ಬೆಂಗಳೂರು: ಪ್ರಸಕ್ತ ಸಾಗುತ್ತಿರುವ ಏಕದಿನ ವಿಶ್ವಕಪ್ನಲ್ಲಿ(icc world cup 2023) ಹೀನಾಯ ಪ್ರದರ್ಶನ ತೋರುವ ಮೂಲಕ ಟೂರ್ನಿಯಿಂದ ಬಹುತೇಕವಾಗಿ ಹೊರಬಿದ್ದಿರುವ ಚಿಂತೆಯಲ್ಲಿದ್ದ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡಕ್ಕೆ ಮತ್ತೊಂದು ಆಘಾತ ಉಂಟಾಗಿದೆ. ತಂಡದ ಸ್ಟಾರ್ ಆಲ್ರೌಂಡರ್ ಡೇವಿಡ್ ವಿಲ್ಲಿ(David Willey) ದಿಢೀರ್ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ.(david willey retirement) ಆದರೆ ಐಪಿಎಲ್ ಸೇರಿ ಇತರ ಟಿ20 ಲೀಗ್ನಲ್ಲಿ ಆಡ ಮುಂದುವರಿಸುವುದಾಗಿ ತಿಳಿಸಿದ್ದಾರೆ.
30 ವರ್ಷದ ಡೇವಿಡ್ ವಿಲ್ಲಿ ಅವರು ಇಂದು(ನವೆಂಬರ್ 1) ತಮ್ಮ ನಿವೃತ್ತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುವ ಮೂಲಕ ತಿಳಿಸಿದ್ದಾರೆ. ಈ ಕುರಿತಂತೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಬರಹವೊಂದನ್ನು ಬರೆದಿರುವ ಅವರು, “ಸಣ್ಣ ವಯಸ್ಸಿನಲ್ಲೇ ಇಂಗ್ಲೆಂಡ್ ಪರ ಕ್ರಿಕೆಟ್ ಆಡುವ ಕನಸು ಕಂಡಿದ್ದೆ. ಇದು ನನಸಾಗಿದೆ. ಬಹಳ ಯೋಚಿಸಿ ಈ ನಿರ್ಧಾರವನ್ನು ನಾನು ತೆಗೆದುಕೊಂಡಿದ್ದೇನೆ. ವಿಶ್ವಕಪ್ ಟೂರ್ನಿಯೇ ನನಗೆ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಲಿದೆ. ಬಳಿಕ ನಾನು ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಆಗುತ್ತಿದ್ದೇನೆ” ಎಂದು ತಮ್ಮ ನಿವೃತ್ತಿಯನ್ನು ಪ್ರಕಟಿಸಿದ್ದಾರೆ.
“ಇಷ್ಟು ವರ್ಷಗಳ ಕಾಲ ನಾನು ಇಂಗ್ಲೆಂಡ್ ತಂಡದ ಜೆರ್ಸಿ ತೊಟ್ಟು ಆಡಿದ್ದಕ್ಕೆ ಅಪಾರ ಹೆಮ್ಮೆ ಮತ್ತು ಗೌರವವಿದೆ. ನನ್ನ ಎದೆಯ ಮೇಲಿನ ಬ್ಯಾಡ್ಜ್‌ಗೆ ನಾನು ಸಂಪೂರ್ಣವಾಗಿ ಎಲ್ಲವನ್ನು ನೀಡಿದ್ದೇನೆ. ಅತ್ಯುತ್ತಮ ಆಟಗಾರರನ್ನು ಒಳಗೊಂಡಿರುವ ಉತ್ತಮ ತಂಡದ ಭಾಗವಾಗಿದ್ದಕ್ಕೆ ನಾನು ತುಂಬಾ ಅದೃಷ್ಟಶಾಲಿಯಾಗಿದ್ದೇನೆ. ನನ್ನ ಈ ಪಯಣದಲ್ಲಿ ಹಲವು ಸುಂದರ ನೆನಪುಗಳಿಗೆ. ನನ್ನ ಕಷ್ಟದ ಮತ್ತು ಸಂತಸದ ಸಮಯದಲ್ಲಿ ಜತೆಯಾದ ಎಲ್ಲ ಆಟಗಾರರು, ತಂಡದ ಸಿಬ್ಬಂದಿಗಳು, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ ಹಾಗೂ ನನ್ನ ಕುಟುಂಬ ಸದಸ್ಯರಿಗೆ ಧನ್ಯವಾದಗಳು. ನಿಮ್ಮ ಸಹಕಾರ ಇಲ್ಲವಾಗಿದ್ದರೆ ನಾನು ಇಂದು ಈ ಮಟ್ಟಕ್ಕೆ ತಲುಪಲು ಸಾಧ್ಯವಾಗುತ್ತಿರಲಿಲ್ಲ. ನಿಮ್ಮ ಪ್ರೀತಿ ಮತ್ತು ವಿಶ್ವಾಸಕ್ಕೆ ಸದಾ ಚಿರಋಣಿ” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ ಲಂಕಾ ಪಂದ್ಯಕ್ಕೂ ಮುನ್ನ ತಂಡ ಸೇರಲಿದ್ದಾರೆ ಹಾರ್ದಿಕ್ ಪಾಂಡ್ಯ ಆದರೆ…
Thank you, David Willey ❤️ pic.twitter.com/4wkeVGAYXq
— England Cricket (@englandcricket) November 1, 2023
ಸೋಲಿಗೂ ನನ್ನ ನಿವೃತ್ತಿಗೂ ಸಂಬಂಧವಿಲ್ಲ
“ಈ ಬಾರಿ ತಂಡ ಅತ್ಯಂತ ಕಳಪೆ ಪ್ರದರ್ಶನ ನೀಡಿ ಸೋಲು ಕಾಣುತ್ತಿರುವುದಕ್ಕೂ ಹಾಗೂ ನನ್ನ ನಿವೃತ್ತಿಗೂ ಯಾವುದೇ ಸಂಬಂಧವಿಲ್ಲ. ಇದು ನನ್ನ ಸ್ವಂತಃ ನಿರ್ಧಾರವಾಗಿದೆ. ಇನ್ನು ಉಳಿದಿರುವ ಮೂರು ಪಂದ್ಯಗಳಲ್ಲಿ ಶ್ರೇಷ್ಠ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನೆ” ಎಂದು ವಿಲ್ಲಿ ಹೇಳಿದ್ದಾರೆ. ಇಂಗ್ಲೆಂಡ್ ತಂಡ ಈ ಬಾರಿ ಆಡಿದ 6 ಪಂದ್ಯಗಳ ಪೈಕಿ 5ರಲ್ಲಿ ಸೋಲುಂಡು 2 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಇದನ್ನೂ ಓದಿ ICC World Cup 2023: ವಿಶ್ವಕಪ್ನಲ್ಲಿ ಆಸೀಸ್ ಹಿಂದಿಕ್ಕಿ ಅನಗತ್ಯ ದಾಖಲೆ ಬರೆದ ಇಂಗ್ಲೆಂಡ್
2015 ರಲ್ಲಿ ಐರ್ಲೆಂಡ್ ವಿರುದ್ಧದ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಪಾದಾರ್ಪಣೆದ ವಿಲ್ಲಿ ಇಂಗ್ಲೆಂಡದದ ಪರ 70 ಏಕದಿನ ಮತ್ತು 43 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. ಏಕದಿನ ಪಂದ್ಯದಲ್ಲಿ 26.12ರ ಸರಾಸರಿಯಲ್ಲಿ 627 ರನ್ ಮತ್ತು 94 ವಿಕೆಟ್ಗಳನ್ನು ಪಡೆದಿದ್ದಾರೆ. ಟಿ20ಯಲ್ಲಿ 51 ವಿಕೆಟ್ ಉರುಳಿಸಿದ್ದಾರೆ. ಐಪಿಎಲ್ನಲ್ಲಿ ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದರು. ಒಟ್ಟಾರೆ ಐಪಿಎಲ್ನಲ್ಲಿ 11 ಪಂದ್ಯಗಳನ್ನು ಆಡಿ 6 ವಿಕೆಟ್ ಮತ್ತು 53 ರನ್ ಗಳಿಸಿದ್ದಾರೆ.