Site icon Vistara News

WPL 2023: ಟಾಸ್​ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್​; ಬ್ಯಾಟಿಂಗ್​ ಆಹ್ವಾನ ಪಡೆದ ಆರ್​ಸಿಬಿ

Delhi Capitals Women have won the toss and have opted to field

Delhi Capitals Women have won the toss and have opted to field

ಮುಂಬಯಿ: ಮಹಿಳಾ ಪ್ರೀಮಿಯರ್​ ಲೀಗ್​ನ ಸೋಮವಾರದ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಟಾಸ್​ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್​ ಬೌಲಿಂಗ್​ ಆಯ್ದುಕೊಂಡಿದೆ. ಟಾಸ್​ ಸೋತ ಆರ್​ಸಿಬಿ ಬ್ಯಾಟಿಂಗ್​ ಆಹ್ವಾನ ಪಡೆದಿದೆ.

ನವೀ ಮುಂಬಯಿನ ಡಾ. ಡಿ.ವೈ ಪಾಟೀಲ್ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯ ಆರ್​ಸಿಬಿಗೆ ಪ್ರತಿಷ್ಠೆಯ ಪಂದ್ಯವಾಗಿದೆ. ಈ ಪಂದ್ಯದಲ್ಲಿಯೂ ಗೆಲುವು ಕಾಣದೇ ಹೋದರೆ ಮಂಧಾನಾ ಪಡೆ ಸತತ 5 ಸೋಲಿನೊಂದಿಗೆ ಫೈನಲ್​ ರೇಸ್​ನಿಂದ ಅಧಿಕೃತವಾಗಿ ಹೊರಬೀಳಲಿದೆ. ಹೀಗಾಗಿ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ.

ಆರ್​ಸಿಬಿ: ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ರಿಚಾ ಘೋಷ್ (ವಿಕೆಟ್​ಕೀಪರ್​), ಹೀತರ್‌ ನೈಟ್‌, ಶ್ರೇಯಾಂಕ ಪಾಟೀಲ್, ದಿಶಾ ಕಸಟ್‌, ಮೆಗಾನ್‌ ಶಟ್‌, ಆಶಾ ಶೋಭನಾ, ರೇಣುಕಾ ಸಿಂಗ್ ಠಾಕೂರ್, ಪ್ರೀತಿ ಬೋಸ್‌

ಇದನ್ನೂ ಓದಿ WPL 2023: ಡೆಲ್ಲಿ ವಿರುದ್ಧ ಗೆಲುವಿನ ಖಾತೆ ತರೆದೀತೇ ಆರ್​ಸಿಬಿ?

ಡೆಲ್ಲಿ ಕ್ಯಾಪಿಟಲ್ಸ್​: ಮೆಗ್‌ ಲ್ಯಾನಿಂಗ್‌ (ನಾಯಕಿ), ಶಫಾಲಿ ವರ್ಮ, ಜೆಮಿಮಾ ರೋಡ್ರಿಗಸ್‌, ಮರಿಜಾನ್‌ ಕಾಪ್‌, ಅಲೈಸ್‌ ಕ್ಯಾಪ್ಸಿ, ತನಿಯಾ ಭಾಟಿಯಾ, ಅರುಂಧತಿ ರೆಡ್ಡಿ, ಜೆಸ್‌ ಜೊನಾಸೆನ್‌, ರಾಧಾ ಯಾದವ್‌, ಶಿಖಾ ಪಾಂಡೆ,ತಾರಾ ನೋರಿಸ್‌.

Exit mobile version