ಬರ್ಮಿಂಗ್ಹಮ್ : ಕಾಮನ್ವೆಲ್ತ್ ಗೇಮ್ಸ್-೨೦೨೨ರ (CWG-2022) ಕುಸ್ತಿ ಸ್ಪರ್ಧೆಯಲ್ಲಿ ಭಾರತಕ್ಕೆ ಮೂರನೇ ಚಿನ್ನದ ಪದಕ ಲಭಿಸಿದೆ. ಶುಕ್ರವಾರ ರಾತ್ರಿ ನಡೆದ ಪುರುಷರ ೮೬ ಕೆ.ಜಿ ಫ್ರೀಸ್ಟೈಲ್ ವಿಭಾಗದಲ್ಲಿ ಪಾಕಿಸ್ತಾನದ ಮುಹಮ್ಮದ್ ಇನಾಮ್ ಅವರನ್ನು ಮಣಿಸಿದ ದೀಪಕ್ ಪೂನಿಯಾ ಕೂಡ ಚಿನ್ನದ ಪದಕ ಬಾಚಿಕೊಂಡಿದ್ದಾರೆ. ಇದರೊಂದಿಗೆ ಭಾರತದ ಚಿನ್ನದ ಪದಕಗಳ ಸಂಖ್ಯೆ ೯ಕ್ಕೆ ಏರಿಕೆಯಾಗಿದೆ.
ಕಳೆದ ಬಾರಿಯ ಚಾಂಪಿಯನ್ ಪಾಕಿಸ್ತಾನದ ಸ್ಪರ್ಧಿಯ ವಿರುದ್ಧ ಅಮೋಘ ಪ್ರದರ್ಶನ ನೀಡಿದ ಭಾರತದ ಕುಸ್ತಿಪಟು ದೀಪಕ್ ಅವರು, ೩-೦ ಅಂತರದ ವಿಜಯ ಸಾಧಿಸಿದರು.
ದೀಪಕ್ ಅವರ ಚಿನ್ನದ ಪದಕದ ಸಾಧನೆಯೊಂದಿಗೆ ಭಾರತ ತಂಡ ಪದಕ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಏರಿತು. ೯ ಚಿನ್ನ, ಬೆಳ್ಳಿ ಹಾಗೂ ೭ ಕಂಚಿನ ಪದಕಗೊಂದಿಗೆ ಒಟ್ಟಾರೆಯಾಗಿ ೨೪ ಪದಕಗಳನ್ನು ಭಾರತದ ಅಥ್ಲೀಟ್‌ಗಳು ಗೆದ್ದಿದ್ದಾರೆ.
ದೀಪಕ್ ಅವರ ಅಬ್ಬರದ ಆಟಕ್ಕೆ ಪಾಕಿಸ್ತಾನದ ಎದುರಾಳಿ ಬಹುತೇಕ ಕಂಗಾಲಾಗಿ ಹೋಗಿದ್ದರು. ರಕ್ಷಣೆ ಹಾಗೂ ದಾಳಿಯ ವಿಚಾರದಲ್ಲಿ ಮೇಲುಗೈ ಸಾಧಿಸಿದ್ದ ದೀಪಕ್, ಸಲೀಸಾಗಿ ಅಂಕಗಳನ್ನು ಪಡೆದು ಬಂಗಾರಕ್ಕೆ ಮುತ್ತಿಟ್ಟರು.
ಅದಕ್ಕಿಂತ ಮೊದಲು ಭಾರತದ ಸ್ಟಾರ್ ಕುಸ್ತಿಪಟು ಬಜರಂಗ್ ಪೂನಿಯಾ ಕೂಡ ಬಂಗಾರದ ಪದಕ ಗೆದ್ದಿದ್ದರು. ಸಾಕ್ಷಿ ಮಲಿಕ್ ಚಿನ್ನದ ಪದಕ ಗೆದ್ದಿದ್ದರೆ, ಅನ್ಶು ಮಲಿಕ್ ಬೆಳ್ಳಿ ತಮ್ಮದಾಗಿಸಿಕೊಂಡಿದ್ದರು
ಇದನ್ನೂ ಓದಿ | CWG-2022 | ಸಾಕ್ಷಿ ಮಲಿಕ್‌ಗೆ ಚಿನ್ನದ ಪದಕ, ಭಾರತದ ಚಿನ್ನದ ಪದಕಗಳ ಸಂಖ್ಯೆ 8