ದೋಹಾ : ಜಿಯಾರ್ಜಿಯನ್ ಅರಾಸ್ಕೆಟಾ (೨೬ ಮತ್ತು ೩೨ನೇ ನಿಮಿಷ) ಾವರ ಅವಳಿ ಗೋಲ್‌ಗಳ ನೆರವಿನಿಂದ ಘಾನಾ ತಂಡದ ವಿರುದ್ಧ ಗೆಲುವು ಸಾಧಿಸಿದ ಹೊರತಾಗಿಯೂ ಉರುಗ್ವೆ ತಂಡ, ಫಿಫಾ ವಿಶ್ವ ಕಪ್‌ನ (FIFA World Cup) ನಾಕೌಟ್ ಹಂತಕ್ಕೆ ಪ್ರವೇಶ ಪಡೆಯಲು ವಿಫಲಗೊಂಡಿತು. ದಿನದ ಇನ್ನೊಂದು ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಪೋರ್ಚುಗಲ್ ತಂಡ ಸೋಲು ಕಂಡಿರುವುದೇ ಈ ಫಲಿತಾಂಶಕ್ಕೆ ಕಾರಣವಾಯಿತು. ಹೀಗಾಗಿ ಎಚ್ ಗುಂಪಿನಿಂದ ಪೋರ್ಚುಗಲ್ ಹಾಗೂ ದಕ್ಷಿಣ ಕೊರಿಯಾ ತಂಡಗಳು ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.
ಅಲ್ ಜಾನೊಬ್ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದಲ್ಲಿ ಆರಂಭದಿಂದಲೂ ಸಂಪೂರ್ಣ ಹಿಡಿತ ಸಾಧಿಸಿಕೊಂಡು ಆಡಿದ ಉರುಗ್ವೆ ಬಳಗ ಪ್ರಥಮಾರ್ಧಕ್ಕೆ ಮೊದಲೇ ಎರಡು ಗೋಲ್‌ಗಳನ್ನು ಬಾರಿಸುವ ಮೂಲಕ ಮುನ್ನಡೆ ಪಡೆದುಕೊಂಡಿತು. ಕೊನೇ ತನಕವೂ ಅದೇ ಗೋಲ್‌ಗಳನ್ನು ಕಾಪಾಡಿಕೊಂಡು ಜಯ ಸಾಧಿಸಿತು.
ಎಜುಕೇಷನ್ ಸಿಟಿ ಸ್ಟೇಡಿಯಮ್‌ನಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ ಪೋರ್ಚುಗಲ್ ತಂಡದ ವಿರುದ್ಧ ದಕ್ಷಿಣ ಕೊರಿಯಾ ೨-೧ ಗೋಲ್‌ಗಳಿಂದ ಜಯ ಸಾಧಿಸಿತು. ಕೊರಿಯಾ ಪರ ಕಿಮ್-ಯಾಂಗ್- ಗಾನ್ (೨೭ನೇ ನಿಮಿಷ) ಹಾಗೂ ಹಾಂಗ್- ಹೀ- ಚಾನ್ (೯೦+೧ ನಿಮಿಷ) ಗೋಲ್ ದಾಖಲಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾದರು. ಪೋರ್ಚುಗಲ್ ಪರ ರಿಕಾರ್ಡೊ ಹೊರ್ಟಾ (೫ನೇ ನಿಮಿಷ) ಗೋಲ್ ಬಾರಿಸಿದರು.
ಇದನ್ನೂ ಓದಿ | Fifa World Cup | ಫಿಫಾ ಫ್ಯಾನ್ ಫೆಸ್ಟಿವಲ್‌ನಲ್ಲಿ ತ್ರಿವರ್ಣ ಧ್ವಜ ನೆಲಕ್ಕೆ ಬೀಳಿಸಿದರೇ ನೋರಾ ಫತೇಹಿ?