Site icon Vistara News

D Gukesh: 17ನೇ ವಯಸ್ಸಿಗೇ ‘ಚೆಸ್‌ ಕ್ಯಾಂಡಿಡೇಟ್ಸ್‌’ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತದ ಗುಕೇಶ್!

D Gukesh

D Gukesh becomes youngest man to win Candidates, to challenge for World Championship

ಟೊರೊಂಟೊ: ಭಾರತದ ಉದಯೋನ್ಮುಖ ಚೆಸ್‌ ಗ್ರ್ಯಾಂಡ್‌ಮಾಸ್ಟರ್‌ ಡಿ. ಗುಕೇಶ್‌ (D Gukesh) ಅವರು ಇತಿಹಾಸ ಸೃಷ್ಟಿಸಿದ್ದಾರೆ. ಕೆನಡಾದ ಟೊರೊಂಟೊದಲ್ಲಿ ನಡೆದ ಪ್ರತಿಷ್ಠಿತ ಫಿಡೆ ಕ್ಯಾಂಡಿಡೇಟ್ಸ್‌ (FIDE Candidates) ಟೂರ್ನಾಮೆಂಟ್‌ನಲ್ಲಿ (Candidates Tournament) ಗೆಲುವು ಸಾಧಿಸುವ ಮೂಲಕ ಅವರು ವಿಶ್ವದಲ್ಲೇ ಅತಿ ಕಿರಿಯ ವಯಸ್ಸಿಗೆ ಫಿಡೆ ಕ್ಯಾಂಡಿಟೇಟ್ಸ್‌ ಟೂರ್ನಾಮೆಂಟ್‌ ಗೆದ್ದ ಚೆಸ್‌ ಪಟು ಎನಿಸಿದ್ದಾರೆ. ವಿಶೇಷ ಸಾಧನೆಗೆ ಭಾಜನರಾದ 17 ವರ್ಷದ ಡಿ. ಗುಕೇಶ್‌ ಅವರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕೂಡ ಅಭಿನಂದನೆ ಸಲ್ಲಿಸಿದ್ದಾರೆ.

ಫೈನಲ್‌ ಸುತ್ತಿನಲ್ಲಿ ಅಮೆರಿಕದ ಗ್ರ್ಯಾಂಡ್‌ಮಾಸ್ಟರ್‌ ಹಿಕಾರು ನಕಮುರಾ ವಿರುದ್ಧ ಡ್ರಾ ಸಾಧಿಸಿದ ಡಿ. ಗುಕೇಶ್‌, ಎಲ್ಲ ಸುತ್ತುಗಳ ಲೆಕ್ಕಾಚಾರದಲ್ಲಿ ವಿಜಯಿಯಾದರು. ಇದರೊಂದಿಗೆ ಗುಕೇಶ್‌ ಅವರು ಇದೇ ವರ್ಷ ನಡೆಯುವ ವರ್ಲ್ಡ್‌ ಚಾಂಪಿಯನ್‌ನಲ್ಲಿ ಡಿಂಗ್‌ ಲಿರೇನ್‌ ಅವರನ್ನು ಎದುರಿಸುವ ಅವಕಾಶ ಪಡೆದಿದ್ದಾರೆ. ಹಾಗಾಗಿ, ಎರಡು ಡಿ. ಗುಕೇಶ್‌ ಎರಡು ಸಾಧನೆ ಮಾಡಿದಂತಾಗಿದೆ.

ಡಿ. ಗುಕೇಶ್‌ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕೊಂಡಾಡಿದ್ದಾರೆ. “ಫಿಡೆ ಕ್ಯಾಂಡಿಡೇಟ್ಸ್‌ ಗೆಲ್ಲುವ ಮೂಲಕ ಅತಿ ಕಿರಿಯ ವಯಸ್ಸಿಗೆ ಇಂತಹ ಸಾಧನೆ ಮಾಡಿದ ಚೆಸ್‌ ಪಟು ಎಂಬ ಖ್ಯಾತಿಗೆ ಭಾಜನರಾದ ಡಿ. ಗುಕೇಶ್‌ ಅವರ ಬಗ್ಗೆ ದೇಶವೇ ಹೆಮ್ಮೆಪಡುತ್ತದೆ. ಭಾರತವು ಪ್ರತಿಭೆಗಳ ಆಗರವಾಗಿದೆ, ಛಲ, ತದೇಕಚಿತ್ತತೆಗೆ ಹೆಸರುವಾಸಿಯಾಗಿದೆ ಎಂಬುದಕ್ಕೆ ಡಿ. ಗುಕೇಶ್‌ ಅವರ ಸಾಧನೆಯೇ ನಿದರ್ಶನವಾಗಿದೆ. ಇದು ದೇಶದ ಕೋಟ್ಯಂತರ ಭಾರತೀಯರಿಗೆ ಸ್ಫೂರ್ತಿದಾಯಕವಾಗಿದೆ” ಎಂಬುದಾಗಿ ನರೇಂದ್ರ ಮೋದಿ ಪೋಸ್ಟ್‌ ಮಾಡಿದ್ದಾರೆ.

17 ವರ್ಷದ ಗ್ರ್ಯಾಂಡ್‌ಮಾಸ್ಟರ್ ಗುಕೇಶ್ ಡಿ ಅವರು ಫಿಡೆ ವಿಶ್ವ ಶ್ರೇಯಾಂಕದಲ್ಲಿ ಭಾರತದ ನಂಬರ್ ಒನ್ ಚೆಸ್ ಆಟಗಾರನಾಗಿ ಹೊರಹೊಮ್ಮುವ ಮೂಲಕ 2023ರಲ್ಲಿ ಮೈಲುಗಲ್ಲು ಸ್ಥಾಪಿಸಿದ್ದರು. ಈ ಮೂಲಕ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಅವರ ಸರ್ವಕಾಲಿಕ 37 ವರ್ಷಗಳ ದಾಖಲೆಯನ್ನು ಮುರಿದಿದ್ದರು. ಜುಲೈ 1986ರಿಂದ ಆನಂದ್ ಅವರು ಭಾರತದ ನಂ.1 ಚೆಸ್‌ ಆಟಗಾರರಾಗಿ ಮೆರೆದಿದ್ದರು. ಆದರೆ ಕಳೆದ ವರ್ಷ ಗುಕೇಶ್‌ ಅವರು ನೂತನ ಸಾಮ್ರಾಟನಾಗಿ ಹೊರಹೊಮ್ಮಿದ್ದರು. ಫಿಡೆ (FIDE) ಬಿಡುಗಡೆ ಮಾಡಿದ ಶ್ರೇಯಾಂಕ​ ಪಟ್ಟಿಯಲ್ಲಿ ಗುಕೇಶ್(2758) ರೇಟಿಂಗ್​ ಅಂಕ) 8ನೇ ಸ್ಥಾನ ಪಡೆಯುವ ಮೂಲಕ ಆನಂದ್​ ಅವರನ್ನು ಹಿಂದಿಕ್ಕಿದ್ದರು.

ಇದನ್ನೂ ಓದಿ: Garry Kasparov: ವಿಶ್ವದ ಮಾಜಿ ನಂ. 1 ಚೆಸ್‌ ಆಟಗಾರನನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಿದ ರಷ್ಯಾ; ಕಾರಣವೇನು?

Exit mobile version