ಬೆಂಗಳೂರು: ಇಲ್ಲಿನ ಡಾ.ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ನಡೆದ ಭಾರತ ಮಹಿಳಾ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡಗಳ ನಡುವಿನ ಎರಡನೇ ಟಿ 20 ಪಂದ್ಯವು ಅನೇಕ ದಾಖಲೆಗಳಿಗೆ ಕಾರಣವಾಯಿತು. 1-0 ಮುನ್ನಡೆಯೊಂದಿಗೆ ಭಾರತವು ಹೆಚ್ಚಿನ ಆತ್ಮವಿಶ್ವಾಸದೊಂದಿಗೆ ಕಣಕ್ಕೆ ಇಳಿಯಿತು. ಆದರೆ ಅಂತಿಮವಾಗಿ ಮೊದಲ ಟಿ 20 ಪಂದ್ಯದ ಪ್ರದರ್ಶನವನ್ನು ಪುನರಾವರ್ತಿಸಲು ವಿಫಲವಾಯಿತು. ಮುಖಾಮುಖಿಯನ್ನು ಆಸ್ಟ್ರೇಲಿಯಾ ಆರು ವಿಕೆಟ್ಗಳಿಂದ ಗೆದ್ದಿತು. ಭಾರತದ ಪರ ಆಲ್ರೌಂಡರ್ ದೀಪ್ತಿ ಶರ್ಮಾ (Deepti Sharma) ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 1,000 ರನ್ ಮತ್ತು 100 ಪ್ಲಸ್ ವಿಕೆಟ್ ಪಡೆದ ಭಾರತ ಮೊದಲ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪಂದ್ಯಕ್ಕೂ ಮುನ್ನ ದೀಪ್ತಿ ಶರ್ಮಾ 971 ರನ್ ಹಾಗೂ 110 ವಿಕೆಟ್ ಕಬಳಿಸಿದ್ದರು. 26ರ ಹರೆಯದ ಸ್ಪಿನ್ನರ್ 27 ಎಸೆತಗಳಲ್ಲಿ 30 ರನ್ ಗಳಿಸುವ ಜತೆಗೆ ಆಸ್ಟ್ರೇಲಿಯಾದ 2 ವಿಕೆಟ್ ಕಬಳಿಸಿದ್ದರು. ಈ ವೇಳೆ ಅವರು ಸಾವಿರ ರನ್ಗಳ ಗಡಿ ದಾಟಿ ಪಾಂಡ್ಯ, ಯುವರಾಜ್ ಸಿಂಗ್ ದಾಖಲೆ ಮುರಿದರು.
2023ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ನಲ್ಲಿಯೇ 100 ಟಿ20 ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಶರ್ಮಾ ಪಾತ್ರರಾಗಿದ್ದರು . 112 ವಿಕೆಟ್ಗಳನ್ನು ಪಡೆದಿರುವ ದೀಪ್ತಿ ಶರ್ಮಾ ಪುರುಷರ ಮತ್ತು ಮಹಿಳಾ ಕ್ರಿಕೆಟ್ ಸೇರಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.
ಆಗ್ರಾ ಮೂಲದ ಈ ಬೌಲರ್ ಇತ್ತೀಚೆಗೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಭಾರತಕ್ಕಾಗಿ ಆಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ನಲ್ಲಿ ರೋಹಿತ್ ಶರ್ಮಾ 67 ಮತ್ತು 20 ರನ್ ಗಳಿಸಿದ್ದಾರೆ. 39 ರನ್ಗಳನ್ನು ನೀಡಿ 9 ವಿಕೆಟ್ ಉರುಳಿಸಿದ್ದಾರೆ. ಟಿ20 ಸರಣಿಯ ನಿರ್ಣಾಯಕ ಪಂದ್ಯವು ಜನವರಿ 9ರಂದು ನವೀ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಮ್ನಲ್ಲಿ ನಡೆಯಲಿದೆ. ಭಾನುವಾರದ ಪಂದ್ಯಕ್ಕೆ 42,618 ಪ್ರೇಕ್ಷಕರು ಸಾಕ್ಷಿಯಾಗಿರುವುದು ಕೂಡ ಹೆಗ್ಗಳಿಕೆಯ ಸಂಗತಿಯಾಗಿ.
ವಿಂಡೀಸ್ ದೈತ್ಯ ವಿವ್ ರಿಚರ್ಡ್ಸ್ ಸಾಧನೆ ಸರಿಗಟ್ಟಿದ ರಾಜಸ್ಥಾನ್ ರಾಯಲ್ಸ್ ಬ್ಯಾಟರ್
ಬೆಂಗಳೂರು: ರಾಜಸ್ಥಾನ್ ರಾಯಲ್ಸ್ ತಂಡ ಮಧ್ಯಮ ಕ್ರಮಾಂಕದ ಬ್ಯಾಟರ್ ರಿಯಾನ್ ಪರಾಗ್ (Riyan Parag) ದೇಶೀಯ ಕ್ರಿಕೆಟ್ನಲ್ಲಿ ಅದ್ಭುತ ಹೆಸರು. ಸ್ಫೋಟಕ ಬ್ಯಾಟಿಂಗ್ಗೆ ಪ್ರಖ್ಯಾತಿ ಪಡೆದವರು. ಅತ್ಯಂತ ಚಿಕ್ಕ ವಯಸ್ಸಿನಲ್ಲಿ, ಅವರು ಅಸ್ಸಾಂ ಕ್ರಿಕೆಟ್ ತಂಡದ ನಾಯಕರಾಗಿದ್ದಾರೆ. ದುರದೃಷ್ಟವಶಾತ್, ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಪೂರಕ ಪ್ರದರ್ಶನ ನೀಡದ ಕಾರಣ ಅವರು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ಗೆ ಒಳಗಾಗುತ್ತಾರೆ. ಆದರೆ ಪ್ರಸ್ತುತ ನಡೆಯುತ್ತಿರುವ ದೇಶೀಯ 2023-24ರ (Ranji Trophy 2023-24) ಋತುವು ಯುವ ಆಟಗಾರನಿಗೆ ಸ್ಮರಣೀಯವ ಎನಿಸಲಿದೆ. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ (ಟಿ 20 ಪಂದ್ಯಾವಳಿ) ಯಲ್ಲಿ ತಂಡದ ಪರ ಮಿಂಚಿದ ನಂತರ ಪರಾಗ್ ರಣಜಿ ಟ್ರೋಫಿಯಲ್ಲೂ ಭರ್ಜರಿ ಆರಂಭ ಮಾಡಿದ್ದಾರೆ.
ಇದನ್ನೂ ಓದಿ : Heinrich Klaasen : ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟರ್ ಟೆಸ್ಟ್ಗೆ ವಿದಾಯ
ರಾಯ್ಪುರದಲ್ಲಿ ನಡೆಯುತ್ತಿರುವ ರಣಜಿ ಮುಖಾಮುಖಿಯಲ್ಲಿ ಛತ್ತೀಸ್ಗಢ ತಂಡದ ವಿರುದ್ಧ 3ನೇ ದಿನ (ಜನವರಿ 8) ಅವರು 56 ಎಸೆತಗಳಲ್ಲಿ ಶತಕ ಬಾರಿಸಿದ್ದಾರೆ. ಅಸ್ಸಾಂ ತನ್ನ ಇನ್ನಿಂಗ್ಸ್ನಲ್ಲಿ 254 ರನ್ಗಳಿಗೆ ಆಲ್ಔಟ್ ಆಯಿತು. ಆದರೆ ನಾಯಕ ರಿಯಾನ್ ಏಕಾಂಗಿಯಾಗಿ 87 ಎಸೆತಗಳಲ್ಲಿ 178.16 ಸ್ಟ್ರೈಕ್ ರೇಟ್ನಲ್ಲಿ 155 ರನ್ ಗಳಿಸಿದ್ದಾರೆ. ಅವರ ಇನಿಂಗ್ಸ್ನಲ್ಲಿ 11 ಫೋರ್ ಹಾಗೂ 12 ಸಿಕ್ಸರ್ಗಳಿವೆ.
ಪರಾಗ್ ಅವರ 56 ಎಸೆತಗಳ ಶತಕವು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಭಾರತೀಯ ಆಟಗಾರರೊಬ್ಬರ ನಾಲ್ಕನೇ ವೇಗದ ಶತಕವಾಗಿದೆ. ಈ ಮೂಲಕ ಅವರು ವೆಸ್ಟ್ ಇಂಡೀಸ್ನ ಮಾಜಿ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್ ಅವರ ಸಾಧನೆಯನ್ನೂ ಸರಿಗಟ್ಟಿದ್ದಾರೆ. ರಿಚರ್ಡ್ಸ್ 1985-86ರ ಋತುವಿನಲ್ಲಿ ಇಂಗ್ಲೆಂಡ್ ವಿರುದ್ಧ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 56 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಅಸ್ಸಾಂನವರೇ ಆದ ಆರ್.ಕೆ.ಬೋರಾ 1987-88ರ ಋತುವಿನಲ್ಲಿ ತ್ರಿಪುರಾ ವಿರುದ್ಧ 56 ಎಸೆತಗಳಲ್ಲಿ ಶತಕ ಗಳಿಸಿದ್ದರು.