ಬರ್ಮಿಂಗ್ಹಮ್ : ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಒಂಬತ್ತನೇ ಪದಕ ಲಭಿಸಿದೆ. ಈ ಪದಕವೂ ವೇಟ್ ಲಿಫ್ಟರ್ ಕೊಡುಗೆ. ಮಹಿಳಾ ವೇಟ್‌ಲಿಫ್ಟರ್ ಹರ್ಜಿಂದರ್ ಕೌರ್ ಈ ಬಾರಿ ಪದಕ ತಂದಕೊಟ್ಟವರು. ಮಹಿಳೆಯರ ೭೧ ಕೆ.ಜಿ ವಿಭಾಗದ ಫೈನಲ್‌ನಲ್ಲಿ ಒಟ್ಟಾರೆ ೨೧೨ ಕೆ.ಜಿ ಭಾರ ಎತ್ತಿದ ಅವರು ಕಂಚಿನ ಪದಕಕ್ಕೆ ಭಾಜನರಾದರು.
ಈ ಸ್ಪರ್ಧೆಯಲ್ಲಿ ಇಂಗ್ಲೆಂಡ್‌ನ ಸಾರಾ ಡೇವಿಸ್ ಈ ಸ್ಪರ್ಧೆಯ ಬಂಗಾರದ ಪದಕ ತಮ್ಮದಾಗಿಸಿಕೊಂಡರು. ಹರ್ಜಿಂದರ್ ಅವರು ಸ್ನ್ಯಾಚ್ ವಿಭಾಗದ ಮೊದಲ ಪ್ರಯತ್ನದಲ್ಲಿ ೯೦ ಕೆ.ಜಿ ಭಾರ ಎತ್ತಲು ವಿಫಲಗೊಂಡರು .ಆದರೆ, ಎರಡನೇ ಯತ್ನದಲ್ಲಿ ೯೦ ಹಾಗೂ ಮೂರನೇ ಪ್ರಯತ್ನದಲ್ಲಿ ೯೩ ಕೆ.ಜಿ ಭಾರ ಎತ್ತುವಲ್ಲಿ ಯಶಸ್ಸು ಕಂಡರು. ಅಂತೆಯೇ ಕ್ಲೀನ್ ಮತ್ತು ಜರ್ಕ್ ವಿಭಾಗದಲ್ಲಿ ಸತತವಾಗಿ ೧೧೩, ೧೧೬ ಹಾಗೂ ೧೧೯ ಕೆ.ಜಿ ಭಾರ ಎತ್ತಿದ ಹರ್ಜಿಂದರ್ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟರು.