Site icon Vistara News

Danish Kaneria : ಬೋಲೊ ಜೈ ಶ್ರೀರಾಮ್​ ಎಂದ ಪಾಕಿಸ್ತಾನದ ಕ್ರಿಕೆಟಿಗ

ವಿಸ್ತಾರ ನ್ಯೂಸ್​ ಬೆಂಗಳೂರು: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಯಾಗುವುದಕ್ಕೆ ಭಾರತೀಯರೆಲ್ಲರೂ ಕಾಯುತ್ತಿದ್ದಾರೆ. ರಾಮನ ಭಕ್ತರು ತಮ್ಮ ಭಕ್ತಿಯನ್ನು ವ್ಯಕ್ತಪಡಿಸಲು ನಾನಾ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಏತನ್ಮಧ್ಯೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ದಾನಿಶ್ ಕನೇರಿಯಾ (Danish Kaneria) ಅವರು ರಾಮ ಮಂದಿರ ಉದ್ಘಾಟನೆಯ ಬಗ್ಗೆ ತಮ್ಮ ಉತ್ಸಾಹ ವ್ಯಕ್ತಪಡಿಸಿದ್ದಾರೆ. ಅವರು ಪಾಕಿಸ್ತಾನದಲ್ಲಿರುವ ಹಿಂದೂ ಧರ್ಮೀಯ ಕ್ರಿಕೆಟರ್ ಆಗಿದ್ದಾರೆ. ಅವರು ಭಗವಾಧ್ಬಜ ಹಿಡಿದು ಸಂಭ್ರಮಿಸುತ್ತಿರುವ ಚಿತ್ರವೊಂದು ವೈರಲ್ ಆಗಿದೆ. ಚಿತ್ರದಲ್ಲಿ ಕನೇರಿಯಾ ಭಗವಾನ್ ರಾಮ ಮತ್ತು ದೇವಾಲಯದ ಚಿತ್ರಗಳಿಂದ ಅಲಂಕರಿಸಲ್ಪಟ್ಟ ಕೇಸರಿ ಧ್ವಜದ ಪಕ್ಕದಲ್ಲಿ ನಿಂತಿರುವುದನ್ನು ನೋಡಬಹುದು.

ದಾನಿಶ್​ ಕನೇರಿಯಾ ಭಗವಾನ್ ರಾಮನಿಗೆ ಸಮರ್ಪಿತವಾದ ಭವ್ಯ ದೇವಾಲಯದ ಉದ್ಘಾಟನೆಯ ಬಗ್ಗೆ ಈ ಹಿಂದೆಯೂ ಸಂಭ್ರಮ ವ್ಯಕ್ತಪಡಿಸಿದ್ದರು. ಅದರ ಉದ್ಘಾಟನೆಗೆ ಎಂಟು ದಿನಗಳು ಬಾಕಿ ಇದೆ. ಹೀಗಾಗಿ ಭಗವಾನ್ ರಾಮನ ಚಿತ್ರ ಮತ್ತು ದೇವಾಲಯದ ಹಿನ್ನೆಲೆಯಿಂದ ಅಲಂಕರಿಸಲ್ಪಟ್ಟ ಧ್ವಜವನ್ನು ಹಿಡಿದಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಈ ಪೋಸ್ಟ್​ಗೆ ದಾನಿಶ್ ಕನೇರಿಯಾ “ನಮ್ಮ ರಾಜ ಶ್ರೀ ರಾಮನ ಭವ್ಯ ದೇವಾಲಯ ಸಿದ್ಧವಾಗಿದೆ, ಕಾಯುವಿಕೆ ಕಾಲ ಕೇವಲ 8 ದಿನಗಳು! ಜೈ ಜೈ ಶ್ರೀ ರಾಮ್ ಎಂದು ಹೇಳಿ. (ಹಮಾರೆ ರಾಜ ಶ್ರೀ ರಾಮ್ ಕಾ ಭವ್ಯ ಮಂದಿರ ಹೈ ತೈಯಾರ್, ಅಬ್ ಸಿರ್ಫ್ ಹೈ 8 ದಿನ್ ಕಾ ಇಂತ್​ಜಾರ್. ಬೋಲೋ ಜೈ ಶ್ರೀ ರಾಮ್) ಎಂದು ಶೀರ್ಷಿಕೆ ಕೊಟ್ಟಿದ್ದಾರೆ.

ಪಾಕಿಸ್ತಾನ ಕ್ರಿಕೆಟ್​​ನಲ್ಲಿ ಕನೇರಿಯಾ ವಿರುದ್ಧ ತಾರತಮ್ಯ

ಕರಾಚಿ ಮೂಲದ ದಾನಿಶ್ ಕನೇರಿಯಾ 2000ರಿಂದ 2010ರವರೆಗೆ ಪಾಕಿಸ್ತಾನ ರಾಷ್ಟ್ರೀಯ ಕ್ರಿಕೆಟ್ ತಂಡದ ಮುಖ್ಯ ಸ್ಪಿನ್ ಬೌಲರ್ ಆಗಿ ಸೇವೆ ಸಲ್ಲಿಸಿದ್ದರು. ತಮ್ಮ ವೃತ್ತಿಜೀವನದುದ್ದಕ್ಕೂ, ಕನೇರಿಯಾ ಇಸ್ಲಾಂ ದೇಶದಲ್ಲಿ ತಾವೆದುರಿಸಿದ ತಾರತಮ್ಯವನ್ನು ಇತ್ತೀಚಿಗೆ ಹೇಳಿಕೊಂಡಿದ್ದರು. ಸಂದರ್ಶನವೊಂದರಲ್ಲಿ, ಇಸ್ಲಾಂಗೆ ಮತಾಂತರಗೊಳ್ಳಲು ಕೆಲವು ಸಹ ಆಟಗಾರರಿಂದ ಒತ್ತಾಯ ಬಂದಿತ್ತು ಎಂದು ದೂರಿದ್ದರು. ಕ್ರಿಕೆಟ್​ನಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಿದ ಎರಡನೇ ಹಿಂದೂ ಎಂಬ ಹೆಗ್ಗಳಿಕೆಗೆ ಕನೇರಿಯಾ ಅವರದ್ದು . ಟೆಸ್ಟ್ ಕ್ರಿಕೆಟ್​ನಲ್ಲಿ 250 ಕ್ಕೂ ಹೆಚ್ಚು ವಿಕೆಟ್​ಗಳ ಪ್ರಭಾವಶಾಲಿ ಪ್ರದರ್ಶನ ನೀಡಿದ್ದರು.

ಇದನ್ನೂ ಓದಿ : Ram Mandir: ನಾಳೆಯಿಂದ ರಾಮ ಮಂದಿರ ಉದ್ಘಾಟನೆಯ ಧಾರ್ಮಿಕ ಕಾರ್ಯಕ್ರಮಗಳು ಶುರು

ಜನವರಿ 22 ರಂದು ಮೂರು ಅಂತಸ್ತಿನ ರಾಮ ಮಂದಿರದ ಉದ್ಘಾಟನೆ ನಡೆಯಲಿದೆ. ಈ ದೇವಾಲಯದ ಪ್ರಮುಖ ಆಕರ್ಷಣೆಯೆಂದರೆ ಭಗವಾನ್ ರಾಮನ ಭವ್ಯ ವಿಗ್ರಹ. ಮೊದಲ ಮಹಡಿಯಲ್ಲಿ ಶ್ರೀ ರಾಮ್ ದರ್ಬಾರ್ ಇದೆ. ಈ ದೇವಾಲಯವನ್ನು ಐದು ವಿಭಿನ್ನ ಮಂಟಪಗಳೊಂದಿಗೆ ಸಜ್ಜಾಗಿದೆ. ನೃತ್ಯ ಮಂಟಪ, ಬಣ್ಣದ ಪೆವಿಲಿಯನ್, ಸಭಾ ಪೆವಿಲಿಯನ್, ಜೊತೆಗೆ ಪ್ರಾರ್ಥನೆ ಮತ್ತು ಕೀರ್ತನ್ ಪೆವಿಲಿಯನ್ ಅನ್ನು ಒಳಗೊಂಡಿದೆ.

Exit mobile version