Site icon Vistara News

INDvsSL | ದಸುನ್ ಶನಕ, ಕುಸಲ್​ ಮೆಂಡಿಸ್​ ಅರ್ಧಶತಕ; ಭಾರತ ತಂಡದ ಗೆಲುವಿಗೆ 207 ರನ್ ಬೃಹತ್​ ಸವಾಲು

ಪುಣೆ : ಟಿ20 ಸರಣಿಯ ಎರಡನೇ ಪಂದ್ಯದಲ್ಲಿ (INDvsSL) ಭಾರತ ತಂಡದ ಗೆಲುವಿಗೆ ಪ್ರವಾಸಿ ಶ್ರೀಲಂಕಾ 207 ರನ್​ಗಳ ಬೃಹತ್​ ಮೊತ್ತದ ಗುರಿಯನ್ನೊಡ್ಡಿದೆ. ಆರಂಭದಿಂದ ಕೊನೇ ತನಕವೂ ಪ್ರವಾಸಿ ಬಳಗದ ಬ್ಯಾಟರ್​ಗಳು ಸ್ಫೋಟಕ ಬ್ಯಾಟಿಂಗ್​ ನಡೆಸಿದರು. ಅಕ್ಷರ್ ಪಟೇಲ್​ (24 ರನ್​ಗಳಿಗೆ 2 ವಿಕೆಟ್​) ಹಾಗೂ ಉಮ್ರಾನ್​ ಮಲಿಕ್​ (48 ರನ್​ಗಳಿಗೆ 3 ವಿಕೆಟ್​) ಬೌಲಿಂಗ್​ನಲ್ಲಿ ಉತ್ತಮ ಪ್ರದರ್ಶನ ತೋರಿದರು.

ಪುಣೆಯ ಮಹಾರಾಷ್ಟ್ರ ಕ್ರಿಕೆಟ್​ ಅಸೋಸಿಯೇಷನ್​ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್​ ಗೆದ್ದ ಭಾರತ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ದಸುನ್ ಶನಕ ನೇತೃತ್ವದ ಶ್ರೀಲಂಕಾ ಬಳಗ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 206 ರನ್​ ಪೇರಿಸಿತು. ಇನಿಂಗ್ಸ್​ನಲ್ಲಿ ಭಾರತದ ಬೌಲರ್​ಗಳು ಅಸಾಹಯಕರಂತೆ ಕಂಡು ಬಂದರು.

ಬ್ಯಾಟಿಂಗ್ ಆರಂಭಿಸಿದ ಲಂಕಾ ಪರ ಆರಂಭಿಕ ಬ್ಯಾಟರ್​ಗಳಾದ ಪಾಥಮ್​ ನಿಸ್ಸಂಕ (33) ಹಾಗೂ ಕುಸಲ್​ ಮೆಂಡಿಸ್​ (52) ಉತ್ತಮ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್​ಗೆ 80 ರನ್​ಗಳ ಜತೆಯಾಟ ನೀಡಿತು. ಭಾರತ ತಂಡ ಎದುರಾಳಿ ಬ್ಯಾಟರ್​ಗಳಿಗೆ ಕಡಿವಾಣ ಹಾಕಿದರು. ಭಾನುನಾ ರಾಜಪಕ್ಷ (3), ಧನಂಜಯ ಡಿ ಸಿಲ್ವಾ (3) ವಿಕೆಟ್​ ಬೇಗನೆ ಉರುಳಿಸಿದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಚರಿತ್​ ಅಸಲಂಕಾ (37) ಸ್ವಲ್ಪ ಹೊತ್ತು ಸಿಡಿದರು. ಕೊನೆಯಲ್ಲಿ ನೋ ಬಾಲ್​ ಜೀವದಾನ ಸಮೇತ ನಾಯಕ ದಸುನ್​ ಶನಕ ಸ್ಫೋಟಕ ಬ್ಯಾಟಿಂಗ್ ನಡೆಸಿ 22 ಎಸೆತಗಳಿಗೆ 56 ರನ್​ ಬಾರಿಸಿದರು.

ಇದನ್ನೂ ಓದಿ | IND VS SL | ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ಪದಾರ್ಪಣೆ ಮಾಡುವ ನಿರೀಕ್ಷೆಯಲ್ಲಿ ರಾಹುಲ್​ ತ್ರಿಪಾಠಿ!

Exit mobile version