ಬೆಂಗಳೂರು : ಭಾರತ ತಂಡದ ಲೆಗ್ ಸ್ಪಿನ್ನರ್ ಯಜ್ವೇಂದ್ರ ಚಹಲ್ ಟಿ೨೦ ವಿಶ್ವ ಕಪ್‌ಗಾಗಿ ಆಸ್ಟ್ರೇಲಿಯಾಗೆ ತೆರಳಿದ್ದು, ಅಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಅವರ ಪತ್ನಿ ಹಾಗೂ ಯೂಟ್ಯೂಬರ್ ಧನಶ್ರಿ ವರ್ಮ (Dhanashree) ಕಾಲು ನೋವಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಮನೆಯಲ್ಲಿದ್ದಾರೆ. ಇಲ್ಲದಿದ್ದ್ದರೆ ಅವರು ಕೂಡ ಆಸ್ಟ್ರೇಲಿಯಾಗೆ ತೆರಳುತ್ತಿದ್ದರು. ಏತನ್ಮಧ್ಯೆ, ಗುರುವಾರ ಉತ್ತರ ಭಾರತೀಯರ ಪ್ರಸಿದ್ಧ ಹಬ್ಬ ಕರ್ವಾ ಚೌತ್. ಪತಿಯ ಆಯುಷ್ಯ ಹೆಚ್ಚಲು ಮಹಿಳೆಯರು ದಿನವಿಡೀ ಉಪವಾಸವಿದ್ದು ಗಂಡನ ಪೂಜೆ ಮಾಡುವುದು ಸಂಪ್ರದಾಯ. ಅಂತೆಯೇ ಧನಶ್ರೀ ಅವರೂ ಕರ್ವಾ ಚೌತ್ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಆದರೆ, ಪತಿ ದೂರ ಇರುವುದರಿಂದ ಹೇಗೆ ಮಾಡುವುದೆನ್ನುವ ಚಿಂತೆ. ಅದಕ್ಕಾಗಿ ಅವರು ವಿಡಿಯೊ ಕಾಲ್ ಮೂಲಕವೇ ಕರ್ವಾಚೌತ್ ಪೂಜೆ ಮಾಡಿದ್ದಾರೆ. ಅದರ ವಿಡಿಯೊವನ್ನು ದಂಪತಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ದಿನವಿಡೀ ಉಪವಾಸವಿದ್ದ ಧನಶ್ರೀ ಅವರು ರಾತ್ರಿ ವೇಳೆಗೆ ಪತಿಗೆ ಕರೆ ಮಾಡಿದ್ದಾರೆ. ಬಳಿಕ ನೀರು ಕುಡಿದು ಉಪವಾಸ ಕೊನೆಗೊಳಿಸಿದ್ದಾರೆ. ಈ ರೀತಿಯಾಗಿ ಪತಿ ದೂರವಿದ್ದರೂ ವೃತವನ್ನು ಪೂರೈಸಿದ್ದಾರೆ. ಈ ವಿಡಿಯೊಗೆ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತಗೊಂಡಿವೆ.
ಧನಶ್ರಿ ವರ್ಮ ಮತ್ತು ಯಜ್ವೇಂದ್ರ ಚಹಲ್ ದಾಂಪತ್ಯದಲ್ಲಿ ಒಡಕು ಮೂಡಿದೆ ಎಂಬುದಾಗಿ ಇತ್ತೀಚೆಗೆ ವರದಿಗಳಾಗಿದ್ದವು. ಆರಂಭದಲ್ಲಿ ಸುಮ್ಮನಿದ್ದ ಅವರು ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದರು. ಈ ಮೂಲಕ ತಾವು ಚೆನ್ನಾಗಿಯೇ ಇದ್ದೇವೆ ಎಂಬುದನ್ನು ಸಾಬೀತುಪಡಿಸಿದ್ದರು.
ಇದನ್ನೂ ಓದಿ | Yuzvendra Chahal | ಡೈವೋರ್ಸ್ ಸುದ್ದಿ ಹರಡಿದವರ ಬಗ್ಗೆ ಧನಶ್ರೀ ವರ್ಮಾ ಬೇಸರ