Site icon Vistara News

ಇಂಡೋ-ಕಿವೀಸ್​ ಪಂದ್ಯಕ್ಕೆ ಮತ್ತೆ ಮಳೆ ಕಂಟಕ; ಧರ್ಮಶಾಲ ಪಂದ್ಯ ಅನುಮಾನ

Himachal Pradesh Cricket Association Stadium

ಧರ್ಮಶಾಲ: ಹಿಮಾಲಯದ ತಪ್ಪಲಿನ ರಮಣೀಯ ತಾಣವಾದ ಧರ್ಮಶಾಲಾದಲ್ಲಿ(Dharamsala) ಭಾರತ ಮತ್ತು ನ್ಯೂಜಿಲ್ಯಾಂಡ್(India vs New Zealand)​ ನಡುವಣ ವಿಶ್ವಕಪ್​ ಕಾದಾಟಕ್ಕೆ ವೇದಿಕೆ ಸಿದ್ಧವಾಗಿದೆ. ಭಾನುವಾರ ಇತ್ತಂಡಗಳು ಮುಖಾಮುಖಿಯಾಗಲಿವೆ. ಆದರೆ ಈ ಪಂದ್ಯ ಶೇ. 90ರಷ್ಟು ನಡೆಯುವುದು ಅನುಮಾನ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಹವಾಮಾನ ಇಲಾಖೆಯ ವರದಿ ಪ್ರಕಾರ, ಪಂದ್ಯ ನಡೆಯುವ ಭಾನುವಾರ ಧರ್ಮಶಾಲದಲ್ಲಿ ಭಾರಿ ಗುಡುಗು ಸಹಿತ ಮಳೆಯಾಗಲಿದೆ ಎಂದು ತಿಳಿಸಿದೆ. ಟಾಸ್​ ಕೂಡ ನಡೆಯುವುದು ಅನುಮಾನ ಎಂದು ತನ್ನ ವರದಿಯಲ್ಲಿ ತಿಳಿಸಿದೆ. ಅಕ್ಟೋಬರ್​ 17ರಂದು ಇಲ್ಲೇ ನಡೆದಿದ್ದ ದಕ್ಷಿಣ ಆಫ್ರಿಕಾ ಮತ್ತು ನೆದರ್ಲೆಂಡ್​ ವಿರುದ್ಧದ ಪಂದ್ಯ ಮಳೆಯಿಂದ 43 ಓವರ್​ಗೆ ಸೀಮಿತಗೊಳಿಸಲಾಗಿತ್ತು.

ಮೀಸಲು ದಿನ ಇಲ್ಲ

ಶನಿವಾರದಂದು ಧರ್ಮಶಾಲಾದಲ್ಲಿ 100 ಪ್ರತಿಶತದಷ್ಟು ಮೋಡ ಕವಿದ ವಾತಾವರಣ ಕಂಡುಬಂದಿದೆ. ಒಂದೊಮ್ಮೆ ಪಂದ್ಯ ನಡೆಯುವ ಭಾನುವಾರ ಮಳೆ ಬಿಡುವು ನೀಡದೇ ಹೋದರೆ ಪಂದ್ಯವನ್ನು ರದ್ದುಗೊಳಿಸಲಾಗುತ್ತದೆ. ಲೀಗ್​ ಪಂದ್ಯಗಳಿಗೆ ಮೀಸಲು ದಿನ ಇರದ ಕಾರಣ ಇತ್ತಂಡಗಳಿಗೂ ತಲಾ ಒಂದು ಅಂಕ ನೀಡಲಾಗುತ್ತದೆ. ಫೈನಲ್​ ಮತ್ತು ಎಡರು ಸೆಮಿಫೈನಲ್​ ಪಂದ್ಯಕ್ಕೆ ಮಾತ್ರ ಮೀಸಲು ದಿನ ನಿಗದಿಯಾಗಿದೆ.

ಇದನ್ನೂ ಓದಿ ಕಿವೀಸ್​ ವಿರುದ್ಧ ಭಾರತ ಕೊನೆಯ ಬಾರಿ ವಿಶ್ವಕಪ್ ಪಂದ್ಯ ಗೆದ್ದಾಗ ಕೊಹ್ಲಿ,ರೋಹಿತ್​ಗೆ​ ಎಷ್ಟು ವಯಸ್ಸು?

ಭಾರತಕ್ಕೆ ಮಳೆ ಕಂಟಕ

ವಿಶ್ವಕಪ್​ ಟೂರ್ನಿಯಲ್ಲಿ ಭಾರತಕ್ಕೆ ಕಿವೀಸ್​ ವಿರುದ್ಧ ಮಳೆ ಕಂಟಕವಾಗಿಯೇ ಪರಿಣಮಿಸಿದೆ. ಏಕೆಂದರೆ ಲಂಡನ್​ನಲ್ಲಿ ನಡೆದಿದ್ದ 2019 ವಿಶ್ವಕಪ್​ ಲೀಗ್​ನಲ್ಲಿ ಉಭಯ ತಂಡಗಳ ನಡುವಣ ಲೀಗ್​ ಪಂದ್ಯ ಟಾಸ್​ ಕೂಡ ಕಾಣದೆ ರದ್ದುಗೊಂಡಿತ್ತು. ಸೆಮಿಫೈನಲ್​ನಲ್ಲಿ ಮತ್ತೆ ಉಭಯ ತಂಡಗಳು ಮುಖಾಮುಖಿಯಾಗಿತ್ತು. ಇಲ್ಲಿಯೂ ಕೂಡ ಮಳೆ ಅಡ್ಡಿ ಪಡಿಸಿ ಮೀಸಲು ದಿನನದ ವರೆಗೆ ಪಂದ್ಯ ಸಾಗುತ್ತು. ಮೀಸಲು ದಿನದಲ್ಲಿ ಬ್ಯಾಟಿಂಗ್​ ನಡೆಸಿದ ಭಾರತ ಸೋಲು ಕಂಡು ವಿಶ್ವಕಪ್​ ಟೂರ್ನಿಯಿಂದ ಹೊರಬಿದ್ದಿತ್ತು. ಇದೀಗ ಕಾಕತಾಳಿಯ ಎಂಬಂತೆ ಇತ್ತಂಡಗಳ 2023ರ ವಿಶ್ವಕಪ್​ ಲೀಗ್​ ಪಂದ್ಯಕ್ಕೂ ಮಳೆಯ ಭೀತಿ ಕಾಡಿದೆ. ಅಂದಿನ ಪರಿಸ್ಥಿತಿ ಈ ಬಾರಿಯೂ ಮರುಕಳಿಸಲಿದೆಯಾ ಎಂದು ಕಾದು ನೋಡಬೇಕಿದೆ.

ಮಳೆಯ ಭೀತಿ ಈ ಪಂದ್ಯಕ್ಕೆ ಇದೇ ಎನ್ನುವಾಗಲೇ ಕೆಲ ಕ್ರಿಕೆಟ್​ ಪ್ರೇಮಿಗಳು ಈ ಬಾರಿಯೂ ಸೆಮಿಫೈನಲ್​ನಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್​ ಎದುರಾಗುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿಯಲಾರಂಭಿಸಿದ್ದಾರೆ. ಅಲ್ಲದೆ ಕೆಲವರು ಇದು ಭಾರತಕ್ಕೆ ಅಪಾಯ ಎಂದು ಹೇಳಿದ್ದಾರೆ. ಮಳೆಯಿಂದ ಭಾರತ ತಂಡಕ್ಕೇ ಇದುವರೆಗೆ ಅದೃಷ್ಟ ಒಲಿಯಲಿಲ್ಲ. ಹೀಗಾಗಿ ಪಂದ್ಯಕ್ಕೆ ಮಳೆ ಅಡ್ಡಿಪಡಿಸದಿರಲಿ ಎಂಬುದು ಟೀಮ್​ ಇಂಡಿಯಾ ಅಭಿಮಾನಿಗಳ ಪ್ರಾರ್ಥನೆಯಾಗಿದೆ.

ಇದನ್ನೂ ಓದಿ IND vs NZ: ನ್ಯೂಜಿಲ್ಯಾಂಡ್​ ಪಂದ್ಯಕ್ಕೆ ಟೀಮ್​ ಇಂಡಿಯಾದಲ್ಲಿ 2 ಬದಲಾವಣೆ

ಅಂಕಪಟ್ಟಿ ಯಥಾಸ್ಥಿತಿ

ಒಂದೊಮ್ಮೆ ಉಭಯ ತಂಡಗಳ ನಡುವಣ ಈ ಪಂದ್ಯ ರದ್ದುಗೊಂಡರೆ ಅಂಪಟ್ಟಿಯಲ್ಲಿ ಯಾವುದೇ ದೊಡ್ಡ ಬದಲಾವಣೆ ಸಂಭವಿಸುವುದಿಲ್ಲ. ಯಥಾಸ್ಥಿತಿಲ್ಲೇ ಮುಂದುವರಿಯಲಿದೆ. ನ್ಯೂಜಿಲ್ಯಾಂಡ್​ ಅಗ್ರಸ್ಥಾನದಲ್ಲಿ ಮುತ್ತು ಭಾರತ ದ್ವಿತೀಯ ಸ್ಥಾನದಲ್ಲೇ ಇರಲಿದೆ. ಅಂಕ ಮಾತ್ರ ಸಮಾನವಾಗಿರುತ್ತದೆ.

ಸಂಭಾವ್ಯ ತಂಡ

ನ್ಯೂಜಿಲ್ಯಾಂಡ್​: ಡೆವೊನ್ ಕಾನ್ವೇ, ವಿಲ್ ಯಂಗ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್, ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್​, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲಾಕಿ ಫರ್ಗ್ಯುಸನ್, ಟ್ರೆಂಟ್ ಬೌಲ್ಟ್.

ಭಾರತ: ರೋಹಿತ್​ ಶರ್ಮ, ಶುಭಮನ್​ ಗಿಲ್​, ವಿರಾಟ್​ ಕೊಹ್ಲಿ, ಶ್ರೇಯಸ್​ ಅಯ್ಯರ್​, ಕೆ.ಎಲ್​ ರಾಹುಲ್​, ಸೂರ್ಯಕುಮಾರ್​ ಯಾದವ್​, ರವೀಂದ್ರ ಜಡೇಜಾ, ಮೊಹಮ್ಮದ್​ ಸಿರಾಜ್, ಮೊಹಮ್ಮದ್​ ಶಮಿ, ಜಸ್​ಪ್ರೀತ್​ ಬುಮ್ರಾ, ಕುಲ್​ದೀಪ್​ ಯಾದವ್​.

Exit mobile version