ತಿರುವನಂತಪುರ : ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಅಮೋಘ ೮ ವಿಕೆಟ್‌ಗಳ ಜಯ ಸಾಧಿಸಿದ ಹೊರತಾಗಿಯೂ ಭಾರತ ತಂಡ ಟಿ೨೦ ಮಾದರಿಯಲ್ಲಿ ಕಳಪೆ ಸಾಧನೆಯೊಂದು ಮಾಡಿದೆ. ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ೨೦ ಓವರ್‌ಗಳಲ್ಲಿ ೮ ವಿಕೆಟ್‌ಗೆ ೧೦೬ ರನ್ ಬಾರಿಸಿತು. ಅದಕ್ಕೆ ಪ್ರತಿಯಾಗಿ ಆಡಿದ ಭಾರತ ತಂಡ ೧೬.೪ ಓವರ್‌ಗಳಲ್ಲಿ ೨ ವಿಕೆಟ್‌ಗೆ ೧೧೦ ರನ್ ಬಾರಿಸಿ ಜಯಶಾಲಿಯಾಗಿದೆ.
ಗುರಿ ಬೆನ್ನಟ್ಟಿದ ಭಾರತ ತಂಡ ಆರಂಭದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿತು. ಅಂತೆಯೆ ಆರು ಓವರ್‌ಗಳ ಪವರ್‌ಪ್ಲೇ ಅವಧಿಯಲ್ಲಿ ೧ ವಿಕೆಟ್ ಕಳೆದುಕೊಂಡು ೧೭ ರನ್ ಬಾರಿಸಿತು. ಈ ಮೂಲಕ ಟಿ೨೦ ಮಾದರಿಯ ಪವರ್‌ಪ್ಲೇನಲ್ಲಿ ಕನಿಷ್ಠ ರನ್ ಬಾರಿಸಿದ ಕಳಪೆ ಸಾಧನೆ ಮಾಡಿತು. ಈ ಹಿಂದೆ ೨೦೧೬ರ ಫೆಬ್ರವರಿ ೨೭ರಲ್ಲಿ ಪಾಕಿಸ್ತಾನ ವಿರುದ್ಧ ಪವರ್‌ಪ್ಲೇ ಅವಧಿಯಲ್ಲಿ ೨೧ ರನ್‌ಗಳಿಗೆ ೩ ವಿಕೆಟ್ ಕಳೆದುಕೊಂಡಿದ್ದು ಇದುವರೆಗಿನ ಕನಿಷ್ಠ ಸಾಧನೆಯಾಗಿತ್ತು.
ಪವರ್‌ಪ್ಲೇ ಅವಧಿಯಲ್ಲಿ ಭಾರತ ತಂಡ ಕನಿಷ್ಠ ಮೊತ್ತ ಪೇರಿಸಿರುವ ಹೊರತಾಗಿಯೂ ಬಳಿಕ ಜತೆ ಸೇರಿದ ಕೆ. ಎಲ್ ರಾಹುಲ್ (೫೧*) ಹಾಗೂ ಸೂರ್ಯಕುಮಾರ್ ಯಾದವ್ (೫೦*) ಮೂರನೇ ವಿಕೆಟ್‌ಗೆ ಮುರಿಯದ ೯೭ ರನ್ ಜತೆಯಾಟ ನೀಡಿ ಸುಲಭ ಗೆಲುವು ತಂದುಕೊಟ್ಟಿತು.
ಇದನ್ನೂ ಓದಿ | IND v/s WI T20| ಬೆಳಗಿದ ಸೂರ್ಯ; ಭಾರತಕ್ಕೆ ಅಧಿಕಾರಯುತ ಜಯ, ಸರಣಿ 2-1 ಮುನ್ನಡೆ