Site icon Vistara News

ICC World Cup 2023 : ಸಚಿನ್ ತೆಂಡೂಲ್ಕರ್​ ದಾಖಲೆ ಮುರಿದ ಡೇವಿಡ್​ ವಾರ್ನರ್​, ಏನಿದು ರೆಕಾರ್ಡ್​?

David warner

ಚೆನ್ನೈ: ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್​ ಡೇವಿಡ್ ವಾರ್ನರ್ ಏಕದಿನ ವಿಶ್ವಕಪ್​ನಲ್ಲಿ 1,000 ರನ್ ಗಳಿಸಿದ ತಮ್ಮ ದೇಶದ 4 ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆದರೆ ಅವರು ಈ ಸಾಧನೆಯನ್ನು ಅತ್ಯಂತ ವೇಗವಾಗಿ ಮಾಡಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ 1000 ರನ್ ಗಳಿಸಲು ಅವರಿಗೆ ಬೇಕಾಗಿದದ್ದು 8 ರನ್ ಗಳು. ಅವರು ಅದನ್ನು ಸುಲಭವಾಗಿ ಪೂರೈಸಿದರು. ಈ ಸಾಲಿನಲ್ಲಿ ರಿಕಿ ಪಾಂಟಿಂಗ್ ಆಸ್ಟ್ರೇಲಿಯಾದ ಮೊದಲ ಆಟಗಾರನಾಗಿದ್ದರೆ, ಆಡಮ್ ಗಿಲ್​ಕ್ರಿಸ್ಟ್​ ಮತ್ತು ಮಾರ್ಕ್ ವಾ ನಂತರದ ಇಬ್ಬರು. ದಿಗ್ಗಜ ಸಚಿನ್ ತೆಂಡೂಲ್ಕರ್ ವಿಶ್ವ ಕಪ್​ನಲ್ಲಿ 2278 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ.

ಡೇವಿಡ್ ವಾರ್ನರ್ ಕೇವಲ ಮೂರು ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದಾರೆ. ಆದರೆ 19 ಇನಿಂಗ್ಸ್​ಗಳಲ್ಲಿ ಅವರು 1000 ಏಕದಿನ ವಿಶ್ವ ಕಪ್​ ರನ್ ಗಳಿಸಿದ್ದಾರೆ. 60ಕ್ಕಿಂತ ಹೆಚ್ಚು ಸರಾಸರಿಯನ್ನು ಹೊಂದಿದ್ದಾರೆ. ಅವರು ಆ 19 ಇನ್ನಿಂಗ್ಸ್ ಗಳಲ್ಲಿ ನಾಲ್ಕು ಶತಕಗಳು ಮತ್ತು ಮೂರು ಅರ್ಧಶತಕಗಳು ಸೇರಿಕೊಂಡಿವೆ.

ಇದನ್ನೂ ಓದಿ : Virat Kohli : ಮೈದಾನದಲ್ಲಿ ವಿರಾಟ್​ ಮೆರೆದಾಟ; ಹೊಸ ದಾಖಲೆ ಬರೆದ ಕಿಂಗ್​ ಕೊಹ್ಲಿ

ಸಚಿನ್ ತೆಂಡೂಲ್ಕರ್ ಮತ್ತು ಎಬಿ ಡಿವಿಲಿಯರ್ಸ್ ಇಬ್ಬರೂ ಏಕದಿನ ವಿಶ್ವ ಕಪ್​ನ 20 ಇನಿಂಗ್ಸ್​ಗಳಲ್ಲಿ 1000 ರನ್ ಗಳಿಸಿದ್ದಾರೆ. ಆದಾಗ್ಯೂ, ಭಾರತದ ನಾಯಕ ರೋಹಿತ್ ಶರ್ಮಾ ಡೇವಿಡ್ ವಾರ್ನ್​​ಗೆ ಸರಿಸಮನಾಗಬಹುದು. ರೋಹಿತ್ 18 ಏಕದಿನ ವಿಶ್ವಕಪ್ ಇನ್ನಿಂಗ್ಸ್​ಗಳಲ್ಲಿ 978 ರನ್ ಗಳಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಇನ್ನೂ 22 ರನ್ ಗಳಿಸಿದರೆ ಡೇವಿಡ್ ವಾರ್ನರ್ ದಾಖಲೆ ಬರೆಯಲಿದ್ದಾರೆ.

ಏಕದಿನ ವಿಶ್ವಕಪ್ ನಲ್ಲಿ ಅತಿ ವೇಗದ 1000 ರನ್

19 – ಡೇವಿಡ್ ವಾರ್ನರ್*
20 – ಸಚಿನ್ ತೆಂಡೂಲ್ಕರ್/ ಎಬಿ ಡಿವಿಲಿಯರ್ಸ್
21- ವಿವಿಯನ್ ರಿಚರ್ಡ್ಸ್/ ಸೌರವ್ ಗಂಗೂಲಿ
22 – ಮಾರ್ಕ್ ವಾ
22 – ಹರ್ಷಲ್ ಗಿಬ್ಸ್

ವಿಶ್ವ ಕಪ್​ನಲ್ಲಿ ಅತಿ ಹೆಚ್ಚು ರನ್​ ಬಾರಿಸಿದ 10 ಆಟಗಾರರು

Exit mobile version