Site icon Vistara News

CWG 2022 | ಪೇಟೆ ಸುತ್ತಬೇಡಿ ಎಂದು ಅಥ್ಲೀಟ್‌ಗಳಿಗೆ ಸೂಚನೆ ಕೊಟ್ಟ ಐಒಎ

CWG 2022

ಬರ್ಮಿಂಗ್‌ಹ್ಯಾಮ್‌: ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಸ್ಪರ್ಧಿಸಲು ಬರ್ಮಿಂಗ್‌ಹ್ಯಾಮ್‌ಗೆ ಹೋಗಿರುವ ಅಥ್ಲೀಟ್‌ಗಳು ಯಾರೂ ಅನವಶ್ಯಕ ಪೇಟೆ ಸುತ್ತಬಾರದು ಎಂದು ಭಾರತೀಯ ಒಲಿಂಪಿಕ್‌ ಸಮಿತಿ (ಐಒಎ) ಸೂಚನೆ ನೀಡಿದೆ. ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಅನಗತ್ಯ ಸುತ್ತಾಟದಿಂದ ಸೋಂಕು ತಗುಲುವ ಸಾಧ್ಯತೆಗಳಿವೆ ಎಂದು ಸೂಚನೆ ನೀಡಿದ್ದಾರೆ.

“ಬರ್ಮಿಂಗ್‌ಹ್ಯಾಮ್‌ಗೆ ತೆರಳಿದವರು ಹೊರಗಡೆ ಸುತ್ತಾಟ ಮಾಡುವುದರಿಂದ ಅವರಿಗೆ ಸೋಂಕು ತಗುಲುವ ಸಾಧ್ಯತೆಗಳು ಇರುತ್ತವೆ. ಇದು ಅಥ್ಲೀಟ್‌ಗಳ ಆರೋಗ್ಯ ಹಾಗೂ ಸ್ಪರ್ಧೆಗೆ ತೊಂದರೆ ಉಂಟು ಮಾಡಬಲ್ಲುದು,” ಎಂದು ಐಒಎ ಪ್ರಕಟಣೆ ಹೊರಡಿಸಿದೆ.

“”ಸಾರ್ವಜನಿಕರ ಜತೆ ಆದಷ್ಟು ಕಡಿಮೆ ಸಂಪರ್ಕ ಹೊಂದಬೇಕು. ಅಂತೆಯೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು,” ಎಂದೂ ಸೂಚನೆ ನೀಡಲಾಗಿದೆ.

ಭಾರತದಿಂದ ೨೧೫ ಪುರುಷ ಹಾಗೂ ೧೦೭ ಮಹಿಳಾ ಅಥ್ಲೀಟ್‌ಗಳು ಸೇರಿದಂತೆ ಒಟ್ಟಾರೆ ೩೨೧ ಸ್ಪರ್ಧಿಗಳು ಬರ್ಮಿಂಗ್‌ಹ್ಯಾಮ್‌ಗೆ ತೆರಳಿದ್ದಾರೆ.

ಕಾಮನ್ವೆಲ್ತ್‌ ಗೇಮ್ಸ್‌ ಜುಲೈ ೨೮ರಿಂದ ಆಗಸ್ಟ್‌ ೮ರವರೆಗೆ ನಡೆಯಲಿದೆ.

ಇದನ್ನೂ ಓದಿ | CWG-2022 | ಇಬ್ಬರು ಕ್ರಿಕೆಟ್‌ ಆಟಗಾರ್ತಿಯರಿಗೆ ಕೊರೊನಾ ಸೋಂಕು

Exit mobile version