ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ನ 17 ನೇ ಆವೃತ್ತಿಗೆ ಮುಂಚಿತವಾಗಿ ಪ್ರಮುಖ ಬೆಳವಣಿಗೆಯಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಭಾರತದ ಆರಂಭಿಕ ಆಟಗಾರ ಪೃಥ್ವಿ ಶಾ ಅವರನ್ನು ಉಳಿಸಿಕೊಂಡಿದೆ ಎಂದು ವರದಿಯಾಗಿದೆ. ಆರಂಭಿಕ ವರದಿಗಳು ಶಾ ಅವರನ್ನು ಕ್ಯಾಪಿಟಲ್ಸ್ ಬಿಡುಗಡೆ ಮಾಡುತ್ತದೆ ಎಂದು ಹೇಳಿಕೊಂಡಿವದ್ದವು. ಆದರೆ ಫ್ರಾಂಚೈಸಿ ತನ್ನ ಮನಸ್ಸನ್ನು ಬದಲಾಯಿಸಿದೆ ಎಂದು ಹೇಳಲಾಗಿದೆ.
ಕೌಂಟಿ ಕ್ರಿಕೆಟ್ನಲ್ಲಿ ನಾರ್ಥಾಂಪ್ಟನ್ಶೈರ್ ಪರ ಆಡುವಾಗ ಉಂಟಾದ ಮೊಣಕಾಲು ಗಾಯದಿಂದ ಶಾ ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಚೇತರಿಸಿಕೊಳ್ಳುತ್ತಿದ್ದಂತೆ, ಡಿಸಿ ತಂಡ ತಮ್ಮನ್ನು ಉಳಿಸಿಕೊಳ್ಳುವುದು ಬ್ಯಾಟರ್ ಪಾಲಿಗೆ ಒಳ್ಳೆಯ ಸುದ್ದಿ ಎಂದು ಹೇಳಬಹುದು.
“ಹೌದು, ಅವರನ್ನು ಐಪಿಎಲ್ -2024 ಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಉಳಿಸಿಕೊಂಡಿದೆ. ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಅದಕ್ಕಿಂತ ಮೊದಲು ರಣಜಿ ಟ್ರೋಫಿಗೆ ಅವರು ಫಿಟ್ ಆಗಿರಬೇಕು” ಎಂದು ಮೂಲವೊಂದು ತಿಳಿಸಿದೆ.
1.2 ಕೋಟಿ ರೂ ಸಂಭಾವನೆ
ಶಾ ಅವರನ್ನು 2018 ರಿಂದ 1.2 ಕೋಟಿ ರೂ.ಗೆ ಖರೀದಿಸಿದಾಗಿನಿಂದ ಕ್ಯಾಪಿಟಲ್ಸ್ನ ಭಾಗವಾಗಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಅವರು ಸೈಯದ್ ಮುಷ್ತಾಕ್ ಅಲಿ ಟಿ20 ಮತ್ತು ವಿಜಯ್ ಹಜಾರೆ ಟ್ರೋಫಿಯಂತಹ ಹಲವಾರು ಟೂರ್ನಿಗಳಿಂದ ಹೊರಗುಳಿದಿದ್ದಾರೆ. ಇದಲ್ಲದೆ, ಐಪಿಎಲ್ 2023 ರಲ್ಲಿ 24 ವರ್ಷದ ಆಟಗಾರ ಎಂಟು ಪಂದ್ಯಗಳಲ್ಲಿ 13.25 ರ ಕಳಪೆ ಸರಾಸರಿ ಮತ್ತು 124.71 ಸ್ಟ್ರೈಕ್ ರೇಟ್ನಲ್ಲಿ ಕೇವಲ 106 ರನ್ ಗಳಿಸಿದ್ದಾರೆ. ಅವರ ಕಳಪೆ ಋತುವಿನ ಬಗ್ಗೆ ಕ್ರಿಕೆಟ್ ಪಂಡಿತರ ಬೇಸರ ವ್ಯಕ್ತಪಡಿಸಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ಜತೆಗಿನ ಅವರ ಸಮಯ ಮುಗಿದಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದರು. ಆದಾಗ್ಯೂ, ಫ್ರಾಂಚೈಸಿ ಯುವಕನ ಮೇಲೆ ತಮ್ಮ ನಂಬಿಕೆಯನ್ನು ಉಳಿಸಿಕೊಂಡಿದೆ.
ಭಾರತ ಪರ ಪೃಥ್ವಿ ಶಾ ಆಟ
ಬಲಗೈ ಆರಂಭಿಕ ಬ್ಯಾಟರ್ ಪೃಥ್ವಿ ಭಾರತ ತಂಡ ಪರ 5 ಟೆಸ್ಟ್, 6 ಏಕದಿನ ಹಾಗೂ 1 ಟಿ20 ಪಂದ್ಯವನ್ನಾಡಿದ್ದಾರೆ., 528 ರನ್ ಗಳಿಸಿದ್ದಾರೆ. ಐಪಿಎಲ್ ದಾಖಲೆಗೆ ಸಂಬಂಧಿಸಿದಂತೆ ಬಲಗೈ ಬ್ಯಾಟರ್ 71 ಪಂದ್ಯಗಳಲ್ಲಿ 145.78 ಸ್ಟ್ರೈಕ್ ರೇಟ್ನಲ್ಲಿ 1694 ರನ್ ಗಳಿಸಿದ್ದಾರೆ. ಇದರಲ್ಲಿ 13 ಅರ್ಧಶತಕಗಳು ಸೇರಿವೆ. ಫಾರ್ಮ್ ಕೊರತೆ ಮತ್ತು ಗಾಯಗಳಿಂದಾಗಿ ಯುವ ಪಡೆ ನಡೆಸುತ್ತಿರುವ ಅವಕಾಶಗಳ ರೇಸ್ನಲ್ಲಿ ಹಿಂದೆ ಬಿದ್ದ ನಂತರ ಅವರು ನಿರಾಶಾರಾಗಿದ್ದರು. ಇದೀಗ ಮುಂದಿನ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ನಲ್ಲಿ ಅವಕಾಶ ಪಡೆದಿದ್ದು ಉತ್ತಮ ಪ್ರದರ್ಶನ ನೀಡುವ ಮೂಲಕ ಅಂತಾರಾಷ್ಟ್ರೀಯ ತಂಡದ ಬಾಗಿಲು ತಟ್ಟಲು ಮುಂದಾಗಬಹುದು.
ಇದನ್ನೂ ಓದಿ : ಅಪಘಾತ ಬಳಿಕ ವ್ಯಕ್ತಿಯ ಜೀವ ಉಳಿಸಿದ ಮೊಹಮ್ಮದ್ ಶಮಿ; ಎಷ್ಟು ಸಲ ಹೃದಯ ಗೆಲ್ತೀರಿ ಎಂದ ಜನ
ಶಾರ್ದೂಲ್ ಬಿಡುಗಡೆ
ಕೋಲ್ಕತಾ ನೈಟ್ ರೈಡರ್ಸ್ 2023 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ನಲ್ಲಿ ವ್ಯಾಪಾರದ ಮೂಲಕ ಸ್ವಾಧೀನಪಡಿಸಿಕೊಂಡ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಅವರನ್ನು ಕೈಬಿಡಲು ನಿರ್ಧರಿಸಿದೆ. 10.75 ಕೋಟಿ ರೂ.ಗಳೊಂದಿಗೆ ಠಾಕೂರ್ ಲೀಗ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಖರೀದಿ ಎನಿಸಿಕೊಂಡಿದ್ದರು. ಆದಾಗ್ಯೂ, 11 ಪಂದ್ಯಗಳಲ್ಲಿ 14.13 ರ ಕಳಪೆ ಸರಾಸರಿಯಲ್ಲಿ 113 ರನ್ ಮತ್ತು 11 ಪಂದ್ಯಗಳಲ್ಲಿ 10.46 ರ ಪ್ರಭಾವಶಾಲಿ ಎಕಾನಮಿಯಲ್ಲಿ ಕೇವಲ ಏಳು ವಿಕೆಟ್ಗಳನ್ನು ಪಡೆದುಕೊಂಡಿದ್ದರು. ಅಲ್ಲದೆ, ವಿಶ್ವ ಕಪ್ ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದ ಅವರು ಭಾರತ ತಂಡ ಪರವಾಗಿ ಹೆಚ್ಚಿನ ಪ್ರದರ್ಶನ ನೀಡಲು ನೀಡಲು ವಿಫಲಗೊಂಡಿದ್ದರು. ಹೀಗಾಗಿ ಅವರು ಅವಕಾಶ ನಷ್ಟ ಮಾಡಿಕೊಂಡಿದ್ದಾರೆ. ಅವರೀಗ ಡಿಸೆಂಬರ್ನಲ್ಲಿ ನಡೆಯುವ ಮಿನಿ ಹರಾಜಿನ ಪ್ರಕ್ರಿಯೆಯಲ್ಲಿ ಬೇರೆ ತಂಡಕ್ಕೆ ಸೇರಿಕೊಳ್ಳಬಹುದು.