Site icon Vistara News

IPL 2023 : ರಾಜಸ್ಥಾನ್​ ವಿರುದ್ಧ ಟಾಸ್​ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್​ ತಂಡದಿಂದ ಫೀಲ್ಡಿಂಗ್​ ಆಯ್ಕೆ

Delhi Capitals won the toss against Rajasthan and chose fielding

#image_title

ಗುವಾಹಟಿ: ಐಪಿಎಲ್​ನ 11ನೇ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಟ್​ ತಂಡದ ನಾಯಕ ಡೇವಿಡ್​ ವಾರ್ನರ್​ ಮೊದಲು ಬೌಲಿಂಗ್ ಮಾಡುವುದಾಗಿ ಹೇಳಿದ್ದಾರೆ. ಎದುರಾಳಿ ರಾಜಸ್ಥಾನ್​ ರಾಯಲ್ಸ್ ಬಳಗ ಮೊದಲು ಬ್ಯಾಟ್​ ಮಾಡಬೇಕಾಗಿದೆ.

ಪಂದ್ಯದಲ್ಲಿ ಯಾವ ರೀತಿಯ ಫಲಿತಾಂಶ ಮೂಡಿ ಬರುತ್ತದೆ ಎಂದು ಈಗಲೇ ಹೇಳುವುದು ಸಾಧ್ಯವಿಲ್ಲ. ಆದರೆ, ಈ ಪಂದ್ಯದ ಮೂಲಕವಾದರೂ ನಾವು ಉತ್ತಮ ಆರಂಭ ಪಡೆಯುವ ನಿರೀಕ್ಷೆ ಹೊಂದಿದ್ದೇವೆ. ನಮ್ಮ ತಂಡದಲ್ಲಿ ಒಂದು ಅನಿವಾರ್ಯ ಬದಲಾವಣೆ ಮಾಡಲಾಗಿದೆ. ಮಿಚೆಲ್ ಮಾರ್ಷ್​ ಬದಲಿಗೆ ರೋವ್ಮನ್​ ಪೊವೆಲ್ ಆಡಲಿದ್ದಾರೆ. ಸರ್ಫರಾಜ್​ ಖಾನ್​ ಹಾಗೂ ಮನೀಶ್​ ಪಾಂಡೆ ಆಡಲಿದ್ದಾರೆ ಎಂದು ಟಾಸ್ ಗೆದ್ದ ಬಳಿಕ ಡೇವಿಡ್​ ವಾರ್ನರ್​ ಹೇಳಿದ್ದಾರೆ.

ಸಂಜು ಸ್ಯಾಮ್ಸನ್​ ಮಾತನಾಡಿ ಪಿಚ್​ ಬ್ಯಾಟಿಂಗ್​ಗೆ ಹೆಚ್ಚು ನೆರವಾಗಲಿವೆ. ಹೀಗಾಗಿ ಬಿಗ್​ ಸ್ಕೋರಿಂಗ್​ ಮ್ಯಾಚ್ ನಡೆಯಲಿದೆ. ಪಿಚ್ ಯಾವ ರೀತಿ ಬದಲಿಸಲಿದೆ ಎಂಬುದನ್ನು ನೋಡಬೇಕಾಗಿದೆ. ನಮ್ಮ ತಂಡದಲ್ಲೂ ಬದಲಾವಣೆಗಳಿವೆ. ಇಂಪ್ಯಾಕ್ಟ್​​ ಪ್ಲೇಯರ್​ ನಿಯಮಕ್ಕೆ ಪೂರಕವಾಗಿ ತಂಡವನ್ನು ಬದಲಿಸುತ್ತೇವೆ ಎಂದು ಹೇಳಿದ್ದಾರೆ.

ಇತ್ತಂಡಗಳೂ ಈ ಹಿಂದಿನ ಪಂದ್ಯಗಳಲ್ಲಿ ಸೋಲು ಕಂಡಿದೆ. ಅದರಲ್ಲೂ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಹಾಲಿ ಆವೃತ್ತಿಯಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಸೋತಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮೊದಲ ಪಂದ್ಯ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಎರಡನೇ ಪಂದ್ಯದಲ್ಲಿ ಪರಾಜಯ ಕಂಡಿದೆ. ರಾಜಸ್ಥಾನ್ ರಾಯಲ್ಸ್​ ಬಳಗ ಮೊದಲ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ಗೆಲುವು ಕಂಡಿದ್ದರೆ ಎರಡನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋಲನುಭವಿಸಿತ್ತು. ಹೀಗಾಗಿ ಮತ್ತೆ ಗೆಲುವಿನ ಟ್ರ್ಯಾಕ್​ ಕಡೆಗೆ ಹೊರಳಲಿದೆ.

ಮಧ್ಯಾಹ್ನದ ಬಳಿಕ ಪಂದ್ಯ ಆರಂಭಗೊಳ್ಳುವ ಕಾರಣ ಇಬ್ಬನಿ ಪರಿಣಾಮದ ಲಾಭ ಇತ್ತಂಡಗಳಿಗೂ ಸಿಗುವುದಿಲ್ಲ. ಬ್ಯಾಟಿಂಗ್​ಗೆ ಪೂರಕವಾಗಿರುವ ಈ ಪಿಚ್​ನಲ್ಲಿ ವಿಕೆಟ್​ ಕಬಳಿಸುವುದಕ್ಕೆ ಬೌಲರ್​​ಗಳು ಶ್ರಮ ವಹಿಸಬೇಕಾಗುತ್ತದೆ. ಹೀಗಾಗಿ ಹಿಂದಿನ ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಲು ಪರದಾಡಿದ ಇತ್ತಂಡಗಳು ಬ್ಯಾಟರ್​ಗಳಿಗೆ ಇದು ಸಮಾಧಾನದ ವಿಷಯವಾಗಿದೆ.

ಇದನ್ನೂ ಓದಿ : IPL 2023 : ಅಮಿತ್​ ಮಿಶ್ರಾಗೆ ವರ್ಷ 40, ಡೈವ್​ ಹೊಡೆದು ಹಿಡಿದ ಕ್ಯಾಚ್​ ಸಕತ್​!

ಡೆಲ್ಲಿ ಕ್ಯಾಪಿಟಲ್ಸ್​ ತಂಡದ ನಿರ್ದೇಶಕ ಸೌರವ್​ ಗಂಗೂಲಿ ಅವರು ಅಕ್ಷರ್ ಪಟೇಲ್​ಗೆ ಮುಂಬಡ್ತಿ ಕೊಡುವ ಬಗ್ಗೆ ಮಾತನಾಡಿದ್ದಾರೆ. ಈ ಮೂಲಕ ಬ್ಯಾಟಿಂಗ್ ಬಲವನ್ನು ಹೆಚ್ಚಿಸುವ ಗುರಿ ಆ ತಂಡ ಹೊಂದಿದೆ.

ಇದುವರೆಗಿನ ಐಪಿಎಲ್​ ಇತಿಹಾಸದಲ್ಲಿ ಎರಡೂ ತಂಡಗಳು 26 ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗಿವೆ. ತಲಾ 13 ಪಂದ್ಯಗಳನ್ನು ಗೆಲ್ಲುವ ಮೂಲಕ ಸಮಬಲದ ಸಾಧನೆ ಮಾಡಿದೆ.

ತಂಡಗಳು ಇಂತಿವೆ

ರಾಜಸ್ಥಾನ್​ ರಾಯಲ್ಸ್​: ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ನ (ನಾಯಕ), ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮಾಯರ್​, ಧ್ರುವ್ ಜುರೆಲ್, ರವಿಚಂದ್ರನ್ ಅಶ್ವಿನ್, ಜೇಸನ್ ಹೋಲ್ಡರ್, ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಯುಜ್ವೇಂದ್ರ ಚಾಹಲ್.

ಡೆಲ್ಲಿ ಕ್ಯಾಪಿಟಲ್ಸ್​: ಡೇವಿಡ್ ವಾರ್ನರ್ (ಸಿ), ಮನೀಷ್ ಪಾಂಡೆ, ರಿಲೀ ರೊಸೊವ್, ರೋವ್‌ಮನ್ ಪೊವೆಲ್, ಲಲಿತ್ ಯಾದವ್, ಅಕ್ಸರ್ ಪಟೇಲ್, ಅಭಿಷೇಕ್ ಪೊರೆಲ್ (ಡಬ್ಲ್ಯೂ), ಅನ್ರಿಚ್ ನಾರ್ಟ್ಜೆ, ಖಲೀಲ್ ಅಹ್ಮದ್, ಕುಲದೀಪ್ ಯಾದವ್, ಮುಖೇಶ್ ಕುಮಾರ್

Exit mobile version