Site icon Vistara News

Rishabh Pant : ಡೆಲ್ಲಿ ತಂಡದ ನಾಯಕನ ಸ್ಥಾನ ಕಳೆದುಕೊಂಡ ರಿಷಭ್ ಪಂತ್​!

David Warner

ನವದೆಹಲಿ: ಗಾಯದಿಂದ ಸಂಪೂರ್ಣವಾಗಿ ಮುಕ್ತಿ ಪಡೆಯದ ಕಾರಣ ರಿಷಭ್ ಪಂತ್ ಮುಂದಿನ ಐಪಿಎಲ್​ಗೆ ಅಲಭ್ಯರಾದರೆ , ಆಸೀಸ್​ ಆಟಗಾರ ಡೇವಿಡ್ ವಾರ್ನರ್ (Rishabh Pant) ಫ್ರಾಂಚೈಸಿಯ ನಾಯಕನಾಗಿ ಮುಂದುವರಿಯುತ್ತಾರೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಖಚಿತಪಡಿಸಿದ್ದಾರೆ. ಕಾರು ಅಪಘಾತದಲ್ಲಿ ಗಾಯಗೊಂಡು ಪಂತ್ ಹೊರಗುಳಿದ ನಂತರ ಐಪಿಎಲ್ 2023 ಕ್ಕೆ ಮುಂಚಿತವಾಗಿ ವಾರ್ನರ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ನಾಯಕನಾಗಿ ನೇಮಿಸಲಾಯಿತು. ಆಸ್ಟ್ರೇಲಿಯಾದ ಆರಂಭಿಕ ಆಟಗಾರನ ನಾಯಕತ್ವದಲ್ಲಿ, ಫ್ರಾಂಚೈಸಿ 14 ಪಂದ್ಯಗಳಿಂದ ಕೇವಲ ಐದು ಗೆಲುವುಗಳನ್ನು ಮಾತ್ರ ಪಡೆಯುವಲ್ಲಿ ಯಶಸ್ವಿಯಾಗಿತ್ತು ಮತ್ತು ಐಪಿಎಲ್ 2023 ಪಾಯಿಂಟ್ಸ್ ಟೇಬಲ್​ನಲ್ಲಿ ಒಂಬತ್ತನೇ ಸ್ಥಾನ ಪಡೆದಿತ್ತು. ಆದಾಗ್ಯೂ ಪಂತ್ ಲಭ್ಯವಾಗದೇ ಹೋದರೆ ವಾರ್ನರ್​ ಮತ್ತೆ ತಂಡವನ್ನು ಮುನ್ನಡೆಸುವ ಸಾಧ್ಯತೆಗಳಿವೆ.

ಫೆಬ್ರವರಿ 7 ರಂದು ಡೆಲ್ಲಿ ಕ್ಯಾಪಿಟಲ್ಸ್ ಮುಖ್ಯ ಕೋಚ್ ಮತ್ತು ಜಿ ಕ್ರಿಕೆಟಿಗ ರಿಕಿ ಪಾಂಟಿಂಗ್ ಅವರು ರಿಷಭ್ ಪಂತ್ ಪಂದ್ಯಾವಳಿಗೆ ಸಮಯಕ್ಕೆ ಸರಿಯಾಗಿ ಚೇತರಿಸಿಕೊಳ್ಳಲು ವಿಫಲವಾದರೆ ಡೇವಿಡ್ ವಾರ್ನರ್ ಫ್ರಾಂಚೈಸಿಯನ್ನು ಮುನ್ನಡೆಸುತ್ತಾರೆ ಎಂದು ದೃಢಪಡಿಸಿದ್ದಾರೆ.

ಐಪಿಎಲ್ 2024 ರ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್​​ಗೆ ಮರಳಲು ಪಂತ್​ಗೆ ಹಲವಾರು ಸೂಚನೆ ನೀಡಿರುವುದರಿಂದ ಪರಿಸ್ಥಿತಿ ಮುನ್ನೆಲೆಗೆ ಬರುವ ಸಾಧ್ಯತೆಯಿಲ್ಲ. ಇದಲ್ಲದೆ, ಪಾಂಟಿಂಗ್ ಸ್ವತಃ ಪಂತ್ ಅವರ ಸಂಭಾವ್ಯ ಮರಳುವಿಕೆ ಮತ್ತು ಮತ್ತೆ ಸ್ಪರ್ಧಿಸಲು ಅವರ ಉತ್ಸುಕತೆಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದರು.

ರಿಷಭ್ ಪಂತ್ ಅವರು ಆಡಲು ಸಿದ್ಧಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ಆದರೆ ಯಾವ ಮಟ್ಟದಲ್ಲಿ ಎಂದು ನಮಗೆ ಇನ್ನೂ ಖಚಿತವಾಗಿಲ್ಲ. ನೀವು ಎಲ್ಲಾ ಸಾಮಾಜಿಕ ಮಾಧ್ಯಮ ಮಾಹಿತಿಗಳನ್ನು ಗಮನಿಸಿರಬಹುದು. ಅವರು ಉತ್ತಮವಾಗಿ ಓಡುತ್ತಿದ್ದಾರೆ. ನಾವು ಮೊದಲ ಪಂದ್ಯದಿಂದ ಕೇವಲ ಆರು ವಾರಗಳ ದೂರದಲ್ಲಿರುತ್ತೇವೆ. ಹೀಗಾಗಿ ಅವರು ಲಭ್ಯರಾಗಲಿದ್ದಾರೆ ಎಂಬುದಾಗಿ ವಾರ್ನರ್​​ ಹೇಳಿದ್ದರು.

ಭಾರತದ ವಿಕೆಟ್ ಕೀಪರ್ ಸಂಪೂರ್ಣ ಚೇತರಿಸಿಕೊಳ್ಳಲು ವಿಫಲವಾದ ಸನ್ನಿವೇಶದಲ್ಲಿ, ಡೇವಿಡ್ ವಾರ್ನರ್ ಅವರ ಉಪಸ್ಥಿತಿಯು ಇಡೀ ಪಂದ್ಯಾವಳಿಗೆ ಬಹುತೇಕ ಖಚಿತವಾಗಿದೆ. ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಇತ್ತೀಚೆಗೆ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್​ನಿಂದ ನಿರ್ಗಮಿಸುವುದಾಗಿ ಘೋಷಿಸಿದ್ದರು.

ಇದನ್ನೂ ಓದಿ : Virat kohli : ಒಂದೇ ಬಾರಿಗೆ 110 ಕೋಟಿ ರೂಪಾಯಿ ಕಳೆದುಕೊಳ್ಳಲಿದ್ದಾರೆ ವಿರಾಟ್​ ಕೊಹ್ಲಿ

2022ರ ಡಿಸೆಂಬರ್​ನಲ್ಲಿ ನಡೆದ ಕಾರು ಅಪಘಾತದಲ್ಲಿ ರಿಷಭ್ ಪಂತ್ ಗಾಯಗೊಂಡಿದ್ದರು. ಭಾರತದ ಸ್ಟಂಪರ್ ಅನ್ನು 2023 ರ ಭಾರತದ ಸಂಪೂರ್ಣ ಕ್ರಿಕೆಟ್ ಕ್ಯಾಲೆಂಡರ್​ನಿಂದ ಹೊರಗಿಡಲಾಗಿತ್ತು. ಅಫ್ಘಾನಿಸ್ತಾನ ವಿರುದ್ಧದ ಅವರ ತಂಡದ ತವರು ಟಿ 20 ಐ ಸರಣಿ ಮತ್ತು ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ.

ರಿಷಭ್ ಪಂತ್​ ತಮ್ಮ ಹೆಚ್ಚಿನ ಸಮಯವನ್ನು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್​ಸಿಎ) ಕಳೆದಿದ್ದರು. ಪ್ರಸ್ತುತ ಐಪಿಎಲ್ 2024 ಗಾಗಿ ಪುನರಾಗಮನದ ಮೇಲೆ ಕಣ್ಣಿಟ್ಟಿದ್ದಾರೆ. ಇದು ಈ ವರ್ಷ ವೆಸ್ಟ್ ಇಂಡೀಸ್​​ನಲ್ಲಿ ನಡೆಯಲಿರುವ ಭಾರತದ ಬಹುನಿರೀಕ್ಷಿತ ಟಿ 20 ವಿಶ್ವಕಪ್ 2024 ಅಭಿಯಾನಕ್ಕೆ ಮುನ್ನುಡಿಯಾಗಿದೆ.

Exit mobile version