Site icon Vistara News

CWG-2022 | ಈಜುಪಟು, ಕನ್ನಡಿಗ ಶ್ರೀಹರಿ ನಟರಾಜ್‌ ಫೈನಲ್ಸ್‌ಗೆ ಪ್ರವೇಶ

shrihari natarajan

ಬರ್ಮಿಂಗ್‌ಹ್ಯಾಮ್‌: ಕಾಮನ್ವೆಲ್ತ್‌ ಗೇಮ್ಸ್‌ CWG- 2022 ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಈಜುಪಟು ಹಾಗೂ ಕನ್ನಡಿಗ ಶ್ರೀಹರಿ ನಟರಾಜ್ ಫೈನಲ್ಸ್‌ಗೆ ಪ್ರವೇಶ ಪಡೆದಿದ್ದಾರೆ.

21 ವರ್ಷದ ಶ್ರೀಹರಿ ನಟರಾಜ್ ಅವರು ೧೦೦ ಮೀಟರ್ ಬ್ಯಾಕ್‌ ಸ್ಟ್ರೋಕ್‌ನ ಹೀಟ್ಸ್‌ನ ಸೆಮಿಫೈನಲ್ಸ್‌ನಲ್ಲಿ ೪ನೇ ಸ್ಥಾನ ಪಡೆದ ಅವರು ಫೈನಲ್ಸ್‌ಗೆ ಪ್ರವೇಶಿಸಿದರು.

೫೪. ೫೫ ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದ ಅವರು ಸೆಮಿಫೈನಲ್ ಹೀಟ್‌ ೨ರಲ್ಲಿ ೪ನೇ ಸ್ಥಾನ ಮತ್ತು ಮೂರನೇ ಸ್ಥಾನ ಹಾಗೂ ಒಟ್ಟಾರೆ ೮ ಕ್ವಾಲಿಫೈಯರ್‌ಗಳಲ್ಲಿ ೭ನೇ ಸ್ಥಾನ ಗಳಿಸಿದರು.

ಬರ್ಮಿಂಗ್‌ಹ್ಯಾಮ್‌ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಮೊದಲ ದಿನ ಫೈನಲ್‌ಗೆ ತಲುಪಿದ ಭಾರತದ ಏಕೈಕ ಅಥ್ಲೆಟ್‌ ಶ್ರೀಹರಿ ನಟರಾಜ್ ಆಗಿದ್ದಾರೆ. ಬೆಂಗಳೂರು ಮೂಲದ ಈಜುಪುಟು ವೈಯಕ್ತಿಕವಾಗಿ ೫೩.೭೭ ಸೆಕೆಂಡ್‌ನಲ್ಲಿ ಗುರಿಮುಟ್ಟಿದ ಬೆಸ್ಟ್‌ ದಾಖಲೆ ಹೊಂದಿದ್ದಾರೆ. ಅಂತಿಮ ಪಂದ್ಯ ಜುಲೈ ೩೧ಕ್ಕೆ ನಡೆಯಲಿದೆ.

Exit mobile version