ಬರ್ಮಿಂಗ್ಹಮ್ : ಕಾಮನ್ವೆಲ್ತ್ ಗೇಮ್ಸ್‌ನ (CWG- 2022) ಪುರುಷರ ಹಾಕಿ ಸ್ಪರ್ಧೆಯಲ್ಲಿ ಭಾರತವು ಸೆಮಿ ಫೈನಲ್ ಹಣಾಹಣಿಯಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಫೈನಲ್‌ಗೆ ಪ್ರವೇಶಿಸಿದೆ.
ಭಾರತವು ಶನಿವಾರ ನಡೆದ ಸೆಮಿ ಫೈನಲ್‌ನಲ್ಲಿ ೩-೨ ಅಂತರದಿಂದ ರೋಚಕವಾಗಿ ದಕ್ಷಿಣ ಆಫ್ರಿಕಾವನ್ನು ಮಣಿಸಿ ಫೈನಲ್‌ಗೆ ಪ್ರವೇಶಿಸಿತು.
ಭಾರತದ ಪರ ಅಭಿಷೇಕ್, (೨೦ನೇ ನಿಮಿಷ), ಮಾನ್‌ದೀಪ್ ಸಿಂಗ್ (೨೮ನೇ ನಿಮಿಷ) ಮತ್ತು ಜುಗ್ರಾಜ್ ಸಿಂಗ್ (೫೮ನೇ ನಿಮಿಷ) ಗೋಲ್ ದಾಖಲಿಸಿದರು. ದಕ್ಷಿಣ ಆಫ್ರಿಕಾ ಪರ ರಿಯಾನ್ ಜೂಲಿಯಸ್ (೩೩ನೇ ನಿಮಿಷ) ಮತ್ತು ಮುಸ್ತಫಾ ಕ್ಯಾಸಿಮ್ (೫೯ನೇ ನಿಮಿಷ) ಗೋಲ್ ಗಳಿಸಿದರು.
ಎರಡನೇ ಸೆಮಿ ಫೈನಲ್ ಪಂದ್ಯವು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ಭಾನುವಾರ ನಡೆಯಲಿದೆ. ಇದರಲ್ಲಿ ಗೆದ್ದ ತಂಡದ ಜತೆ ಫೈನಲ್‌ನಲ್ಲಿ ಭಾರತ ಸೆಣಸಲಿದೆ.