ಬರ್ಮಿಂಗಮ್: ಭಾರತದ ಜಿಮ್ನಾಸ್ಟಿಕ್ ಪಟು ಪ್ರಣತಿ ನಾಯಕ ಕಾಮನ್ವೆಲ್ತ್ ಗೇಮ್ಸ್‌ನ (CWG- 2022) ವಾಲ್ಟ್ ವಿಭಾಗದಲ್ಲಿ ಫೈನಲ್‌ಗೇರಿದ್ದಾರೆ.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದ ಪ್ರಣತಿ ಅವರು ತಮ್ಮ ಮೊದಲ ಪ್ರಯತ್ನದಲ್ಲಿ ೧೩.೬೦೦ ಅಂಕ ಪಡೆದರೆ, ಎರಡನೇ ಪ್ರಯತ್ನದಲ್ಲಿ ೧೨.೯೫೦ ಅಂಕ ಗಳಿಸಿದರು. ಈ ಮೂಲಕ ಸರಾಸರಿ ೧೩.೨೭೫ ಅಂಕವನ್ನು ಗಳಿಸುವ ಮೂಲಕ ಎರಡೆಯನವರಾಗಿ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದುಕೊಂಡರು. ಸ್ಕಾಟ್ಲೆಂಡ್‌ನ ಶಾನನ್ ಅರ್ಚರ್ ೧೩. ೫೦೦ ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದುಕೊಂಡರು.
ಭಾರತದ ಇನ್ನೊಬ್ಬರು ಸ್ಪರ್ಧಿ ಪ್ರತಿಷ್ಠಾ ಸಮಂತಾ ೧೧.೩೫೦ ಅಂಕಗಳೊಂದಿಗೆ ಹತ್ತನೆಯ ಸ್ಥಾನ ಪಡೆದುಕೊಂಡರು. ಆದರೆ, ಅಗ್ರ ೮ ಸ್ಪರ್ಧಿಗಳು ಮಾತ್ರ ಫೈನಲ್‌ಗೆ ಪ್ರವೇಶ ಪಡೆದ ಕಾರಣ ಪ್ರತಿಷ್ಠಾ ಅವರಿಗೆ ನಿರಾಸೆ ಎದುರಾಯಿತು. ರುತುಜಾ ನಟರಾಜ್ ಕೂಡ ೧೨.೩೦೦ ಅಂಕಗಳನ್ನು ಸಂಪಾದಿಸಿ ಕಾರಣ ಅವರಿಗೂ ಫೈನಲ್ ಅವಕಾಶ ತಪ್ಪಿ ಹೋಯಿತು.
ಮಹಿಳೆಯರ ತಂಡ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಈ ಮೂವರು ಸ್ಪರ್ಧಿಗಳು ೧೦೨. ೬೫೦ ಅಂಕಗಳನ್ನು ಮಾತ್ರ ಸಂಪಾದಿಸಲು ಶಕ್ತಗೊಂಡ ಕಾರಣ ಸ್ಪರ್ಧೆಯಲ್ಲಿದ್ದ ೯ ತಂಡಗಳ ಪೈಕಿ ಕೊನೇ ಸ್ಥಾನವನ್ನು ಪಡೆದು ನಿರಾಸೆ ಎದುರಿಸಿದರು.
ಇನ್ನು ಪುರುಷರ ಜಿಮ್ನಾಸ್ಟಿಕ್ ಸ್ಪರ್ಧೆಯಲ್ಲಿ ಆಲ್‌ರೌಂಡ್ ಸ್ಪರ್ಧೆಯಲ್ಲಿ ಯೋಗೇಶ್ವರ್ ಸಿಂಗ್ ಫೈನಲ್‌ಗೇರಿದ್ದಾರೆ. ಸೈಫ್ ತಂಬೋಲಿ ಹಾಗೂ ಸತ್ಯಜಿತ್ ಮೊಂಡಲ್ ತೇರ್ಗಡೆ ಹೊಂದುವಲ್ಲಿ ವಿಫಲರಾದರು. ಪುರುಷರ ತಂಡ ಸ್ಪರ್ಧೆಯಲ್ಲೂ ಭಾರತದ ಈ ಮೂವರು ಸ್ಪರ್ಧಿಗಳು ಫೈನಲ್‌ಗೆ ಟಿಕೆಟ್ ಗಿಟ್ಟಿಸುವಲ್ಲಿ ವಿಫಲರಾದರು.
ಆಲ್‌ರೌಂಡ್ ಸ್ಪರ್ಧೆಯ ಫೈನಲ್ ಭಾನುವಾರ ನಡೆಯಲಿದ್ದು, ವಾಲ್ಟ್ ವಿಭಾಗದ ಫೈನಲ್ ಸೋಮವಾರ ನಡೆಯಲಿದೆ.
ಇದನ್ನೂ ಓದಿ | CWG-2022 | ಚಾನು ಚಿನ್ನದ ಬಳಿಕ ಬಿಂದ್ಯಾರಾಣಿ ಬೆಳ್ಳಿ, ನಾಲ್ಕನೇ ಪದಕ ʻಎತ್ತಿತುʼ ಭಾರತ