದಿಗೆ ಫೋಟೊ ತೆಗಿಸಿಕೊಂಡು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

Exit mobile version