ಮಿಯಾಮಿ: ಯಜುವೇಂದ್ರ ಚಹಲ್(Yuzvendra Chahal) ಅವರು ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ(asia cup 2023) ಆಯ್ಕೆಯಾಗದ ಬಗ್ಗೆ ಎಲ್ಲಡೆ ಚರ್ಚೆಯಾಗುತ್ತಿದ್ದರೆ, ಚಹಲ್ ಮಾತ್ರ ತಮ್ಮ ಪತ್ನಿ ಧನಶ್ರಿ ವರ್ಮಾ(Dhanashree Verma) ಜತೆ ಮಿಯಾಮಿಯಲ್ಲಿ(Miami) ಹಾಲಿಡೇ ಎಂಜಾಯ್ ಮಾಡುತ್ತಿದ್ದಾರೆ. ಇಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾ ಕಾಲ ಕಳೆಯುತ್ತಿದ್ದಾರೆ. ಧನಶ್ರಿ ವರ್ಮಾ ಅವರು ಮಟ ಮಟ ಮಧ್ಯಾಹ್ನ, ಮಿರಿ ಮಿರಿ ಮಿಂಚುವ ಬಿಕಿನಿ ತೊಟ್ಟು(Dhanashree Verma In Bikini) ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೊ ಎಲ್ಲಡೆ ವೈರಲ್(viral news) ಆಗಿದೆ.
ಪತಿ ಜತೆ ಜಾಲಿ ಮೂಡ್ಗೆ ಜಾರಿದ ಧನಶ್ರೀ
ಯಜುವೇಂದ್ರ ಚಹಲ್ ಮತ್ತು ಧನಶ್ರೀ ವರ್ಮಾ ಮಧ್ಯೆ ಎಲ್ಲವೂ ಸರಿಯಿಲ್ಲ. ಶೀಘ್ರದಲ್ಲೇ ಈ ಜೋಡಿ ದೂರವಾಗಲಿದ್ದಾರೆ ಎಂದು ಕೆಲವು ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗಿತ್ತು. ಈ ಎಲ್ಲ ಅನುಮಾನಕ್ಕೆ ಈ ಜೋಡಿ ತೆರೆ ಎಳೆದಿದೆ. ತಾವು ದೂರವಾಗುತ್ತಿಲ್ಲ ನಮ್ಮ ಸಂಸಾರದ ಮಧ್ಯೆ ಯಾವುದೇ ಬಿರುಕು ಮೂಡಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ.
ಇಬ್ಬರೂ ಕೂಡ ವಿದೇಶ ಪ್ರವಾಸದಲ್ಲಿ ಜಾಲಿ ಮೂಡ್ನಲ್ಲಿದ್ದಾರೆ. ಪತಿ ಜತೆಗಿರುವ ಫೋಟೊವನ್ನು ಧನಶ್ರೀ ವರ್ಮಾ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಚಹಲ್ಗಿಂತ ಧನಶ್ರೀ ವರ್ಮಾ ಕೊಂಚ ಅಧಿಕವಾಗಿಯೇ ಬೋಲ್ಡ್ ಮತ್ತು ಹಾಟ್ ಆಗಿ ಮಿಂಚಿದ್ದಾರೆ. ಬಿಕಿನಿ ತೊಟ್ಟು ಬೀಜ್ನಲ್ಲಿ ಪುಸ್ತಕ ಓದಿದ್ದಾರೆ.
ಇದನ್ನೂ ಓದಿ Asia Cup 2023: ಏಷ್ಯಾಕಪ್ನಿಂದ ಚಹಲ್ ಕೈಬಿಟ್ಟಿರುವುದು ನಿರಾಶಾದಾಯಕ; ಎಬಿಡಿ
ಬೋಲ್ಡ್ ಆಗಿ ಪುಸ್ತಕ ಓದಿದ ಧನಶ್ರೀ ವರ್ಮಾ
ವೆಸ್ಟ್ ಇಂಡೀಸ್ ಸರಣಿ ಮುಗಿದ ಬೆನ್ನಲ್ಲೇ ಯಜುವೇಂದ್ರ ಚಹಾಲ್ ಪತ್ನಿ ಧನಶ್ರೀ ವರ್ಮಾ ಜೊತೆ ಮಿಯಾಮಿಯಲ್ಲಿ ಕಾಲ ಕಳೆದಿದ್ದಾರೆ. ಈ ಫೋಟೋಗಳನ್ನು ಧನಶ್ರೀ ವರ್ಮಾ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಧನಶ್ರಿ ವರ್ಮ ಮತ್ತು ಯಜ್ವೇಂದ್ರ ಚಹಲ್ ದಾಂಪತ್ಯದಲ್ಲಿ ಒಡಕು ಮೂಡಿದೆ ಎಂಬುದಾಗಿ ಇತ್ತೀಚೆಗೆ ವರದಿಗಳಾಗಿದ್ದವು. ಆರಂಭದಲ್ಲಿ ಸುಮ್ಮನಿದ್ದ ಅವರು ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದರು. ಈ ಮೂಲಕ ತಾವು ಚೆನ್ನಾಗಿಯೇ ಇದ್ದೇವೆ ಎಂಬುದನ್ನು ಸಾಬೀತುಪಡಿಸಿದ್ದರು.
2 ಪಂದ್ಯ ಆಡಿದ ಚಹಲ್
ಯಜುವೇಂದ್ರ ಚಹಲ್ ಅವರು ಈ ವರ್ಷ ಭಾರತ ಪರ ಕೇವಲ ಎರಡು ಏಕದಿನ ಪಂದ್ಯ ಮಾತ್ರ ಆಡಿದ್ದಾರೆ. ಮೊನ್ನೆ ತಾನೆ ಮುಕ್ತಾಯ ಕಂಡ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ತಂಡದ ಭಾಗವಾಗಿದ್ದರೂ ಅವರಿಗೆ ಆಡುವ ಅವಕಾಶ ಲಭಿಸಿರಲಿಲ್ಲ. ಕೇವಲ ಟ20 ಪಂದ್ಯ ಮಾತ್ರ ಆಡಿದ್ದರು. ಅವರು ಭಾರತ ಪರ ಕೊನೆಯ ಏಕದಿನ ಪಂದ್ಯ ಆಡಿದ್ದು ವರ್ಷಾರಂಭದಲ್ಲಿ ನಡೆದ ಕಿವೀಸ್ ವಿರುದ್ಧದ ಏಕದಿನ ಸರಣಿಯಲ್ಲಿ. ಇದಾದ ಬಳಿಕ ತಂಡದಿಂದ ದೂರವೇ ಉಳಿದಿದ್ದಾರೆ.