Site icon Vistara News

MS Dhoni : ಎಂ. ಎಸ್​ ಧೋನಿ ಅಪ್ಪಟ ಅಭಿಮಾನಿ ಆತ್ಮಹತ್ಯೆ

Gopi krishnan

ಚೆನ್ನೈ : ಚೆನ್ನೈ ಸೂಪರ್​ ಕಿಂಗ್ಸ್ ತಂಡ ಹಾಗೂ ಮಹೇಂದ್ರ ಸಿಂಗ್ ಧೋನಿಯ (MS Dhoni) ಅಪ್ಪಟ ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಭಿಮಾನಕ್ಕಾಗಿ ತಮ್ಮ ಮನೆಗೆ ಹೋಮ್ ಆಫ್​ ಧೋನಿ ಎಂದು ಹೆಸರಿಡುವ ಜತೆಗೆ ಸಂಪೂರ್ಣವಾಗಿ ಹಳದಿ ಬಣ್ಣ ಬಳಿದಿದ್ದ ಈ ಆಟಗಾರ ಜ.18ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಕಡಲೂರಿನ ತಿಟ್ಟಕುಡಿ ತಾಲೂಕಿನ ನಿವಾಸಿಯಾದ ಗೋಪಿ ಕೃಷ್ಣನ್ ಅವರು ತಂಡಕ್ಕೆ ತಮ್ಮ ಪ್ರೀತಿ ಮತ್ತು ಬೆಂಬಲದ ಪ್ರದರ್ಶನಕ್ಕಾಗಿ ತಮ್ಮ ಇಡೀ ಮನೆಯನ್ನು ಹಳದಿ ಬಣ್ಣಕ್ಕೆ ತಿರುಗಿಸಿದ್ದರು. ‘ಹೋಮ್ ಆಫ್ ಧೋನಿ ಫ್ಯಾನ್’ ಎಂದು ಹೆಸರಿಸಿಟ್ಟದ್ದರು. ಹೊರಗಿನ ಗೋಡೆಗಳಲ್ಲಿ ಸಿಎಸ್​ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಭಿತ್ತಿಚಿತ್ರಗಳು ಮತ್ತು ಗೀಚುಬರಹಗಳನ್ನು ಬರೆದಿದ್ದರು. ಸುಮಾರು 1.5 ಲಕ್ಷ ರೂ.ಗಳ ವೆಚ್ಚದಲ್ಲಿ ಪೇಟಿಂಗ್ ಮಾಡಿದ್ದರು. ಗೋಪಿ ಕೃಷ್ಣನ್ ಅವರ ಪ್ರಯತ್ನಗಳನ್ನು ಸ್ವತ ಧೋನಿ ಪ್ರಂಶಸಿದ್ದರು.

ದುಬೈನಲ್ಲಿ ಕೆಲಸ ಮಾಡುತ್ತಿದ್ದ ಗೋಪಿ ಕೃಷ್ಣನ್ ಕೆಲವು ವರ್ಷಗಳ ಹಿಂದೆ ತಮ್ಮ ಊರಿಗೆ ಮರಳಿದ್ದರು. ದುಬೈನ ಜರ್ಮನ್ ವ್ಯಾಪಾರ ಕಂಪನಿಯಲ್ಲಿ ಮಾರುಕಟ್ಟೆ ವಿಶ್ಲೇಷಕರಾಗಿ ಕೆಲಸ ಮಾಡುತ್ತಿದ್ದರು. ಭಾರತಕ್ಕೆ ಮರಳಿದ ನಂತರ, ಅವರು ಷೇರು ಮಾರುಕಟ್ಟೆಯಲ್ಲಿ ಭಾರಿ ಹೂಡಿಕೆ ಮಾಡಲು ಪ್ರಾರಂಭಿಸಿದ್ದರು. ಅದಕ್ಕಾಗಿ ಹಣವನ್ನು ಸಾಲ ಪಡೆದಿದ್ದರು. ಅಲ್ಲಿ ಅವರು ನಷ್ಟವನ್ನು ಅನುಭವಿಸಿದರು ಎಂದು ವರದಿಯಾಗಿದೆ. ಇದು ಅವರನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿತು.

ಇದನ್ನೂ ಓದಿ : IND vs BAN U19: ಅಹಂಕಾರಿ ಬಾಂಗ್ಲಾವನ್ನು ಬಗ್ಗು ಬಡಿದ ಭಾರತ; 84 ರನ್ ಗೆಲುವು

ಪೊಂಗಲ್ ಆಚರಣೆ ವೇಳೆ ಸಾಲದ ವಿಚಾರವಾಗಿ ಹಲವರ ಜತೆ ಧೋನಿ ವಾಗ್ವಾದ ಮಾಡಿದ್ದರು ಎಂದು ಹೇಳಲಾಗಿದೆ. ಈ ಬೇಸರಕ್ಕೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು.

Exit mobile version