Site icon Vistara News

IPL 2023 : ದೀಪಕ್​ ಚಾಹರ್​ಗೂ ಗಾಯ, ಸಿಎಸ್​ಕೆ ತಂಡಕ್ಕೆ ಭಯ

Deepak Chahar also injured, fear for CSK team

#image_title

ಚೆನ್ನೈ: ಚೆನ್ನೈ ಸೂಪರ್​ ಕಿಂಗ್ಸ್ ತಂಡಕ್ಕೆ ಮತೊಂದು ಗಾಯದ ಭಯ ಉಂಟಾಗಿದೆ. ವೇಗದ ಬೌಲರ್​ ದೀಪಕ್​ ಚಾಹರ್​ಗೆ ಮಂಡಿ ರಜ್ಜು ನೋವಿಗೆ ಒಳಗಾಗಿದ್ದು, ಸ್ಕ್ಯಾನ್​ ಮಾಡಿಸಿಕೊಂಡಿದ್ದಾರೆ. ಹೀಗಾಗಿ ಮುಂದಿನ ಪಂದ್ಯಗಳಿಗೆ ಅವರು ಲಭ್ಯರಾಗುತ್ತಾರೆಯೇ ಎಂಬ ಆತಂಕ ಶುರುವಾಗಿದೆ. ಇದರೊಂದಿಗೆ ಮುಂಬಯಿ ಇಂಡಿಯನ್ಸ್​ ತಂಡದ ವಿರುದ್ಧ ಭರ್ಜರಿ ವಿಜಯ ದಾಖಲಿಸಿದ ಖುಷಿಯಲ್ಲಿದ್ದ ಚೆನ್ನೈ ಸೂಪರ್​ ಕಿಂಗ್ಸ್ ತಂಡಕ್ಕೆ ಆತಂಕ ಎದುರಾಗಿದೆ.

ಏಪ್ರಿಲ್​ 8ರಂದು ಮುಂಬಯಿಯ ವಾಂಖೆಡೆ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದ ವೇಳೆ ದೀಪಕ್​ ಚಾಹರ್​ ಗಾಯದ ಸಮಸ್ಯೆಗೆ ಒಳಗಾಗಿದ್ದರು. 1.5 ಓವರ್​ ಎಸೆದ ಅವರು ಅರ್ಧದಲ್ಲಿಯೇ ಮೈದಾನ ತೊರೆದಿದ್ದರು. ಅಲ್ಲಿ ಅವರು ತಂಡದ ವೈದ್ಯಕೀಯ ವಿಭಾಗದ ಸಲಹೆ ಪಡೆದುಕೊಂಡಿದ್ದಾರೆ. ಅವರು ಸ್ಯ್ಕಾನ್ ಮಾಡಿಸಿಕೊಂಡಿದ್ದು ಮುಂದಿನ ವರದಿಗಾಗಿ ಕಾಯುತ್ತಿದ್ದಾರೆ.

ದೀಪಕ್​ ಚಾಹರ್​ ಮುಂಬಯಿ ಇಂಡಿಯನ್ಸ್​ ವಿರುದ್ಧದ ಪಂದ್ಯದ ವೇಳೆ ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಗಾಯದಿಂದಾಗಿ ಅವರು ಅನಿವಾರ್ಯವಾಗಿ ಮೈದಾನ ತೊರೆಯುಂತಾಗಿತ್ತು. ತಂಡ ಚೆನ್ನೈಗೆ ವಾಪಸಾದ ಬಳಿಕ ಅವರು ಗಾಯದ ತೀವ್ರತೆಯನ್ನು ಅರಿತುಕೊಳ್ಳುವುದಕ್ಕೆ ಸ್ಕ್ಯಾನ್​​ಗೆ ಒಳಗಾಗಲಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೂಲಗಳು ತಿಳಿಸಿವೆ.

ಇದನ್ನೂ ಓದಿ : IPL 2023 : ಮುಂಬಯಿ ಇಂಡಿಯನ್ಸ್​ ತಂಡ ಸೇರಿಕೊಂಡ ರೀಲಿ ಮೆರಿಡಿತ್​

ಇವೆಲ್ಲದರ ನಡುವೆ ಚೆನ್ನೈ ಸೂಪರ್​ ಕಿಂಗ್ಸ್ ತಂಡ ಆಲ್​ರೌಂಡರ್​ ಬೆನ್​ ಸ್ಟೋಕ್ಸ್ ಅವರ ಫಿಟ್ನೆಸ್​ ಬಗ್ಗೆಯೂ ಕಳವಳಗೊಂಡಿದೆ. ಅವರು ಅಭ್ಯಾಸದ ವೇಳೆ ಗಾಯದ ಸಮಸ್ಯೆಗೆ ಒಳಗಾಗಿದ್ದರು. ಹೀಗಾಗಿ ಮುಂಬಯಿ ಇಂಡಿಯನ್ಸ್​ ವಿರುದ್ಧದ ಹಣಾಹಣಿಯಲ್ಲಿ ಆಡಿರಲಿಲ್ಲ. ತಂಡದ ಪ್ರಮುಖ ಆಟಗಾರ ಎನಿಸಿಕೊಂಡಿದ್ದ ಅವರ ಅಲಭ್ಯತೆಯಿಂದ ತಂಡದ ಪ್ರದರ್ಶನಕ್ಕೆ ಅಡಚಣೆಯಾಬಹುದು ಎಂದು ಹೇಳಲಾಗುತ್ತಿದೆ.

ಬೆನ್​ ಸ್ಟೋಕ್ಸ್​ ಅಭ್ಯಾಸ ಮಾಡುವ ವೇಳೆ ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಹೀಗಾಗಿ ಅವರಿಗೆ ಮುಂಬಯಿ ಇಂಡಿಯನ್ಸ್​ ವಿರುದ್ಧದ ಪಂದ್ಯದಲ್ಲಿ ಆಡಲು ಸಾಧ್ಯವಾಗಲಿಲ್ಲ. ಅವರ ಬೆರಳಿಗೆ ಗಾಯವಾಗಿರುವ ಕಾರಣ ಆಡಲು ಸಾಧ್ಯವಾಗಲಿಲ್ಲ. ಎಂದು ಚೆನ್ನೈ ಸೂಪರ್​ ಕಿಂಗ್ಸ್ ತಂಡ ಹೇಳಿಕೆ ನೀಡಿದೆ.

ಒಂದೇ ಪಂದ್ಯದಲ್ಲಿ ಹಲವು ದಾಖಲೆ ಬರೆದ ಅಜಿಂಕ್ಯ ರಹಾನೆ

ಮುಂಬೈ ಇಂಡಿಯನ್ಸ್​ ವಿರುದ್ಧ ಸ್ಫೋಟಕ ಬ್ಯಾಟಿಂಗ್​ ನಡೆಸಿದ ಅಜಿಂಕ್ಯ ರಹಾನೆ ಈ ಪಂದ್ಯದಲ್ಲಿ ಹಲವು ದಾಖಲೆಯನ್ನು ಬರೆದಿದ್ದಾರೆ. ಅರ್ಷದ್ ಖಾನ್ ಅವರ ಒಂದೇ ಓವರ್​ನಲ್ಲಿ 1 ಸಿಕ್ಸ್​ ಹಾಗು 4 ಬೌಂಡರಿ ಬಾರಿಸಿ ಒಟ್ಟು 23 ರನ್​ ಬಾರಿಸಿ ಅಬ್ಬರಿಸಿದರು. ಈ ಸಿಡಿಲಬ್ಬರದ ಬ್ಯಾಟಿಂಗ್ ಪರಿಣಾಮ ರಹಾನೆ 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದು ಈ ಬಾರಿಯ ಐಪಿಎಲ್​ನಲ್ಲಿ ದಾಖಲಾದ ಅತ್ಯಂತ ವೇಗದ ಅರ್ಧಶತಕವಾಗಿದೆ. ಇದಕ್ಕೂ ಮುನ್ನ ಜಾಸ್ ಬಟ್ಲರ್ ಹಾಗೂ ಶಾರ್ದೂಲ್ ಠಾಕೂರ್ 20 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಇದೀಗ ಈ ದಾಖಲೆಯನ್ನು ರಹಾನೆ ಮುರಿದಿದ್ದಾರೆ.

ಕೇವಲ 19 ಎಸೆತಗಳಿಂದ ಅರ್ಧಶತಕ ಬಾರಿಸಿದ ರಹಾನೆ, ಚೆನ್ನೈ ಪರ ಅತಿ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಎರಡನೇ ಬ್ಯಾಟರ್​ ಎಂಬ ಹಿರಿಮೆ ಪಾತ್ರರಾದರು. 2014ರಲ್ಲಿ ಸುರೇಶ್​ ರೈನಾ ಅವರು 16 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಅಗ್ರ ಸ್ಥಾನ ಪಡೆದಿದ್ದಾರೆ. ಸಾರಸ್ಯವೆಂದರೆ ರೈನಾ ಕೂಡ ವಾಂಖೆಡೆ ಮೈದಾನದಲ್ಲಿಯೇ ಈ ಸಾಧನೆ ಮಾಡಿದ್ದರು. ಇದೀಗ ರಹಾನೆ ಕೂಡ ಇದೇ ಮೈದಾನದಲ್ಲಿ ಚೆನ್ನೈ ಪರ ಈ ಸಾಧನೆ ಮಾಡಿದ್ದಾರೆ.

ಮುಂಬೈ ವಿರುದ್ಧ ಐಪಿಎಲ್​ನಲ್ಲಿ ಅತಿ ವೇಗದ ಅರ್ಧಶತಕ ಸಿಡಿಸಿದವರ ಪಟ್ಟಿಯಲ್ಲಿ ರಹಾನೆ ಮೂರನೇ ಆಟಗಾರನಾಗಿ ಮೂಡಿಬಂದರು. ಪ್ಯಾಟ್​ ಕಮಿನ್ಸ್​ ಮುಂಬೈ ವಿರುದ್ಧ 14 ಎಸೆತಗಳಿಂದ ಅರ್ಧಶತಕ ಬಾರಿಸಿ ಅಗ್ರ ಸ್ಥಾನದಲ್ಲಿದ್ದಾರೆ. ದ್ವಿತೀಯ ಸ್ಥಾನದಲ್ಲಿ ರಿಷಭ್​ ಪಂತ್​ ಕಾಣಿಸಿಕೊಂಡಿದ್ದಾರೆ. ಪಂತ್​ 18 ಎಸೆತಗಳಿಂದ ಈ ಸಾಧನೆ ಮಾಡಿದ್ದರು.

ಇದನ್ನೂ ಓದಿ IPL 2023: ವಿರಾಟ್​ ಕೊಹ್ಲಿಯ ಐಪಿಎಲ್​ ದಾಖಲೆ ಮುರಿದ ಡೇವಿಡ್​ ವಾರ್ನರ್​

ಈ ಪಂದ್ಯದಲ್ಲಿ ಕೇವಲ 27 ಎಸೆತ ಎದುರಿಸಿದ ರಹಾನೆ ಮೂರು ಸಿಕ್ಸರ್​ ಮತ್ತು 7 ಬೌಂಡರಿ ಸಿಡಿಸಿ 61 ರನ್​ ಬಾರಿಸಿದರು. ಈ ಬ್ಯಾಟಿಂಗ್​ ಪ್ರದರ್ಶನದ ಮೂಲಕ ಅವರು ತನ್ನಲ್ಲಿ ಇನ್ನೂ ಟಿ20 ಕ್ರಿಕೆಟ್​ ಜೀವಂತವಾಗಿದೆ ಎಂಬ ಸ್ಪಷ್ಟ ಸಂದೇಶವೊಂದನ್ನು ನೀಡಿದ್ದಾರೆ. ಈ ಆವೃತ್ತಿಯ ಐಪಿಎಲ್​ನಲ್ಲಿ ಆಡಿದ ಮೊದಲ ಪಂದ್ಯ ಇದಾಗಿತ್ತು. ಜತೆಗೆ ಐಪಿಎಲ್​ನಲ್ಲಿ ರಹಾನೆ ಆಡಿದ 7ನೇ ತಂಡ ಚೆನ್ನೈ ಸೂಪರ್​ಕಿಂಗ್ಸ್​ ಆಗಿದೆ. ರಹಾನೆ ಅವರ ಈ ಬ್ಯಾಟಿಂಗ್​ ಪ್ರದರ್ಶನಕ್ಕೆ ಟೀಮ್​ ಇಂಡಿಯಾದ ಮಾಜಿ ಆಟಗಾರರಾದ ವೀರೇಂದ್ರ ಸೆಹವಾಗ್​, ಜಹೀರ್​ ಖಾನ್​, ಸುರೇಶ್​ ರೈನಾ ಸೇರಿ ಹಲವು ಕ್ರಿಕೆಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Exit mobile version