Site icon Vistara News

CWG-22 | ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಚಿನ್ನ ಗೆದ್ದ ಸುಧೀರ್‌

ಬರ್ಮಿಂಗ್ಹಮ್: ಇಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್‌ ಕೂಟದ (CWG-22) ಹೆವಿವೇಟ್ ಪ್ಯಾರಾ ಪವರ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತದ ಸುಧೀರ್‌ ಚಿನ್ನದ ಪದಕವನ್ನು ಗೆದ್ದಿದ್ದಾರೆ.

27 ವರ್ಷದ ಸುಧೀರ್‌‌, ಹೆವಿವೇಟ್‌ ಪ್ಯಾರಾ ಪವರ್‌ಲಿಫ್ಟಿಂಗ್‌ ಸ್ಪರ್ಧೆಯಲ್ಲಿ 134.5 ಸ್ಕೋರ್‌ ಗಳಿಸುವ ಮೂಲಕ ಮೊದಲ ಸ್ಥಾನವನ್ನು ಪಡೆದಿದ್ದಾರೆ. ಮೊದಲ ಪ್ರಯತ್ನದಲ್ಲಿ ಸುಧೀರ್‌ 208 ಕೆ.ಜಿ ಎತ್ತಿದ್ದರು. ನಂತರ ಎರಡನೇ ಪ್ರಯತ್ನದಲ್ಲಿ 212 ಕೆ.ಜಿ ಎತ್ತುವ ಮೂಲಕ ಮುನ್ನಡೆ ಸಾಧಿಸಿದರು. ಈ ಹಿಂದೆ ದಕ್ಷಿಣ ಕೊರಿಯಾದಲ್ಲಿ ನಡೆದ ಏಷ್ಯಾ-ಒಷೆನಿಯಾ ಓಪನ್‌ ಕಪ್‌ ಚಾಂಪಿಯನ್‌ಶಿಪ್‌ನಲ್ಲಿ ಸುಧೀರ್‌ 214 ಕೆಜಿ ವೇಟ್‌ ಎತ್ತಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದರು. ಈ ಬಾರಿಯ ಕಾಮನ್ವೆಲ್ತ್‌ನಲ್ಲಿ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಸುಧೀರ್ ಹೊಸ ಇತಿಹಾಸವನ್ನು ಬರೆದಿದ್ದಾರೆ.

133.6 ಅಂಕ ಪಡೆದ ಇಕೆಚುಕ್ವು ಕ್ರಿಷ್ಚಿಯನ್‌ ಒಬಿಚುಕ್ವು ಎರಡನೇ ಸ್ಥಾನವನ್ನು ಗಳಿಸಿದ್ದಾರೆ ಹಾಗೂ 130.9 ಅಂಕ ಪಡೆದ ಮೈಕಿ ಯುಲೆ ಕಂಚಿನ ಪದಕವನ್ನು ಪಡೆದಿದ್ದಾರೆ.

ಸುಧೀರ್‌ ಅವರ ಈ ಗೆಲುವಿನಿಂದ ಭಾರತ ಒಟ್ಟು 20 ಪದಕಗಳನ್ನು ಪಡೆದಿದೆ. 6 ಚಿನ್ನ, 7ಬೆಳ್ಳಿ ಹಾಗೂ 7 ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿದೆ.

ಇದನ್ನೂ ಓದಿ : CWG- 2022 | ಕಾಮನ್ವೆಲ್ತ್‌ನಲ್ಲಿ ಮೊದಲ ಬೆಳ್ಳಿ ಪದಕ ಗೆದ್ದ ಭಾರತದ ಲಾಂಗ್‌ಜಂಪರ್‌ ಮುರಳಿ ಶ್ರೀಶಂಕರ್‌

Exit mobile version