ಧರ್ಮಶಾಲಾ: ಐಪಿಎಲ್ 2023ರ 64 ನೇ ಪಂದ್ಯದಲ್ಲಿ (IPL 2023) ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯವೂ ವಿವಾದಾತ್ಮಕ ಕ್ಷಣಕ್ಕೆ ಸಾಕ್ಷಿಯಾಯಿತು. ಪಂಜಾಬ್ ತಂಡದ ಇನ್ನಿಂಗ್ಸ್ನ ಕೊನೆಯ ಓವರ್ ಎಸೆದ ಇಶಾಂತ್ ಶರ್ಮಾ ನಾಲ್ಕನೇ ಎಸೆತವನ್ನು ಸೊಂಟದ ಎತ್ತರದ ಫುಲ್ಟಾಸ್ ಎಸೆದಿದ್ದರು ಬ್ಯಾಟರ್ ಲಿಯಾಮ್ ಲಿವಿಂಗ್ಸ್ಟನ್ ಅದನ್ನು ಸಿಕ್ಸರ್ಗಟ್ಟಿದ್ದರು. ಆನ್ಫೀಲ್ಡ್ ಅಂಪೈರ್ ತಕ್ಷಣ ಅದನ್ನು ನೋ ಬಾಲ್ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಡೆಲ್ಲಿ ನಾಯಕ ಡೇವಿಡ್ ವಾರ್ನರ್ ನಿರ್ಧಾರವನ್ನು ಪರಿಶೀಲಿಸಿದರು. ಮೂರನೇ ಅಂಪೈರ್ ಅಂಪೈರ್ಗಳ ತೀರ್ಪನ್ನು ಎತ್ತಿ ಹಿಡಿದರು.
ಬಾಲ್ ಟ್ರ್ಯಾಕಿಂಗ್ ಪ್ರಕಾರ ಚೆಂಡು ಬೇಲ್ಸ್ಗೆ ಬಡಿಯುವಂತಿದೆ. ಅಲ್ಲದೆ, ಚೆಂಡನ್ನು ಎದುರಿಸುವ ವೇಳೆ ಬ್ಯಾಟರ್ ಲಿವಿಂಗ್ಸ್ಟನ್ ಕೂಡ ಬಾಗಿದ್ದರು. ಆದರೆ ಮೂರನೇ ಅಂಪೈರ್ ನೋ ಬಾಲ್ ಕರೆಯೇ ಕೊಟ್ಟರು. ಇದು ವಿವಾದಕ್ಕೆ ಕಾರಣವಾಯಿತು. ಪಂದ್ಯದ ಕೊನೆಯಲ್ಲಿ ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ ಅವರು ಸೊಂಟದ ಎತ್ತರದ ನೋ ಬಾಲ್ಗಳನ್ನು ನಿರ್ಣಯ ಮಾಡುವಲ್ಲಿ ಅಂಪೈರ್ಗಳು ಮಾಡುವ ಪ್ರಮಾದವನ್ನು ವಿವರಿಸಿದರು. ಅಲ್ಲದೆ, ಈ ನಿರ್ಧಾರದಲ್ಲಿ ಏಕ ರೀತಿಯ ನಿರ್ಧಾರಗಳು ಪ್ರಕಟವಾಗುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದ್ದರು. ಇದೇ ವಿಷಯವನ್ನು ಉಲ್ಲೇಖಿಸಿ ಮಾತನಾಡಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮಾಲೀಕ ಪಾರ್ಥ್ ಜಿಂದಾಲ್, ಇಶಾಂತ್ ಶರ್ಮಾ ಅವರು ಹಾಕಿರುವ ಎಸೆತ ನೋ ಬಾಲ್ ಎಂದಾದರೆ ಡಬ್ಲ್ಯುಪಿಎಲ್ ಟೂರ್ನಿಯ ಫೈನಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಬ್ಯಾಟರ್ ಔಟಾಗಿರುವ ಎಸೆತವೂ ನೋ ಬಾಲ್ ಆಗುತ್ತದೆ ಎಂದು ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
ಮೂರನೇ ಅಂಪೈರ್ ಅವರ ಸೊಂಟದ ಎತ್ತರದ ನೋ-ಬಾಲ್ ತೀರ್ಪು ನೀಡುವಾಗ ಸ್ಥಿರತೆ ಕಾಯ್ದುಕೊಳ್ಳುವುದಿಲ್ಲ. ಇಂಥ ನಿರ್ಧಾರಗಳು ನಿರ್ಣಾಯಕವಾಗಿರುತ್ತವೆ ಎಂದು ಹರ್ಷ ಬೋಗ್ಲೆ ಟ್ವೀಟ್ ಮಾಡಿದ್ದರು. ಈ ಟ್ವೀಟ್ಗೆ ಪಾರ್ಥ ಪ್ರತಿಕ್ರಿಯೆ ನೀಡಿ,ದ್ದು ನನಗೆ ಈ ನಿಯಮವನ್ನು ಗಂಭೀರವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಡಬ್ಲ್ಯುಪಿಎಲ್ ಫೈನಲ್ನಲ್ಲಿ ನಮ್ಮ ತಂಡದ ಬ್ಯಾಟರ್ ಶೆಫಾಲಿ ವರ್ಮಾ ಅವರನ್ನು ಔಟ್ ಮಾಡಿದ ಚೆಂಡು ಇದೇ ಮಾದರಿಯಲ್ಲಿತ್ತು. ಇಂದಿನ ನಿಯಮ ಅನ್ವಯವಾಗುವುದಾದರೆ ಶಫಾಲಿ ಔಟ್ ಅಲ್ಲ. ಅದು ನೋ ಬಾಲ್. ಹಾಗಾದರೆ ನಿಯಮ ಏನು ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ : IPL 2023: ಪ್ಲೇ ಆಫ್ ಕನಸು ಕಂಡಿದ್ದ ಪಂಜಾಬ್ ಕಾಲೆಳೆದ ಡೆಲ್ಲಿ ಕ್ಯಾಪಿಟಲ್ಸ್
ವಿಶೇಷವೆಂದರೆ, ಮಾರ್ಚ್ನಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ 2023ರ ಫೈನಲ್ನ ಮೊದಲ ಇನ್ನಿಂಗ್ಸ್ನ ಎರಡನೇ ಓವರ್ನಲ್ಲಿ ಶೆಫಾಲಿ ವರ್ಮಾ ಔಟಾಗಿದ್ದರು. ಡೆಲ್ಲಿ ಕ್ಯಾಪಿಟಲ್ಸ್ನ ಆರಂಭಿಕ ಆಟಗಾರ್ತಿ, ಮುಂಬಯಿ ತಂಡದ ಬೌಲರ್ ಇಸ್ಸಿ ವಾಂಗ್ ಸೊಂಟದ ಎತ್ತರಕ್ಕೆ ಎಸೆದಿದ್ದದ್ದರು. ಅದಕ್ಕೆ ಭರ್ಜರಿ ಪ್ರತಿಕ್ರಿಯೆ ನೀಡಲು ಹೋದ ಶಫಾಲಿ ಔಟ್ ಆಗಿದ್ದರು. ಬಳಿಕ ನೋಬಾಲ್ ಪರಿಶೀಲನೆ ಮಾಡಿದಾಗ ಅದು ಸೊಂಟದ ಮೇಲಿತ್ತು ಎಂಬುದನ್ನು ತೋರಿಸಿತ್ತು. ಅಲ್ಲದೆ, ಚೆಂಡನ್ನು ಎದುರಿಸುವಾಗ ಶಫಾಲಿ ಜಿಗಿದಿರಲಿಲ್ಲ. ಹೀಗಾಗಿ ಅದು ಕೂಡ ನೋ ಬಾಲ್ ಎಂಬುದು ಪಾರ್ಥ ಅವರ ಹೇಳಿಕೆ.
ನೋ ಬಾಲ್ ವಿವಾದ ಹೊಸದಲ್ಲ
ಇದಕ್ಕೂ ಮುನ್ನ ಸನ್ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಐಪಿಎಲ್ 58ನೇ ಪಂದ್ಯದದ ವೇಳೆಯೂ ನೋ ಬಾಲ್ ವಿವಾದ ಉಂಟಾಗಿತ್ತು. ಎಸ್ಆರ್ಎಚ್ ಇನಿಂಗ್ಸ್ನ 19 ನೇ ಓವರ್ನಲ್ಲಿ ಅಬ್ದುಲ್ ಸಮದ್ ವಿರುದ್ಧದ ಮೂರನೇ ಎಸೆತವನ್ನು ಫೀಲ್ಡ್ ಅಂಪೈರ್ ನೋ ಬಾಲ್ ಸಂಕೇತ ನೀಡಿದ್ದರು. ಎಲ್ಎಸ್ಜಿ ನಾಯಕ ಕೃಣಾಲ್ ಪಾಂಡ್ಯ ಈ ನಿರ್ಧಾರವನ್ನು ಮರುಪರಿಶೀಲಿಸಿದರು. ಆಗಲೂ ಚೆಂಡು ಕೆಳ ಹಂತದಲ್ಲಿತ್ತು. ಹೀಗಾಗಿ ಅಂಪೈರ್ ಅದನ್ನು ನೋ ಬಾಲ್ ಎಂದೇ ಪರಿಗಣಿಸಿದರು. ಈ ರೀತಿಯಾಗಿ ಹಾಲಿ ಆವೃತ್ತಿಯ ಐಪಿಎಲ್ನಲ್ಲಿ ನೊ ಬಾಲ್ ವಿವಾದಗಳು ಸತತವಾಗಿ ಎದುರಾಗುತ್ತಿವೆ.