Site icon Vistara News

ICC World Cup 2023: ಭಾರತ-ಪಾಕ್ ಪಂದ್ಯಕ್ಕೆ ಡೇಟ್​ ಫಿಕ್ಸ್​;​ ಕಿವೀಸ್​-ಇಂಗ್ಲೆಂಡ್​ಗೆ ಮೊದಲ ಪಂದ್ಯ

icc world cup 2023

ಮುಂಬಯಿ: ಭಾರತದ ಆತಿಥ್ಯದಲ್ಲಿ ನಡೆಯಲಿರುವ ಬಹುನಿರೀಕ್ಷಿತ ಏಕದಿನ ವಿಶ್ವ ಕಪ್​ ಟೂರ್ನಿಯ(ICC World Cup 2023) ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಮತ್ತು ನ್ಯೂಜಿಲ್ಯಾಂಡ್​ ತಂಡಗಳು ಮುಖಾಮುಖಿಯಾಗಲಿವೆ ಎಂದು ವರದಿಯಾಗಿದೆ. ಈ ಪಂದ್ಯ ಅಕ್ಟೋಬರ್​ 5 ರಂದು ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ. ಇದರ ಜತೆಗೆ ಭಾರತ ಮತ್ತು ಪಾಕ್​ ವಿರುದ್ಧದ ಪಂದ್ಯದ ದಿನಾಂಕವು ನಿಗದಿಯಾಗಿದೆ.

ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಪಾಕಿಸ್ತಾನ ಮತ್ತು ಭಾರತ ತಂಡಗಳ ಮೊದಲ ಕಾದಾಟ ಅಕ್ಟೋಬರ್​ 15ರಂದು ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ ಎಂದು ವರದಿಯಾಗಿದೆ. ಆದರೆ ಏಷ್ಯಾ ಕಪ್​ ಆತಿಥ್ಯ ಕೈತಪ್ಪಿದರೆ ಭಾರತದಲ್ಲಿ ನಡೆಯುವ ಈ ವಿಶ್ವ ಕಪ್​ನಲ್ಲಿ ಪಾಕ್​ ತಂಡ ಪಾಲ್ಗೊಳ್ಳುವುದಿಲ್ಲ ಎಂದು ಪಾಕ್​ ಕ್ರಿಕೆಟ್​ ಮಂಡಳಿ ಈಗಾಗಲೇ ಎಚ್ಚರಿಕೆ ನೀಡಿದೆ. ಹೀಗಾಗಿ ಪಾಕ್​ ಮತ್ತು ಭಾರತ ವಿರುದ್ಧದ ಈ ಪಂದ್ಯ ನಡೆಯಲಿದೆಯಾ ಎಂಬ ಅನುಮಾನವೂ ಕೂಡ ಕಾಡಿದೆ.

ಒಟ್ಟಾರೆ ಪಾಕಿಸ್ತಾನ ತಂಡ ಭಾರತದ ನೆಲದಲ್ಲಿ 7 ವರ್ಷಗಳ ಬಳಿಕ ಕ್ರಿಕೆಟ್​ ಆಡಲು ವೇದಿಕೆಯೊಂದು ಸಜ್ಜಾದಂತಿದೆ. ಪಾಕಿಸ್ತಾನ 2016ರಲ್ಲಿ ಕೊನೆಯದಾಗಿ ಭಾರತದ ನೆಲದಲ್ಲಿ ಪಂದ್ಯ ಆಡಿತ್ತು. ಇದಾದ ಬಳಿಕ ರಾಜತಾಂತ್ರಿಕ ಕಾರಣದಿಂದ ಉಭಯ ತಂಡಗಳು ಭಾರತ ಅಥವಾ ಪಾಕ್​ ನೆಲದಲ್ಲಿ ಪಂದ್ಯಗಳನ್ನು ಆಡಿಲ್ಲ.

ಇದನ್ನೂ ಓದಿ ICC World Cup 2023: ಭಾರತ-ಪಾಕಿಸ್ತಾನ ವಿರುದ್ಧದ ವಿಶ್ವ ಕಪ್​ ಪಂದ್ಯಕ್ಕೆ ಮೈದಾನ ಪಿಕ್ಸ್!​ ಎಲ್ಲಿ ನಡೆಯಲಿದೆ ಪಂದ್ಯ?

ವರದಿಗಳ ಪ್ರಕಾರ, ಅಕ್ಟೋಬರ್​ 5ರಂದು ವಿಶ್ವಕಪ್ ಟೂರ್ನಿ​ ಆರಂಭವಾಗಲಿದ್ದು, ನವೆಂಬರ್​ 19ಕ್ಕೆ ಅಹಮದಾಬಾದ್​ನಲ್ಲಿ(Ahmedabad) ಫೈನಲ್​ ನಡೆಯಲಿದೆ. ಬಿಸಿಸಿಐ ಈ ಪ್ರತಿಷ್ಠಿತ ಟೂರ್ನಿಗಾಗಿ ಕನಿಷ್ಠ 10ಕ್ಕೂ ಹೆಚ್ಚು ಸ್ಥಳಗಳನ್ನು ಶಾರ್ಟ್‌ಲಿಸ್ಟ್ ಮಾಡಿದೆ. ಬೆಂಗಳೂರು, ಚೆನ್ನೈ, ದೆಹಲಿ, ಧರ್ಮಶಾಲಾ, ಗುವಾಹಟಿ, ಹೈದರಾಬಾದ್, ಕೋಲ್ಕೊತಾ, ಲಕ್ನೋ, ಇಂದೋರ್, ರಾಜ್‌ಕೋಟ್ ಮತ್ತು ಮುಂಬೈ ಈ ಪಟ್ಟಿಯಲ್ಲಿ ಸೇರಿವೆ ಎನ್ನಲಾಗಿದೆ. ಒಟ್ಟು ಹತ್ತು ತಂಡಗಳನ್ನು ಎರಡು ಗುಂಪುಗಳಾಗಿ ಆಡಿಸಲಾಗುತ್ತದೆ. ಹೀಗಾಗಿ 46 ದಿನಗಳಲ್ಲಿ 48 ಪಂದ್ಯಗಳು ನಡೆಯಲಿವೆ. ಅಕ್ಟೋಬರ್-ನವೆಂಬರ್​ನಲ್ಲಿ ಕೆಲ ಪ್ರದೇಶಗಳಲ್ಲಿ ಹಿಂಗಾರು ಮಳೆ ಸಾಧ್ಯತೆ ಇರುವುದರಿಂದ ಇದರ ಬಗ್ಗೆಯೂ ಚಿಂತಿಸಿ ಬಿಸಿಸಿಐ ಅಂತಿಮ ನಿರ್ಧಾರವನ್ನು ಶಿಘ್ರದಲ್ಲೇ ಪ್ರಕಟಿಸಲಿದೆ ಎಂದು ಕ್ರಿಕ್​ಇನ್ಫೋ ವರದಿ ಮಾಡಿದೆ.

Exit mobile version