Site icon Vistara News

Daniel Vettori: ಪಾತಾಳಕ್ಕೆ ಕುಸಿದ ಸನ್​ರೈಸರ್ಸ್​ ಹೈದರಾಬಾದ್​ ತಂಡಕ್ಕೆ ವೆಟೋರಿ ನೂತನ ಕೋಚ್​

New Zealand former cricketer

ಹೈದರಾಬಾದ್​: ಸ್ಟಾರ್​ ಆಟಗಾರರನ್ನು ಹೊಂದಿದ್ದರು ಕಳೆದ ಮೂರು ವರ್ಷಗಳಿಂದ ತೀರಾ ಕಳೆ ಪ್ರದರ್ಶನ ತೋರುತ್ತಿರುವ ಸನ್​ರೈಸರ್ಸ್​ ಹೈದರಾಬಾದ್(Sunrisers Hyderabad)​ ತಂಡಕ್ಕೆ ನೂತನ ಕೋಚ್​ ಆಯ್ಕೆಯಾಗಿದ್ದಾರೆ. ಆರ್​ಸಿಬಿ ತಂಡದ ಮಾಜಿ ಆಟಗಾರ ಮತ್ತು ಕೋಚ್​ ಆಗಿದ್ದ ಕಿವೀಸ್​ನ ಡೇನಿಯಲ್ ವೆಟೋರಿ(Daniel Vettori) ಮುಖ್ಯ ಕೋಚ್​ ಆಗಿ ನೇಮಕಗೊಂಡಿದ್ದಾರೆ. ಈ ಹಿಂದೆ ಕೋಚ್​ ಆಗಿದ್ದ ಬ್ರಿಯಾನ್​ ಲಾರಾ(Brian Lara) ಅವರನ್ನು ಕೈಬಿಡಲಾಗಿದೆ.

ಲಾರಾಗೆ ಕೊಕ್​

16ನೇ ಆವೃತ್ತಿಯಲ್ಲಿ ಹೈದರಾಬಾದ್​ ತಂಡ ಅನೇಕ ಆಟಗಾರರ ಬದಲಾವಣೆ ಮಾಡಿ ಕಣಕ್ಕಿಳಿಸಿದರೂ ಯಾವುದೇ ಪ್ರಯೋಜನವಾಗಿರಲ್ಲಿ. ಅಂಕಪಟ್ಟಿಯಲ್ಲಿ ಆಡಿದ 14 ಪಂದ್ಯಗಳಲ್ಲಿ ಕೇವಲ 4 ಪಂದ್ಯಗಳನ್ನು ಮಾತ್ರ ಗೆದ್ದಿತ್ತು. ಉಳಿದ 10 ಪಂದ್ಯಗಳಲ್ಲಿ ಸೋಲು ಕಂಡಿತ್ತು. ತಂಡದ ಈ ಪ್ರದರ್ಶನ ಕಂಡು ಫ್ರಾಂಚೈಸಿ ಮಾಲಕಿ ಕಾವ್ಯ ಮಾರನ್​ ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸಿದ್ದರು. ಪ್ರತಿ ಪಂದ್ಯದಕ್ಕೂ ಹಾಜರ್​ ಆಗುತ್ತಿದ್ದ ಅವರು ಕೊನೆಗೆ ತನ್ನ ತಂಡದ ಹೀನಾಯ ಪ್ರದರ್ಶನ ಕಂಡು ಅಂತಿಮ ಕ್ಷಣದಲ್ಲಿ ಕೆಲ ಪಂದ್ಯಗಳಿಗೆ ಗೈರು ಹಾಜರಾಗಿದ್ದರು. ಇದೀಗ ವೆಟೋರಿ ಮಾರ್ಗದರ್ಶನದಲ್ಲಿ ತಂಡದ ಲಕ್​ ಬದಲಾದಿತೇ ಎಂದು ಕಾದು ನೋಡಬೇಕಿದೆ.

ಬೆಂಗಳೂರು ನಂಟು

ವೆಟ್ಟೋರಿ ಅವರನ್ನು ಪ್ರಮುಖ ಕೋಚ್ ಆಗಿ ನೇಮಿಸಿಕೊಂಡಿರುವುದರ ಬಗ್ಗೆ ಸನ್‌ರೈಸರ್ಸ್​ ಹೈದರಾಬಾದ್​ ಟ್ವಿಟರ್​ ಹ್ಯಾಂಡಲ್​ನಲ್ಲಿ ಟ್ವೀಟ್​ ಮಾಡಿದೆ. 2011ರ ಐಪಿಎಲ್‌ ಆವೃತ್ತಿಗೆ ವೆಟೋರಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕರಾಗಿದ್ದರು. 28 ಪಂದ್ಯಗಳಿಗೆ ತಂಡವನ್ನು ಮುನ್ನಡೆಸಿದ್ದದಾಗ 15 ಗೆಲುವುಗಳು ಲಭಿಸಿತ್ತು. 2014 ರಿಂದ 2018 ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ತರಬೇತುದಾರರಾಗಿದ್ದ ವೆಟೋರಿ ಅವರದಿಯಲ್ಲಿ 2016ರಲ್ಲಿ ಆರ್‌ಸಿಬಿ ಫೈನಲ್ ಪ್ರವೇಶಿಸಿ ರನ್ನರ್ ಅಪ್ ಸ್ಥಾನ ಪಡೆದಿತ್ತು. ಇದೀಗ ಎರಡನೇ ಕೋಚಿಂಗ್ ಬಾರಿ ಐಪಿಎಲ್​ನಲ್ಲಿ ಕೋಚಿಂಗ್​ ಹುದ್ದೆ ಅಲಂಕರಿಸುತ್ತಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಹಲವು ಸಾಧನೆ

ವೆಟೋರಿ 2011ರಿಂದ ಕಿವೀಸ್‌ ತಂಡದ ನಾಯಕರಾಗಿದ್ದರು. 32 ಟೆಸ್ಟ್‌ ಮತ್ತು 82 ಏಕದಿನ ಪಂದ್ಯಗಳಿಗೆ ತಂಡವನ್ನು ಮುನ್ನಡೆಸಿದ್ದಾರೆ. ಜತೆಗೆ, 34 ಟ್ವೆಂಟಿ–20 ಪಂದ್ಯಗಳನ್ನು ಆಡಿದ್ದು 38 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಒಟ್ಟು 295 ಏಕದಿನ ಪಂದ್ಯಗಳಿಂದ 305 ವಿಕೆಟ್‌ಗಳನ್ನು ಪಡೆದಿದ್ದಾರೆ. 113 ಟೆಸ್ಟ್‌ ಆಡಿರುವ ನ್ಯೂಜಿಲೆಂಡ್‌ನ ಆಟಗಾರ ಒಟ್ಟು 362 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಜತೆಗೆ ಟೆಸ್ಟ್‌ನಲ್ಲಿ ಹೆಚ್ಚು ವಿಕೆಟ್‌ ಉರುಳಿಸಿದ ಕಿವೀಸ್‌ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಟೆಸ್ಟ್‌ ಮಾದರಿಯಲ್ಲಿ 4000ಕ್ಕಿಂತಲೂ ಹೆಚ್ಚು ರನ್‌ ಮತ್ತು 300ಕ್ಕಿಂತಲೂ ಅಧಿಕ ವಿಕೆಟ್‌ ಪಡೆದ ವಿಶ್ವದ ಮೂರನೇ ಕ್ರಿಕೆಟಿಗ ಎನ್ನುವ ಕೀರ್ತಿಯೂ ವೆಟೋರಿ ಹೆಸರಿನಲ್ಲಿದೆ.

ಇದನ್ನೂ ಓದಿ RCB Team : ಆರ್​ಸಿಬಿ ಅಭಿಮಾನಿಗಳಿಗೆ ಡಬಲ್ ಖುಷಿ; ತಂಡಕ್ಕೆ ಮತ್ತೆ ಸೇರ್ಪಡೆಯಾಗುತ್ತಾರೆ ಎಬಿಡಿ!

ಆಸೀಸ್​ ತಂಡಕ್ಕೂ ಕೋಚಿಂಗ್​

ಆಸ್ಟ್ರೇಲಿಯಾದ ಸಹಾಯಕ ಮತ್ತು ಸ್ಪಿನ್ ಬೌಲಿಂಗ್ ತರಬೇತುದಾರರಾಗಿ ವೆಟೋರಿ ಕಾರ್ಯನಿರ್ವಹಿಸಿದ್ದಾರೆ. ಅವರ ಬೌಲಿಂಗ್​ ಮಾರ್ಗದರ್ಶನದಲ್ಲೇ ಟಾಡ್ ಮರ್ಫಿ ಅವರು ಭಾರತದ ವಿರುದ್ಧದ ಚೊಚ್ಚಲ ಟೆಸ್ಟ್‌ನಲ್ಲಿ 7 ವಿಕೆಟ್‌ಗಳನ್ನು ಪಡೆದು ಮಿಂಚಿದ್ದು. ನಾಥಾನ್ ಲಿಯೋನ್​ಗೂ ಬೌಲಿಂಗ್​ ಕೋಚ್​ ಆಗಿ ಸಹಾಯ ಮಾಡಿದ್ದರು. ಒಟ್ಟಾರೆ ಪಾತಾಳಕ್ಕೆ ಕುಸಿದ ಹೈದರಾಬಾದ್​ ತಂಡವನ್ನು ಮುಂದಿನ ಆವೃತ್ತಿಯಲ್ಲಿ ಮೇಲೆತ್ತುವ ದೊಡ್ಡ ಜವಾಬ್ದಾರಿ ವೆಟೋರಿ ಹೆಗಲ ಮೇಲಿದೆ.

Exit mobile version