ನವದೆಹಲಿ: ಆಸ್ಟ್ರೇಲಿಯಾದ ಹಿರಿಯ ಅನುಭವಿ ಆಟಗಾರ, ಡೆಲ್ಲಿ ಕ್ಯಾಪಿಟಲ್ಸ್(Delhi Capitals) ತಂಡದ ಡೇವಿಡ್ ವಾರ್ನರ್(David Warner) ಅವರು ಐಪಿಎಲ್(IPL 2024) ಸಿದ್ಧತೆಯ ನಡುವೆಯೂ ಬಗೆಬಗೆಯ ಅಡುಗೆ(David Warner chef) ಮಾಡಿ ಗಮನ ಸೆಳೆದಿದ್ದಾರೆ. ಈ ವಿಡಿಯೊವನ್ನು ಡೆಲ್ಲಿ ಫ್ರಾಂಚೈಸಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಮಾಧ್ಯಮಗಳಲ್ಲಿ ಹಂಚಿಕೊಂಡಿದೆ.
ವಾರ್ನರ್ ಅವರು ಇತ್ತೀಗೆ ಲೋಕಾರ್ಪಣೆಗೊಂಡ ರಾಮ ಮಂದಿರದ ಉದ್ಘಾಟನೆ ವೇಳೆ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್ನಲ್ಲಿ “ಜೈ ಶ್ರೀ ರಾಮ್ ಇಂಡಿಯಾ” ಎಂದು ಬರೆದುಕೊಂಡಿದ್ದರು. ಕಳೆದ ಬಾರಿ ವಾರ್ನರ್ ಅವರು ರಿಷಭ್ ಪಂತ್ ಕಾರು ಅಪಘಾತದಲ್ಲಿ ಗಾಯಗೊಂಡು ಟೂರ್ನಿಗೆ ಅಲಭ್ಯರಾದ ಕಾರಣ ಡೆಲ್ಲಿ ತಂಡವನ್ನು ಮುನ್ನಡೆಸಿದ್ದರು. ಈ ಬಾರಿ ಪಂತ್ ಕಮ್ಬ್ಯಾಕ್ ಮಾಡಿದ ಕಾರಣ ಅವರು ನಾಯಕತ್ವ ಬಿಟ್ಟುಕೊಟ್ಟಿದ್ದಾರೆ.
ಕಳೆದ ಆವೃತ್ತಿಯಲ್ಲಿ ಡೇವಿಡ್ ವಾರ್ನರ್ ಅವರು 14 ಪಂದ್ಯಗಳನ್ನು ಆಡಿ 526 ರನ್ ಬಾರಿಸಿದ್ದರು. ಇದರಲ್ಲಿ 5 ಅರ್ಧಶತಕ ಒಳಗೊಂಡಿತ್ತು. ಒಟ್ಟು 176 ಐಪಿಎಲ್ ಪಂದ್ಯಗಳನ್ನಾಡಿರುವ ವಾರ್ನರ್ 6397 ರನ್ ಕಲೆ ಹಾಕಿದ್ದಾರೆ. 4 ಶತಕ ಮತ್ತು 61 ಅರ್ಧಶತಕ ಬಾರಿಸಿದ್ದಾರೆ. ಇವರ ನಾಯಕತ್ವದಲ್ಲೇ ಸನ್ರೈಸರ್ಸ್ ಹೈದರಾಬಾದ್ ತಂಡ ಒಂದು ಬಾರಿ ಚಾಂಪಿಯನ್ ಪಟ್ಟ್ ಅಲಂಕರಿಸಿತ್ತು. ವಾರ್ನರ್ ಅವರು ಇದೇ ವರ್ಷ ಏಕದಿನ ಮತ್ತು ಟೆಸ್ಟ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದರು.
ಇದನ್ನೂ ಓದಿ IPL 2024: ಐಪಿಎಲ್ ಜಾತ್ರೆ ಶುರು; ಇನ್ನು ದೇಶದಲ್ಲಿ ಕ್ರಿಕೆಟ್ ಪ್ರಿಯರದ್ದೇ ಹವಾ
ಡೆಲ್ಲಿ ಕ್ಯಾಪಿಟಲ್ಸ್ ತಂಡ ನಾಳೆ ನಡೆಯುವ ಹಗಲು ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಆಡುವ ಮೂಲಕ ಈ ಬಾರಿಯ ಐಪಿಎಲ್ ಅಭಿಯಾನ ಆರಂಭಿಸಲಿದೆ.
ಆಡಿದ ಪಂದ್ಯಗಳು: 32
ಪಂಜಾಬ್ ಕಿಂಗ್ಸ್ 16 ಗೆಲುವು ಸಾಧಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ 16 ಗೆಲುವು
ಫಲಿತಾಂಶ ಇಲ್ಲ 0
ಮೊದಲ ಬಾರಿಗೆ ಆಡಿದ್ದು ಏಪ್ರಿಲ್ 28, 2008
ಪಂದ್ಯದ ವಿವರ:
- ಐಪಿಎಲ್ 2024: ಪಂಜಾಬ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿ
- ಸ್ಥಳ: ಮಹಾರಾಜ ಯಾದವೀಂದ್ರ ಸಿಂಗ್ ಕ್ರಿಕೆಟ್ ಕ್ರೀಡಾಂಗಣ, ಮುಲ್ಲಾನ್ಪುರ್
- ದಿನಾಂಕ ಮತ್ತು ಸಮಯ ಶನಿವಾರ, ಮಾರ್ಚ್ 23, ಮಧ್ಯಾಹ್ನ 3:30 (ಭಾರತೀಯ ಕಾಲಮಾನ)
- ಲೈವ್ ಬ್ರಾಡ್ಕಾಸ್ಟ್ ಮತ್ತು ಸ್ಟ್ರೀಮಿಂಗ್ ವಿವರಗಳು ಸ್ಟಾರ್ ಸ್ಪೋರ್ಟ್ಸ್ ಚಾನೆಲ್ಗಳು., ಜಿಯೋ ಸಿನೆಮಾ ಅಪ್ಲಿಕೇಶನ್ ಮತ್ತು ವೆಬ್ಸೈಟ್
ಸಂಭಾವ್ಯ ಪ್ಲೇಯಿಂಗ್ ಇಲೆವೆನ್
ಪಂಜಾಬ್ ಕಿಂಗ್ಸ್: ಶಿಖರ್ ಧವನ್ (ನಾಯಕ), ಪ್ರಬ್ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಜಾನಿ ಬೇರ್ಸ್ಟೋವ್, ಹರ್ಪ್ರೀತ್ ಸಿಂಗ್ ಭಾಟಿಯಾ, ಲಿಯಾಮ್ ಲಿವಿಂಗ್ಸ್ಟನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಸ್ಯಾಮ್ ಕರ್ರನ್, ಹರ್ಷಲ್ ಪಟೇಲ್, ರಾಹುಲ್ ಚಹರ್, ಕಗಿಸೊ ರಬಾಡ, ಅರ್ಷ್ದೀಪ್ ಸಿಂಗ್.
ಡೆಲ್ಲಿ ಕ್ಯಾಪಿಟಲ್ಸ್: ಪೃಥ್ವಿ ಶಾ, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ರಿಷಭ್ ಪಂತ್ (ನಾಯಕ/ ವಿಕೆಟ್ ಕೀಪರ್), ಯಶ್ ಧುಲ್, ಟ್ರಿಸ್ಟಾನ್ ಸ್ಟಬ್ಸ್, ಅಕ್ಷರ್ ಪಟೇಲ್, ಅನ್ರಿಕ್ ನಾರ್ಟ್ಜೆ, ಕುಲದೀಪ್ ಯಾದವ್, ಖಲೀಲ್ ಅಹ್ಮದ್, ಮುಖೇಶ್ ಕುಮಾರ್.