Site icon Vistara News

Dean Elgar Retirement: ಡೀನ್​ ಎಲ್ಗರ್​ಗೆ ಸ್ಮರಣೀಯ ಬೀಳ್ಕೊಡುಗೆ ಮಾಡಿದ ಟೀಮ್​ ಇಂಡಿಯಾ

dean elgar farewell

ಕೇಪ್​ ಟೌನ್​: ಭಾರತ ವಿರುದ್ಧದ ದ್ವಿತೀಯ ಟೆಸ್ಟ್​ ಪಂದ್ಯವನ್ನಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ(Dean Elgar Retirement) ದಕ್ಷಿಣ ಆಫ್ರಿಕಾದ ಅನುಭವಿ ಆಟಗಾರ ಡೀನ್​ ಎಲ್ಗರ್​ಗೆ ಭಾರತ ತಂಡದ ಕಡೆಯಿಂದ ಸ್ಮರಣೀಯ ಬೀಳ್ಕೊಡುಗೆ(dean elgar farewell) ಮಾಡಲಾಯಿತು. ಎಲ್ಲ ಆಟಗಾರರ ಹಸ್ತಾಕ್ಷರವುಳ್ಳ ಟೀಮ್​ ಇಂಡಿಯಾದ ಜೆರ್ಸಿಯನ್ನು(team india jersey) ಪಂದ್ಯದ ಬಳಿಕ ಎಲ್ಗರ್​ಗೆ ನೀಡಿ ಗೌರವಿಸಲಾಯಿತು.

ಡೀನ್​ ಎಲ್ಗರ್​ಗೆ ಭಾರತ ತಂಡದ ಜೆರ್ಸಿಯನ್ನು ನೀಡಿದ ಫೋಟೊವನ್ನು ಐಸಿಸಿ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದು, ‘ವಿಶೇಷ ಬೀಳ್ಕೊಡುಗೆ’ ಎಂದು ಬರೆದುಕೊಂಡಿದೆ. ನಾಯಕ ರೋಹಿತ್​ ಶರ್ಮ ಅವರು ಈ ಜೆರ್ಸಿಯನ್ನು ನೀಡಿದರು.

ವಿದಾಯ ಪಂದ್ಯದ ನಾಯಕತ್ವ ವಹಿಸಿದ್ದ ಡೀನ್​ ಎಲ್ಗರ್​ಗೆ ಗೆಲುವಿನ ವಿದಾಯ ಮಾತ್ರ ಸಿಗಲಿಲ್ಲ. ಮೊದಲ ಪಂದ್ಯದಲ್ಲಿ 185 ರನ್​ ಗಳಿಸಿ ಭಾರತದ ಸೋಲಿಗೆ ಕಾರಣರಾಗಿದ್ದರು. ಇದೊಂದೆ ಅವರಿಗೆ ಸ್ಮರಣೀಯ ನೆನಪಾಗಿ ಉಳಿಯಲಿದೆ. 36ರ ಹರೆಯದ ಎಲ್ಗರ್ ದಕ್ಷಿಣ ಆಫ್ರಿಕಾ ಪರ 84 ಟೆಸ್ಟ್​ ಪಂದ್ಯಗಳನ್ನು ಆಡಿ 5146 ರನ್​ ಗಳಿಸಿದ್ದಾರೆ. 13 ಶತಕ ಮತ್ತು 23 ಅರ್ಧಶತಕ ಒಳಗೊಂಡಿದೆ. 654 ಬೌಂಡರಿ ಹಾಗೂ 26 ಸಿಕ್ಸರ್​ ಸಿಡಿಸಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ ಕೇವಲ 8 ಪಂದ್ಯಗಳಿಂದ 104 ರನ್​ ಕಲೆ ಹಾಕಿದ್ದಾರೆ. ಬೌಲಿಂಗ್​ನಲ್ಲಿ ಸಾಧನೆ ತೋರಿರುವ ಅವರು 15 ಟೆಸ್ಟ್​ ಮತ್ತು 2 ಏಕದಿನ ವಿಕೆಟ್​ ಪಡೆದಿದ್ದಾರೆ.

12 ವರ್ಷದ ಕ್ರಿಕೆಟ್​ ವೃತ್ತಿ ಬದುಕಿಗ ತೆರೆ

ಎಲ್ಗರ್ ಅವರು 2012ರ ಪರ್ತ್ ಟೆಸ್ಟ್‌ನಲ್ಲಿ ಆಡುವ ಮೂಲಕ ದಕ್ಷಿಣ ಆಫ್ರಿಕಾ ಟೆಸ್ಟ್​ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಮಧ್ಯಮ ಕ್ರಮಾಂಕದಲ್ಲಿ ಆಡುವ ಮೂಲಕ ಅವರು ತಮ್ಮ ಇನಿಂಗ್ಸ್​ ಆರಂಭಿಸಿದ್ದರು. ಆ ಬಳಿಕ ಅವರು ಆರಂಭಿಕ ಆಟಗಾರನಾಗಿ ಭಡ್ತಿ ಪಡೆದರು. ನಾಯಕನಾಗಿ 18 ಬಾರಿ ತಂಡವನ್ನು ಮುನ್ನಡೆಸಿ ಸಾಧನೆಯೂ ಅವರದ್ದಾಗಿದೆ. ಭಾರತ ವಿರುದ್ಧ ಅಂತಿಮ ಟೆಸ್ಟ್​ ಆಟುವ ಮೂಲಕ ಅವರ 12 ವರ್ಷಗಳ ಕ್ರಿಕೆಟ್​ ವೃತ್ತಿಜೀವನಕ್ಕೆ ತೆರೆ ಬೀದ್ದಿದೆ.

ಇದನ್ನೂ ಓದಿ Rohit Sharma: ಕೂಲ್​ ಕ್ಯಾಪ್ಟನ್​ ಧೋನಿಯ ದಾಖಲೆ ಸರಿಗಟ್ಟಿದ ಹಿಟ್​ ಮ್ಯಾನ್​ ರೋಹಿತ್​

ಜರ್ಸಿ ನೀಡಿ ಗೌರವಿಸಿದ ಕೊಹ್ಲಿ


ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ ಅವರು ವಿದಾಯ ಹೇಳಿದ ಎಲ್ಗರ್​ಗೆ ತಮ್ಮ ಜೆರ್ಸಿಯನ್ನು ನೀಡಿ ಗೌರವಿಸಿದ್ದಾರೆ. ವೃತ್ತಿಜೀವನದ ಕೊನೆಯ ಟೆಸ್ಟ್ ಆಡುತ್ತಿದ್ದ ಡೀನ್ ಎಲ್ಗರ್ ಅವರು ಔಟ್ ಆದ ತಕ್ಷಣ ಸಂಭ್ರಮಿಸದಂತೆ ವಿರಾಟ್​ ಕೊಹ್ಲಿ ನೆರೆದಿದ್ದ ಅಭಿಮಾನಿಗಳಿಗೆ ಹಾಗೂ ಪ್ರೇಕ್ಷಕರಿಗೆ ಕೇಳಿಕೊಂಡಿದ್ದರು. ಸಂಭ್ರಮದ ಬದಲು ಅವರಿಗೆ ಗೌರವ ಸೂಚಿಸುವಂತೆ ಮೈದಾನದಿಂದಲೇ ಮನವಿ ಮಾಡಿದ್ದರು. ಇನ್ನು ಭಾರತೀಯ ಆಟಗಾರರು ಕೂಡ ಎಲ್ಗರ್​ಗೆ ಪಂದ್ಯದ ವೇಳ ಗೌರವ ಸೂಚಿಸಿದ್ದರು.

Exit mobile version