Site icon Vistara News

ICC World Cup 2023 : ಫೈನಲ್​ಗೆ ಮುನ್ನ ಭಾರತ ತಂಡ ಆಟಗಾರರ ಊಟದ ಮೆನು ಬಹಿರಂಗ

Jilebi

ಅಹಮದಾಬಾದ್​​: ಇಂದು ನಡೆಯಲಿರುವುದು ಕೇವಲ ಕ್ರಿಕೆಟ್ ವಿಶ್ವ ಕಪ್​ ಫೈನಲ್ (ICC World Cup 2023) ಅಲ್ಲ. ಭಾರತೀಯರ ಪಾಲಿಗೆ ಇದು ದೊಡ್ಡ ಹಬ್ಬ. ಫೈನಲ್ ಪಂದ್ಯ ಅಹಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಆದರೆ, ಅದರ ಸಂಭ್ರಮಾಚರಣೆ ದೇಶದ ಉದ್ದಗಲಕ್ಕೂ ಹರಡಿದೆ. ಇದೇ ವೇಳೆ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ತಂಡಗಳು ಅಹಮದಾಬಾದ್​​ನ​​ ಸುಂದರವಾದ ಸುತ್ತಮುತ್ತಲಿನ ಪ್ರದೇಶಗಳನ್ನು ಆನಂದಿಸಲು ಮತ್ತು ನಗರದ ರುಚಿಕರವಾದ ಗುಜರಾತಿ ತಿಂಡಿಗಳನ್ನು ಸವಿಯಲು ಯೋಜನೆಗಳನ್ನು ರೂಪಿಸಿಕೊಂಡಿದ್ದರು.

ಗುಜರಾತ್ ಸಮಾಚಾರ್ ಪ್ರಕಾರ, ಭಾನುವಾರ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ಫೈನಲ್ ಪಂದ್ಯಕ್ಕೆ ಮುಂಚಿತವಾಗಿ ಎರಡೂ ತಂಡಗಳು ಶನಿವಾರ ಸಬರಮತಿ ನದಿ ಕ್ರೂಸ್​​ನಲ್ಲಿ ಒಟ್ಟಿಗೆ ಭೋಜನ ಮಾಡುವ ಸಾಧ್ಯತೆಯಿದೆ. ಹೆಚ್ಚುವರಿಯಾಗಿ, ಆಟಗಾರರು ಸಬರಮತಿ ನದಿಯ ಮುಂಭಾಗದಲ್ಲಿರುವ ಅಟಲ್ ಫುಟ್ ಓವರ್ ಸೇತುವೆಗೆ ಭೇಟಿ ನೀಡಲಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ತಂಡಗಳು ನದಿಯ ಮೇಲೆ ಸಾಗುವ ಕ್ರೂಸ್​​ನಲ್ಲಿ ಡೋಕ್ಲಾ ಸೇರಿದಂತೆ ಗುಜರಾತಿ ಭಕ್ಷ್ಯಗಳನ್ನು ತಿನ್ನಲಿದ್ದಾರೆ.

ಪಾಪಡ್​, ಜಿಲೇಬಿ

ಗುಜರಾತ್​ನಲ್ಲಿ ಪಾಪಡ್ ಮತ್ತು ಜಿಲೇಜಿ ಕೂಡ ಜನಪ್ರಿಯ. ಡೋಕ್ಲಾದಂತೆ ಈ ತಿಂಡಿಯನ್ನು ಸಾಕಷ್ಟು ಮಂದಿ ಇಷ್ಟಪಡುತ್ತಾರೆ. ಐಪಿಎಲ್​ ಫೈನಲ್ ವೇಳೆ ಚೆನ್ನೈ ಸೂಪರ್​ ಕಿಂಗ್ಸ್ ತಂಡದ ಆಟಗಾರರು ಪಂದ್ಯಕ್ಕೆ ಮೊದಲು ಈ ತಿಂಡಿಗಳನ್ನು ತಿಂದಿದ್ದರು ಎಂಬುದಾಗಿ ವರಿದಿಯಾಗಿತ್ತು. ಆ ಪಂದ್ಯದಲ್ಲಿ ರವೀಂದ್ರ ಜಡೇಜಾ ಕೊನೇ ಎಸೆತದಲ್ಲಿ ಫೋರ್ ಬಾರಿಸಿ ಸಿಎಸ್​ಕೆ ಐದನೇ ಟ್ರೋಫಿ ತಂದುಕೊಟ್ಟಿದ್ದರು.

ಪಂದ್ಯದ ವೇಳೆ 1.3 ಲಕ್ಷ ಅಭಿಮಾನಿಗಳು ಮೈದಾನದಲ್ಲಿ ಜಮಾಯಿಸಲಿದ್ದಾರೆ. ಮುಖ್ಯವಾಗಿ ನೀಲಿ ಉಡುಪನ್ನು ಧರಿಸಿದ ಕ್ರಿಕೆಟ್​ ಪ್ರೇಮಿಗಳು ಭಾರತೀಯ ತಂಡವನ್ನು ಬೆಂಬಲಿಸಲಿದ್ದಾರೆ. ಭಾರತವು ಟ್ರೋಫಿಯನ್ನು ಗೆಲ್ಲುವ ಫೇವರಿಟ್​ ತಂಡವಾಗಿದ್ದರ ಆಸ್ಟ್ರೇಲಿಯನ್ನರು ಪ್ರಬಲ ಎದುರಾಳಿಗಳಾಗಿದ್ದಾರೆ.

Exit mobile version