Site icon Vistara News

David Warner : ಹೊಸ ದಾಖಲೆ ಬರೆದ ಡೇವಿಡ್ ವಾರ್ನರ್​

David warner

ಮೆಲ್ಬೋರ್ನ್​​: ಇಲ್ಲಿ ನಡೆಯುತ್ತಿರುವ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್​ ಡೇವಿಡ್ ವಾರ್ನರ್ (David Warner) ಅಮೋಘ ಸಾಧನೆ ಮಾಡಿದ್ದಾರೆ. ಆಸ್ಟ್ರೇಲಿಯಾದ 2ನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ಅವರಿಗಿಂತ ಲೆಜೆಂಡರಿ ರಿಕಿ ಪಾಂಟಿಂಗ್ ಮಾತ್ರ ಮುಂದಿದ್ದಾರೆ. ಆರಂಭಿಕ ಆಟಗಾರ 2 ನೇ ಟೆಸ್ಟ್​​ನಲ್ಲಿ ಉತ್ತಮ ಆರಂಭವನ್ನು ಪಡೆದಿದ್ದು ಭೋಜನ ವಿರಾಮಕ್ಕೆ ಮೊದಲು ಆರಂಭಿಕ ಪಾಲುದಾದ ಖವಾಜಾ ಅವರೊಂದಿಗೆ ಬಲವಾದ ಪಾಲುದಾರಿಕೆ ಪಡೆದುಕೊಂಡಿದ್ದಾರೆ.

460 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ವಾರ್ನರ್ 42.63ರ ಸರಾಸರಿಯಲ್ಲಿ 18,502 ರನ್ ಗಳಿಸಿದ್ದಾರೆ. ಆಸ್ಟ್ರೇಲಿಯಾದ ಮಾಜಿ ನಾಯಕ ಪಾಂಟಿಂಗ್ ಮಾತ್ರ 667 ಇನಿಂಗ್ಸ್​ಗಳಿಂದ 27,368 ರನ್ ಗಳಿಸಿದ್ದಾರೆ. ಸ್ಟೀವ್ ವಾ, ಅಲನ್ ಬಾರ್ಡರ್, ಮೈಕಲ್ ಕ್ಲಾರ್ಕ್ ಈ ಪಟ್ಟಿಯಲ್ಲಿರುವ ಇತರ ದಂತಕಥೆಗಳು.

ಮೈಕಲ್ ಕ್ಲಾರ್ಕ್ ದಾಖಲೆ ಮುರಿದ ಡೇವಿಡ್ ವಾರ್ನರ್

ಪರ್ತ್​: ಇಲ್ಲಿನ ನಡೆಯುತ್ತಿರುವ ಪಾಕಿಸ್ತಾನ ವಿರುದ್ಧ ಟೆಸ್ಟ್​ ಪಂದ್ಯದಲ್ಲಿ ಅದ್ಭುತ ಶತಕ ಬಾರಿಸುವ ಮೂಲಕ ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟರ್​ ಡೇವಿಡ್ ವಾರ್ನರ್ (David Warner Warner) ರೆಡ್-ಬಾಲ್ ಕ್ರಿಕೆಟ್​ನಲ್ಲಿ ತಮ್ಮ ಕೊನೇ ಪಂದ್ಯವನ್ನು ಆದ್ಭುತವಾಗಿ ಆಡಿದರು. ಪಂದ್ಯದಲ್ಲಿ ವಾರ್ನರ್ 211 ಎಸೆತಗಳಲ್ಲಿ 164 ರನ್ ಗಳಿಸಿ, ತಮ್ಮ 26 ನೇ ಟೆಸ್ಟ್ ಶತಕವನ್ನು ಪೂರ್ಣಗೊಳಿಸಿದರು. ಡೇವಿಡ್ ವಾರ್ನರ್ ಅವರ ಇನ್ನಿಂಗ್ಸ್​ನಲ್ಲಿ 16 ಬೌಂಡರಿಗಳು ಮತ್ತು ನಾಲ್ಕು ಸಿಕ್ಸರ್​ಗಳು ಸೇರಿಕೊಂಡಿದೆ. ಅವರು ಆರಂಭದಿಂದಲೂ ಪಾಕಿಸ್ತಾನದ ಬೌಲಿಂಗ್ ದಾಳಿಯನ್ನು ಭರ್ಜರಿಯಾಗಿ ಎದುರಿಸಿದರು.

ತಮ್ಮ ಇನ್ನಿಂಗ್ಸ್​ನಲ್ಲಿ ಅವರು ಆಸೀಸ್​ ತಂಡ ಆರಂಭಿಕ ಆಟಗಾರ ಮ್ಯಾಥ್ಯೂ ಹೇಡನ್ ಮತ್ತು ಮಧ್ಯಮ ಕ್ರಮಾಂಕದ ಮೈಕಲ್ ಕ್ಲಾರ್ಕ್ ಅವರನ್ನು ಹಿಂದಿಕ್ಕಿ ಆಟದ ದೀರ್ಘ ಸ್ವರೂಪದಲ್ಲಿ ಆಸ್ಟ್ರೇಲಿಯಾ ಪರ ಅತಿ ಹೆಚ್ಚು ರನ್ ಗಳಿಸಿದ ಐದನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಡೇವಿಡ್ ವಾರ್ನರ್ ಈಗ 45.06 ಸರಾಸರಿಯಲ್ಲಿ 8651 ರನ್ ಗಳಿಸಿದ್ದು, ಟೆಸ್ಟ್ ಕ್ರಿಕೆಟ್​ನಲ್ಲಿ ಆಸ್ಟ್ರೇಲಿಯಾ ಪರ ಅತಿ ಹೆಚ್ಚು ರನ್ ಗಳಿಸಿದ ಐದನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದು ಟೆಸ್ಟ್ ಕ್ರಿಕೆಟ್​​ನಲ್ಲಿ ಅವರ 200 ನೇ ಇನ್ನಿಂಗ್ಸ್ ಆಗಿದೆ. ಅವರು ಪಾಕಿಸ್ತಾನದ ವಿರುದ್ಧ ಅಮೂಲ್ಯ ಶತಕವನ್ನು ಗಳಿಸುವ ಮೂಲಕ ಅದನ್ನು ಸ್ಮರಣೀಯಗೊಳಿಸಿದರು.

ಸರಣಿಯ ಆರಂಭಕ್ಕೂ ಮುನ್ನ ವಾರ್ನರ್​ ಆಸ್ಟ್ರೇಲಿಯಾದ ಮಾಜಿ ಸಹ ಆಟಗಾರ ಮಿಚೆಲ್ ಜಾನ್ಸನ್ ಅವರಿಂದ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು. ಅವರಿಗೆ ತಮ್ಮ ಬ್ಯಾಟ್​ ಮೂಲಕ ಉತ್ತರಿಸಿದ್ದಾರೆ ಡೇವಿಡ್​ ವಾರ್ನರ್​. ಅಮೀರ್ ಜಮಾಲ್ ಅವರ ಇಮಾಮ್-ಉಲ್-ಹಕ್ ಎಸೆತದಲ್ಲಿ 164 ರನ್​ಗಳಿಗೆ ಔಟಾಗುವ ಮೂಲಕ ಅವರು ಸ್ಟೇಡಿಯಮ್​ ಸುತ್ತಲೆಲ್ಲ ಪಾಕಿಸ್ತಾನದ ಬೌಲರ್​ಗಳನ್ನು ಎದುರಿಸಿದರು.

ಸ್ಮಿತ್​ಗೆ ನಾಲ್ಕನೇ ಸ್ಥಾನ

ಡೇವಿಡ್ ವಾರ್ನರ್ ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಮತ್ತು ಮ್ಯಾಥ್ಯೂ ಹೇಡನ್ ಅವರನ್ನು ಹಿಂದಿಕ್ಕಿ ಈ ಸಾಧನೆ ಮಾಡಿದ್ದಾರೆ. ಅವರು 45.06 ಸರಾಸರಿಯಲ್ಲಿ 8651 ರನ್ ಗಳಿಸಿದ್ದು, 26 ಶತಕಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ. ಸ್ಟೀವ್ ಸ್ಮಿತ್ 58.44ರ ಸರಾಸರಿಯಲ್ಲಿ 9351 ರನ್ ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಸ್ಮಿತ್ ಸುದೀರ್ಘ ಸ್ವರೂಪದಲ್ಲಿ 32 ಶತಕಗಳನ್ನು ಹೊಂದಿದ್ದಾರೆ. ಟೆಸ್ಟ್ ಕ್ರಿಕೆಟ್​​ನಲ್ಲಿ ಆಸ್ಟ್ರೇಲಿಯಾ ಪರ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಸ್ಟೀವ್ ವಾ 51.06 ಸರಾಸರಿಯಲ್ಲಿ 10927 ರನ್ ಗಳಿಸಿದ್ದಾರೆ.

ಇದನ್ನೂ ಓದಿ : Ind vs SA : ಭಾರತ ಯಾಕೆ ದಕ್ಷಿಣ ಆಫ್ರಿಕಾದಲ್ಲಿ ಸರಣಿ ಗೆಲ್ಲುವುದಿಲ್ಲ, ಮಾಜಿ ಆಲ್​ರೌಂಡರ್​ ವಿವರಣೆ ಹೀಗಿದೆ

ಈ ಪಟ್ಟಿಯಲ್ಲಿ ಅಗ್ರ ಎರಡು ಬ್ಯಾಟರ್​ಗಳು ಆಸ್ಟ್ರೇಲಿಯಾದ ವಿಶ್ವಕಪ್ ವಿಜೇತ ನಾಯಕರು. ಅಲನ್ ಬಾರ್ಡರ್ 27 ಶತಕಗಳೊಂದಿಗೆ 50.56 ಸರಾಸರಿಯಲ್ಲಿ 11174 ರನ್ ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರಿಕಿ ಪಾಂಟಿಂಗ್ 51.85 ಸರಾಸರಿಯಲ್ಲಿ 13378 ರನ್ ಗಳಿಸಿದ್ದಾರೆ ಮತ್ತು 41 ಶತಕಗಳನ್ನು ಗಳಿಸಿದ್ದಾರೆ.

ಪಾಕಿಸ್ತಾನ ವಿರುದ್ಧದ ಅದ್ಭುತ ಇನ್ನಿಂಗ್ಸ್ನೊಂದಿಗೆ ಡೇವಿಡ್ ವಾರ್ನರ್ ಆಟಗಾರರ ಎಲೈಟ್ ಪಟ್ಟಿಗೆ ಸೇರಿದ್ದಾರೆ. ಪರ್ತ್​ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​​ನಲ್ಲಿ ಆಸ್ಟ್ರೇಲಿಯಾ ಈಗಾಗಲೇ 300 ಕ್ಕೂ ಹೆಚ್ಚು ರನ್ ಗಳಿಸಿದೆ. ಪಾಕಿಸ್ತಾನವು ಮೈದಾನದಲ್ಲಿ ಸಾಕಷ್ಟು ಅವಕಾಶಗಳನ್ನು ಕಳೆದುಕೊಂಡಿದೆ ಮತ್ತು ಆ ಅಂಶದಲ್ಲಿ ಸುಧಾರಿಸಬೇಕಾಗಿದೆ

Exit mobile version