Site icon Vistara News

IPL 2024 : ರೋಹಿತ್ ಶರ್ಮಾ ಖರೀದಿಸಲು ಹೊಂಚು ಹಾಕಿದ ಡೆಲ್ಲಿ ಕ್ಯಾಪಿಟಲ್ಸ್​

Rohit Sharma

ಮುಂಬಯಿ: ಬಹುನಿರೀಕ್ಷಿತ ಐಪಿಎಲ್ 2024 ಹರಾಜಿಗೆ ಮುಂಚಿತವಾಗಿ ಆಟಗಾರರ ವ್ಯಾಪಾರ, ಬಿಡುಗಡೆಗಳ ಸುದ್ದಿ ಪ್ರತಿದಿನ ಹೊರಹೊಮ್ಮುತ್ತಿವೆ. ಹತ್ತು ಫ್ರಾಂಚೈಸಿಗಳಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿದೆ. ಆದಾಗ್ಯೂ, ಕಳೆದ ಕೆಲವು ದಿನಗಳ ಅತಿದೊಡ್ಡ ಸುದ್ದಿಯೆಂದರೆ ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್ (ಎಂಐ) ನಾಯಕರನ್ನಾಗಿ ನೇಮಿಸಿದ್ದು. ವಿಶೇಷವೆಂದರೆ ಪಾಂಡ್ಯ ಎರಡು ವರ್ಷಗಳ ನಂತರ ಗುಜರಾತ್ ಟೈಟಾನ್ಸ್ ತಂಡಿದಂದ ಆಟಗಾರರ ಟ್ರೇಡಿಂಗ್​ ಮೂಲಕ ಮೂಲಕ ಎಂಐಗೆ ಮರಳಿದ್ದರು. ತಕ್ಷಣವೇ ಅವರು ನಾಯಕನ ಸ್ಥಾನ ತಮ್ಮದಾಗಿಸಿಕೊಂಡರು. ಇದು ಅಚ್ಚರಿಯ ಬೆಳವಣಿಗೆಯಾಗಿತ್ತು.

ತಮ್ಮ ಹಳೆಯ ಫ್ರಾಂಚೈಸಿಗೆ ಮರಳಿದ ಕೆಲವು ವಾರಗಳಲ್ಲಿಯೇ ಪಾಂಡ್ಯ. 11 ವರ್ಷಗಳ ಸುದೀರ್ಘ ನಾಯಕತ್ವದ ಅಧಿಕಾರಾವಧಿಯಲ್ಲಿ ಮುಂಬೈ ತಂಡವನ್ನು ದಾಖಲೆಯ ಐದು ಐಪಿಎಲ್ ಪ್ರಶಸ್ತಿಗಳ ಕಡೆಗೆ ಮುನ್ನಡೆಸಿದ ಶರ್ಮಾ ಅವರ ಸ್ಥಾನವನ್ನು ತುಂಬಿದ್ದಾರೆ. ಏತನ್ಮಧ್ಯೆ, ಐಪಿಎಲ್ 2024 ಕ್ಕೆ ಮುಂಚಿತವಾಗಿ ರೋಹಿತ್ ಶರ್ಮಾ ಅವರನ್ನು ತಮ್ಮ ತಂಡಕ್ಕ ಸೇರಿಸಿಕೊಳ್ಳುವುದಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಮುಂಬೈ ಇಂಡಿಯನ್ಸ್ ಅನ್ನು ಸಂಪರ್ಕಿಸಿದೆ ಎಂಬುದಾಗಿ ಸುದ್ದಿಯಾಗಿದೆ.

ಮುಂದಿನ ಆವೃತ್ತಿಯಲ್ಲಿ ತಮ್ಮ ನಿಯಮಿತ ನಾಯಕ ರಿಷಭ್ ಪಂತ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡುವ ಸಾಧ್ಯತೆಗಳೇ ಹೆಚ್ಚಿದೆ. ಮುಂಬರುವ ಋತುವಿನಲ್ಲಿ ಅನುಭವಿ ಆಟಗಾರನನ್ನು ತಮ್ಮ ತಂಡದ ನಾಯಕನನ್ನಾಗಿ ಮಾಡಲು ಡಿಸಿ ಬಯಸಿದೆ ಎಂದು ವರದಿಯಾಗಿದೆ. ಆದಾಗ್ಯೂ, ಎಂಐ ರೋಹಿತ್ ಅವರನ್ನು ಬಿಡುಗಡೆ ಮಾಡಲು ಒಪ್ಪಿಲ್ಲ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ಪ್ರಸ್ತಾಪವನ್ನು ನಿರಾಕರಿಸಿತು ಎನ್ನಲಾಗಿದೆ. 17.50 ಕೋಟಿ ರೂಪಾಯಿ ಮೌಲ್ಯದ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 17.50 ಕೋಟಿ ರೂ.ಗೆ ಖರೀದಿಸಿತು. ಇದರಿಂದ ಸೃಷ್ಟಿಯಾದ ಮೊತ್ತವನ್ನು ಪಾಂಡ್ಯ ಗೆ ಹೂಡಿಕೆ ಮಾಡಿತ್ತು ಮುಂಬಯಿ ಇಂಡಿಯನ್ಸ್​

ರೋಹಿತ್ ಶರ್ಮಾ ಐಪಿಎಲ್​​ನಲ್ಲಿ ಜಂಟಿ ಅತ್ಯಂತ ಯಶಸ್ವಿ ನಾಯಕ

ವಿಶೇಷವೆಂದರೆ, 2013 ರಲ್ಲಿ ನಾಯಕತ್ವದ ಕರ್ತವ್ಯಗಳನ್ನು ವಹಿಸಿಕೊಂಡ ನಂತರ ಮುಂಬೈ ತಂಡವನ್ನು ಐದು ಐಪಿಎಲ್ ಪ್ರಶಸ್ತಿಗಳಿಗೆ ಮುನ್ನಡೆಸಿದ ಶರ್ಮಾ ಐಪಿಎಲ್ ಇತಿಹಾಸದಲ್ಲಿ ಜಂಟಿ ಅತ್ಯಂತ ಯಶಸ್ವಿ ನಾಯಕರಾಗಿದ್ದಾರೆ. ಪಂದ್ಯಾವಳಿಯ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅವರು ನಾಲ್ಕನೇ ಸ್ಥಾನದಲ್ಲಿದ್ದಾರೆ, 238 ಇನ್ನಿಂಗ್ಸ್​ಗಳಿಂದ 29.57 ಸರಾಸರಿ ಮತ್ತು 130.04 ಸ್ಟ್ರೈಕ್ ರೇಟ್ನೊಂದಿಗೆ 6211 ರನ್ ಗಳಿಸಿದ್ದಾರೆ.

ಇದನ್ನೂ ಓದಿ: Ashes 2023 : ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ 2 ವಿಕೆಟ್​​ ವಿರೋಚಿತ ವಿಜಯ

ಆರಂಭಿಕ ಬ್ಯಾಟರ್​​ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಒಂದು ಶತಕ ಮತ್ತು 42 ಅರ್ಧಶತಕಗಳನ್ನು ಗಳಿಸಿದ್ದಾರೆ ಮತ್ತು ಪಂದ್ಯಾವಳಿಯ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ಸಿಕ್ಸರ್​ಗಳನ್ನು (257) ಹೊಂದಿದ್ದಾರೆ. ಆದಾಗ್ಯೂ, ಶರ್ಮಾ ಪಂದ್ಯಾವಳಿಯ ಕಳೆದ ಕೆಲವು ಋತುಗಳಲ್ಲಿ ಬ್ಯಾಟ್​​ನಲ್ಲಿ ಕಳಪೆ ಪ್ರದರ್ಶನವನ್ನು ನೀಡುತ್ತಿದ್ದಾರೆ. ಮುಂಬರುವ ಋತುವಿನಲ್ಲಿ ನಾಯಕತ್ವದ ಹೊರೆಯನ್ನು ಕೆಳಗಿಳಿಸಿ ವಿಷಯಗಳನ್ನು ಬದಲಾಯಿಸಲು ಉತ್ಸುಕರಾಗಿದ್ದಾರೆ.

Exit mobile version