Site icon Vistara News

WPL 2023 : ಡೆಲ್ಲಿ ತಂಡದ ಗೆಲುವಿಗೆ 148 ರನ್​ ಗುರಿ, ಅರ್ಧ ಶತಕ ಬಾರಿಸಿದ ಲಾರಾ ವೋಲ್ವರ್ತ್​​, ಆ್ಯಶ್ಲೀ ಗಾರ್ಡ್ನರ್​​

Delhi team set a target of 148 runs, Laura Wolworth and Ashley Gardner hit half centuries

#image_title

ಮುಂಬಯಿ: ಮಹಿಳೆಯರ ಪ್ರೀಮಿಯರ್​ ಲೀಗ್​ನ (WPL 2023) 14ನೇ ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ ಗುಜರಾತ್​ ಜಯಂಟ್ಸ್​ ತಂಡ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು 147 ರನ್​ ಗಳಿಸಿದೆ. ಇದರೊಂದಿಗೆ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್​ ತಂಡ 148 ರನ್​ಗಳ ಗೆಲುವಿನ ಗುರಿಯನ್ನು ಪಡೆದುಕೊಂಡಿದೆ. ಗುಜರಾತ್​ ಪರ ಲಾರಾ ವೋಲ್ವರ್ತ್​​ (57) ಹಾಗೂ ಆ್ಯಶ್ಲೀ ಗಾರ್ಡ್ನರ್​ ( ಅಜೇಯ 51) ಅರ್ಧ ಶತಕಗಳನ್ನು ಬಾರಿಸಿದರು.

ಇಲ್ಲಿನ ಬ್ರಬೊರ್ನ್​ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ನಡೆದ ಹಣಾಹಣಿಯಲ್ಲಿ ಡೆಲ್ಲಿ ತಂಡ ಟಾಸ್​ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್​ ಮಾಡಲು ಅವಕಾಶ ಪಡೆದ ಗುಜರಾತ್​ ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಡೆಲ್ಲಿ ಪರ ಬೌಲಿಂಗ್​ನಲ್ಲಿ ಜೆಸ್​ ಜೊನಾಸೆನ್​ 38 ರನ್​ಗಳಿಗೆ 2 ವಿಕೆಟ್​ ಪಡೆದರು.

ಇದನ್ನೂ ಓದಿ : Virat Kohli : ಆರ್​ಸಿಬಿ ನಾಯಕತ್ವ ತ್ಯಜಿಸಿದ ಬಗ್ಗೆ ಮಾತನಾಡಿದ ವಿರಾಟ್ ಕೊಹ್ಲಿ, ಏನಂದರು ಅವರು?

ಮೊದಲು ಬ್ಯಾಟ್ ಮಾಡಿದ ಗುಜರಾತ್​ ತಂಡ ಸೋಫಿ ಡಂಕ್ಲಿ (4) ವಿಕೆಟ್​ ಔಟಾಗುವುದರೊಂದಿಗೆ ಆತಂಕಕ್ಕೆ ಸಿಲುಕಿತು. ಈ ವೇಳೆ ಜತೆಯಾದ ಲಾರಾ ಹಾಗೂ ಹರ್ಲಿನ್ ಡಿಯೋಲ್​ (31) ನಿಧಾನಗತಿಯಲ್ಲಿ ಬ್ಯಾಟ್​ ಮಾಡಿ ಇನಿಂಗ್ಸ್​ ಕಟ್ಟಿದರು. ಆದರೆ ಜೊನಾಸೆನ್​ ಎಸೆತಕ್ಕೆ ಭಾಟಿಯಾಗೆ ಕ್ಯಾಚ್ ನೀಡಿದ ಹರ್ಲಿನ್​ ಪೆವಿಲಿಯನ್​ ಕಡೆಗೆ ನಿರಾಸೆಯಿಂದ ನಡೆದರು. ಈ ವೇಳೆ ಕ್ರೀಸ್​ಗೆ ಇಳಿದ ಆ್ಯಶ್ಲೀ ಗಾರ್ಡ್ನರ್​ ಸ್ಫೋಟಕ ಬ್ಯಾಟ್​ ಮಾಡಿ 33 ಎಸೆತಗಳಲ್ಲಿ 9 ಫೋರ್​ಗಳ ಸಮೇತ ಅರ್ಧ ಶತಕ ಬಾರಿಸಿದರು.

Exit mobile version