ಬೆಂಗಳೂರು: ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಆಸೀಸ್ ಫೀಲ್ಡರ್ david warner ಹಿಡಿದ ಅದ್ಭುತ ಕ್ಯಾಚ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಯಾಕೆಂದರೆ, ವಾರ್ನರ್ ಚೆಂಡನ್ನು ಹಿಡಿದಿರುವುದು ಅವರ ತಂಡದ ಸದಸ್ಯರಿಗೇ ಗೊತ್ತಿರಲಿಲ್ಲ ಹಾಗೂ ಅವರೆಲ್ಲರೂ ಎಲ್‌ಬಿಡಬ್ಲ್ಯುಗೆ ಮನವಿ ಸಲ್ಲಿಸುತ್ತಿದ್ದರು.
ಹೇಳಿ, ಕೇಳಿ ಡೇವಿಡ್ ವಾರ್ನರ್ ಅತ್ಯುತ್ತಮ ಫೀಲ್ಡರ್. ಮೇಲಕ್ಕೇರಿದ ಚೆಂಡು ನೆಲಕ್ಕೆ ಬೀಳುವುದು ಅವರಿಗಿಷ್ಟವಿಲ್ಲ. ಎದ್ದು, ಬಿದ್ದಾದರೂ ಚೆಂಡನ್ನು ಹಿಡಿಯುತ್ತಾರೆ. ಅಂತೆಯೇ ಶ್ರೀಲಂಕಾ ವಿರುದ್ಧ ಪಂದ್ಯದಲ್ಲೂ ಅದ್ಭುತ ಕ್ಯಾಚೊಂದನ್ನು ಹಿಡಿದಿದ್ದಾರೆ.
ಮೊದಲ ಇನಿಂಗ್ಸ್ ಬ್ಯಾಟ್ ಮಾಡಿದ ಶ್ರೀಲಂಕಾ ತಂಡ ನಥಾನ್ ಲಿಯಾನ್ (೯೦ ರನ್‌ಗಳಿಗೆ ೫ ವಿಕೆಟ್) ಬೌಲಿಂಗ್ ಪರಾಕ್ರಮದಿಂದ ೨೧೨ ರನ್‌ಗಳಿಗೆ ಆಲ್‌ಔಟ್ ಆಗಿದೆ. ಏತನ್ಮಧ್ಯೆ, ಆರಂಭಿಕ ಬ್ಯಾಟರ್ ದಿಮುಥ್ ಕರುಣಾರತ್ನೆ ೨೮ ರನ್ ಬಾರಿಸಿ ಕ್ರಿಸ್‌ನಲ್ಲಿದ್ದರು. ಇನಿಂಗ್ಸ್‌ನ ೩೦ನೇ ಓವರ್ ಎಸೆಯಲು ಬಂದ ನಥಾನ್ ಲಿಯಾನ್ ಅವರ ಎರಡನೇ ಎಸೆತವನ್ನು ಕರುಣಾರತ್ನೆ ರಕ್ಷಣಾತ್ಮಕವಾಗಿ ಆಡಿದ್ದಾರೆ. ಆ ಚೆಂಡು ಅವರ ಬ್ಯಾಟ್ ಸವರಿ ಕಾಲಿಗೆ ಬಡಿದು ಮೇಲಕ್ಕೆ ಚಿಮ್ಮಿತ್ತು. ವಿಕೆಟ್ ಕೀಪರ್ ಅಲೆಕ್ಸ್ ಕ್ಯೇರಿ ಸೇರಿದಂತೆ ಎಲ್ಲರೂ ಚೆಂಡು ಕಾಲಿಗೆ ಬಡಿದಿದೆ ಎಂದು ಅಂದುಕೊಂಡು ಚೆಂಡನ್ನು ಹಿಡಿಯುವ ಬದಲು ಎಲ್‌ಬಿಡಬ್ಲ್ಯು ಔಟ್‌ಗೆ ಮನವಿ ಮಾಡಿದ್ದಾರೆ. ಆದರೆ, ಹಿಂದಿನಿಂದ ಓಡಿಕೊಂಡು ಬಂದ ಡೇವಿಡ್ ವಾರ್ನರ್ ಒಂದೇ ಕೈಯಲ್ಲಿ ಚೆಂಡು ಹಿಡಿದು ಸಂಭ್ರಮಿಸಿದರು. ಸಹ ಆಟಗಾರರಿಗೆ ಆಗ ಅದು ಕ್ಯಾಚ್ ಎಂದು ತಿಳಿದದ್ದು.
ಸುಸ್ಥಿತಿಯಲ್ಲಿ ಆಸ್ಟ್ರೇಲಿಯಾ!
ಶ್ರೀಲಂಕಾ ಪೇರಿಸಿದ್ದ ೧೨೧ ರನ್‌ಗಳಿಗೆ ಪ್ರತಿಯಾಗಿ ಬ್ಯಾಟ್ ಮಾಡಲು ಆರಂಭಿಸಿರುವ ಆಸ್ಟ್ರೇಲಿಯಾ ತಂಡ ೨ ವಿಕೆಟ್ ಕಳೆದುಕೊಂಡು ೮೦ ರನ್ ಗಳಿಸಿ ಸುಸ್ಥಿತಿಯಲ್ಲಿದೆ. ಆರಂಭಿಕ ಬ್ಯಾಟರ್ ಉಸ್ಮಾನ್ ಖವಾಜ ೩೭ ರನ್ ಬಾರಿಸಿ ಕ್ರೀಸ್‌ನಲ್ಲಿದ್ದರೆ, ಡೇವಿಡ್ ವಾರ್ನರ್ ೨೫ ರನ್‌ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ.
ಇದನ್ನೂ ಓದಿ: IPL 2022 | ಐಪಿಎಲ್‌ನಲ್ಲಿ ಹಿಟ್ ವಿಕೆಟ್ ಆಗಿದ್ದು ಸಾಯಿ ಸುದರ್ಶನ್ ಮೊದಲಿಗರಲ್ಲ: ಇಲ್ಲಿದೆ ಪಟ್ಟಿ