Site icon Vistara News

Devon Conway : ಸಿಎಸ್​ಕೆಯ ಆಟಗಾರನ ಪತ್ನಿಗೆ ಗರ್ಭಪಾತ; ಬೇಸರ ವ್ಯಕ್ತಪಡಿಸಿದ ದಂಪತಿ

Devon Conway

ಬೆಂಗಳೂರು : ನ್ಯೂಜಿಲೆಂಡ್ ಬ್ಯಾಟರ್​ ಹಾಗೂ ಚೆನ್ನೈ ಸೂಪರ್​ ಕಿಂಗ್ಸ್​​ ತಂಡ ಸಕ್ರಿಯ ಸದಸ್ಯ ಡೆವೊನ್ ಕಾನ್ವೇ (Devon Conway) ಮತ್ತು ಅವರ ಪತ್ನಿ ಕಿವ್ ವ್ಯಾಟ್ಸನ್ (KIW WATSON) ತಮಗೆ ಹುಟ್ಟಲಿದ್ದ ಮಗುವನ್ನು ಕಳೆದುಕೊಂಡಿದ್ದಾರೆ. ಕಿವ್​ ಅವರು ತಮಗೆ ಗರ್ಭಪಾತವಾಗಿರುವ (miscarriage) ಮಾಹಿತಿಯನ್ನು ಇನ್​ಸ್ಟಾಗ್ರಾಮ್​ ಮೂಲಕ ಪ್ರಕಟಿಸಿದ್ದಾರೆ. ತಮ್ಮ ದೀರ್ಘ ಕಾಲದ ಗೆಳತಿಯಾಗಿರುವ ಕಿವ್ ಅವರನ್ನು ಕಾನ್ವೇ 2020 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಏಪ್ರಿಲ್ 2022 ರಲ್ಲಿ ವಿವಾಹವಾಗಿದ್ದರು. ಕಾನ್ವೇ ನ್ಯೂಜಿಲೆಂಡ್ ತಂಡದ (New Zealand)​​ ಅತ್ಯುತ್ತಮ ಬ್ಯಾಟರ್​ಗಳಲ್ಲಿ ಒಬ್ಬರಾಗಿದ್ದಾರೆ.

ದಂಪತಿ 2024ರಲ್ಲಿ ತಮ್ಮ ಮೊದಲ ಮಗುವನ್ನು ನಿರೀಕ್ಷೆಯಲ್ಲಿದ್ದರು. ಡೆವೊನ್ ಕಾನ್ವೇ ಪ್ರಸ್ತುತ ರಾಷ್ಟ್ರೀಯ ಕರ್ತವ್ಯದಲ್ಲಿದ್ದಾರೆ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡುತ್ತಿದ್ದಾರೆ. ಸರಣಿಯ ಮೊದಲ ಪಂದ್ಯವು ತೌರಂಗದ ಮೌಂಟ್ ಮೌಂಗನುಯಿಯಲ್ಲಿರುವ ಬೇ ಓವಲ್​​ನಲ್ಲಿ ನಡೆದಿದೆ.

ಡೆವೊನ್ ಕಾನ್ವೇ ಅವರ ಪತ್ನಿ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಹ್ಯಾಂಡಲ್​ ಮೂಲಕ ಹೃದಯ ವಿದ್ರಾವಕ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಕಿಮ್ ವ್ಯಾಟ್ಸನ್ ಅವರು ಈ ಪರಿಸ್ಥಿತಿಯನ್ನು ಅನುಭವಿಸಿದ ಮೊದಲ ಮಹಿಳೆ ಅಲ್ಲ ಮತ್ತು ಈ ನೋವನ್ನು ಅನುಭವಿಸುವ ಇತರ ಮಹಿಳೆಯರ ಪರವಾಗಿ ಹೇಳಿದ್ದಾರೆ.

ಕಷ್ಟದ ಸಮಯ ಎಂದ ಕಿವ್​

ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್​​ನಲ್ಲಿ “ನಾನು ನನ್ನ ವೈಯಕ್ತಿಕ ಜೀವನದ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವವಳಲ್ಲ. ಆದರೆ ಗರ್ಭಪಾತದ ಕಠಿಣ ಸಮಯವನ್ನು ಅನುಭವಿಸಿದವಳು ನಾನೊಬ್ಬಳೇ ಅಲ್ಲ ಎಂದು ನನಗೆ ತಿಳಿದಿದೆ. ಆ ಬಗ್ಗೆ ನಾಚಿಕೆ ಅಥವಾ ಮುಜುಗರ ಅನುಭವಿಸಲು ನಾನು ಬಯಸುವುದಿಲ್ಲ. ನನ್ನ ಅನುಭವ ಮತ್ತು ಭಾವನೆಗಳ ಬಗ್ಗೆ ಮಾತನಾಡಲು ಮುಕ್ತನಾಗಿದ್ದೇನೆ. ಇದರಿಂದ ನಾನು ಇದೇ ರೀತಿಯ ನೋವನ್ನು ಅನುಭವಿಸುವ ಬೇರೆ ಮಹಿಳೆಯರಿಗೆ ಧೈರ್ಯ ತುಂಬಿದಂತೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : Rohit Sharma : ಮುಂಬೈ ಕೋಚ್​​ ವಿರುದ್ಧ ತಿರುಗಿ ಬಿದ್ರಾ ರೋಹಿತ್ ಶರ್ಮಾ?

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ 281 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಡೆವೊನ್ ಕಾನ್ವೇ ಬ್ಯಾಟ್​ನಲ್ಲಿ ಹೆಚ್ಚು ಮಿಂಚಲಿಲ್ಲ. ಎರಡೂ ಇನಿಂಗ್ಸ್​ಗಳಲ್ಲಿ 1 ಮತ್ತು 29 ರನ್ ಗಳಿಸಿದ್ದಾರೆ. ಸರಣಿಯ ಎರಡನೇ ಟೆಸ್ಟ್ ಪಂದ್ಯವು ಫೆಬ್ರವರಿ 13ರಿಂದ ಹ್ಯಾಮಿಲ್ಟನ್​​ನ ಸೆಡ್ಡನ್ ಪಾರ್ಕ್​ನಲ್ಲಿ ನಡೆಯಲಿದೆ, ಪಂದ್ಯದಲ್ಲಿ ಅವರ ಲಭ್ಯತೆಯ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ.

ಡೆವಿನ್ ಕಾನ್ವೇ ನ್ಯೂಜಿಲೆಂಡ್ ಪರ ಒಟ್ಟು 95 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. 42.11 ಸರಾಸರಿಯಲ್ಲಿ 4001 ರನ್ ಗಳಿಸಿದ್ದಾರೆ. ಕಾನ್ವೇ 2020ರಲ್ಲಿ ಇಂಗ್ಲೆಂಡ್ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ದರು. ಕಾನ್ವೇ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಕಿವೀಸ್ ಪರ ಒಟ್ಟು ಒಂಬತ್ತು ಶತಕಗಳು ಮತ್ತು 20 ಅರ್ಧಶತಕಗಳನ್ನು ಗಳಿಸಿದ್ದಾರೆ.

2023ರ ಏಕದಿನ ವಿಶ್ವಕಪ್​ನಲ್ಲಿ ಕಿವೀಸ್ ಪರ ಡೆವೊನ್ ಕಾನ್ವೇ ಉತ್ತಮ ಪ್ರದರ್ಶನ ನೀಡಿದ್ದರು. 10 ಪಂದ್ಯಗಳಿಂದ 41.33 ಸರಾಸರಿಯಲ್ಲಿ 372 ರನ್ ಗಳಿಸಿದ್ದರು. ಇಂಗ್ಲೆಂಡ್ ವಿರುದ್ಧದ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಬಂದ 151* ಅವರ ಗರಿಷ್ಠ ಸ್ಕೋರ್ ಆಗಿತ್ತು.

ಡೆವೊನ್ ಕಾನ್ವೇ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದಾರೆ. ಐಪಿಎಲ್ 2023 ರಲ್ಲಿ ಕಾನ್ವೇ ಮೂರನೇ ಅತಿ ಹೆಚ್ಚು ರನ್ ಗಳಿಸಿದವರಾಗಿದ್ದರು. 16 ಪಂದ್ಯಗಳಿಂದ 51.69 ಸರಾಸರಿಯಲ್ಲಿ 672 ರನ್ ಗಳಿಸಿದ್ದಾರೆ. ಅವರು 6 ಅರ್ಧಶತಕಗಳನ್ನು ಬಾರಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 92* . ‘ಮೆನ್ ಇನ್ ಯೆಲ್ಲೋ’ ಐದನೇ ಪ್ರಶಸ್ತಿ ಗೆಲ್ಲಲು ಅವರು ಸಹಾಯ ಮಾಡಿದ್ದರು.

Exit mobile version