ಮುಂಬಯಿ: ಆರ್ಕಾ ಕ್ರಿಕೆಟ್ ಅಕಾಡೆಮಿ(Aarka Sports and Management Limited) 15 ಕೋಟಿ ವಂಚಿಸಿದೆ ಎಂದು ಆರೋಪಿಸಿ 2 ದಿನಗಳ ಹಿಂದಷ್ಟೇ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಆಟಗಾರ ಎಂ.ಎಸ್.ಧೋನಿ(MS Dhoni) ನ್ಯಾಯಾಲಯದ ಮೆಟ್ಟಿಲೇರಿದ್ದರು. ಅಲ್ಲದೆ ಕ್ರಿಮಿನಲ್ ಪ್ರಕರಣ(criminal case) ಕೂಡ ದಾಖಲಿಸಿದ್ದರು. ಈ ಸುದ್ದಿ ಎಲ್ಲಡೆ ಭಾರಿ ಸದ್ದು ಮಾಡಿತ್ತು. ಇದೀಗ ಈ ಪ್ರಕರಣ ಮಹತ್ವದ ತಿರುವು ಪಡೆದಿದೆ.
ಅಕಾಡೆಮಿ ಪಾಲುದಾರರಾಗಿರುವ ಮಿಹಿರ್ ದಿವಾಕರ್(Mihir Diwakar) ನಾನು ಧೋನಿಗೆ 15 ಕೋಟಿ ರೂ. ವಂಚಿಸಿಲ್ಲ, ಬದಲಾಗಿ ಧೋನಿಯೇ ನನಗೆ 5 ಕೋಟಿ ರೂ ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಧೋನಿ ಜತೆ ಮಾಡಿಕೊಂಡಿದ್ದ ಕೆಲ ಒಪ್ಪಂದದ ಪತ್ರಗಳನ್ನು ಕೂಡ ಅವರು ಮಾಧ್ಯಮದ ಮುಂದಿಟ್ಟಿದ್ದಾರೆ.
Real face of MS Dhoni exposed!
— Mihir Diwakar (@mihir_diwakar) January 6, 2024
Watch the full video for complete truth. #msdhoni #indianmedia #media #pmo #narendramodi #aajtak #ndtv #abpnews #indiatv #media #cricket #sports # bcci https://t.co/6mQ6s5iNbZ
“ಧೋನಿ ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ, ನನ್ನ ಹೆಸರು ಕೆಡಿಸಲು ಪ್ರಯತ್ನಿಸಿದ್ದಾರೆ. ಧೋನಿಯ ಆರೋಪ ಕೇಳಿ ಕೆಲ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳು ನನ್ನ ಬಗ್ಗೆ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡುತ್ತಿದೆ. ಇದನ್ನು ತಕ್ಷಣ ನಿಲ್ಲಿಸಬೇಕು. ಸತ್ಯ ಏನೆಂಬಹುದನ್ನು ಮೊದಲು ತಿಳಿದು ಆ ಬಳಿಕ ಸುದ್ದಿಯನ್ನು ಪ್ರಸಾರ ಮಾಡಬೇಕು. ನನ್ನ ಬಗ್ಗೆ ಪ್ರಸಾರವಾದ ಸುದ್ದಿ ಸಂಪೂರ್ಣವಾಗಿ ಆಧಾರರಹಿತವಾಗಿದೆ. ಇದರಿಂದ ಮತ್ತು ನನ್ನ ಸಾಮಾಜಿಕ ಖ್ಯಾತಿ ಹಾಗೂ ವ್ಯಾಪಾರದಲ್ಲಿ ನಷ್ಟವನ್ನುಂಟುಮಾಡಲು ನನ್ನ ಮಾನಹಾನಿಗಾಗಿ ಮಾಡಲಾಗಿದೆ” ಎಂದು ಮಿಹಿರ್ ದಿವಾಕರ್ ಹೇಳಿದ್ದಾರೆ.
ಇದನ್ನೂ ಓದಿ IND vs ENG: ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡದೊಂದಿಗೆ ಬರಲಿದ್ದಾರೆ ಪ್ರಸಿದ್ಧ ಬಾಣಸಿಗ
ಧೋನಿಯೇ ಹಣ ನೀಡಬೇಕು
“ಸಂಸ್ಥೆಯಲ್ಲಿ ಧೋನಿ ಹಾಗೂ ಅವರ ನಿರ್ದೇಶಕರು ಅವ್ಯವಹಾರ ನಡೆಸಿ, ನನ್ನ ಮೇಲೆ ಆರೋಪ ಹೋರಿಸುತ್ತಿದ್ದಾರೆ. ಆರ್ಕಾ ಅಕಾಡೆಮಿಯ ಲಾಭ, ಶೇರುಗಳಲ್ಲಿ ಒಪ್ಪಂದವಾಗಿತ್ತು ಎಂದು ಧೋನಿ ಹೇಳಿದ್ದಾರೆ. ಆದರೆ ಒಪ್ಪಂದದಲ್ಲಿ ಈ ರೀತಿ ಉಲ್ಲೇಖವೇ ಆಗಿಲ್ಲ. ಇದೆಲ್ಲ ಸುಳ್ಳು. ಧೋನಿಯ ವ್ಯವಹಾರಗಳನ್ನು ನಾನು ನೋಡಿಕೊಳ್ಳುತ್ತಿದ್ದೆ. ಅವರೇ ನನಗೆ 5 ಕೋಟಿ ನೀಡಬೇಕು. ನಾನು ಧೋನಿಗೆ ಯಾವುದೇ ಹಣ ಬಾಕಿ ಇಟ್ಟಿಲ್ಲ. ಎಲ್ಲ ಒಪ್ಪಂದದ ಮತ್ತು ವ್ಯವಹಾರದ ಪತ್ರಗಳು ನನ್ನ ಬಳಿ ಇದೆ” ಎಂದು ದಿವಾಕರ್ ದೂರಿದ್ದಾರೆ. ಜತೆಗೆ ಕೆಲ ಒಪ್ಪಂದ ಪತ್ರಗಳನ್ನು ಕೂಡ ಮಾಧ್ಯಗಳಲ್ಲಿ ತೋರಿಸಿದ್ದಾರೆ. ಸುಳ್ಳು ಮತ್ತು ಆಧಾರರಹಿತ ಸುದ್ದಿ ಪ್ರಕಟಿಸಿದ ಕೆಲ ಮಾಧ್ಯಮಗಳ ವಿರುದ್ಧ ಕಾನೂನು ಹೋರಾಟ ನಡಸುವುದಾಗಿಯೂ ದಿವಾಕರ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ MS Dhoni: 15 ಕೋಟಿ ವಂಚನೆ; ಕೋರ್ಟ್ ಮೆಟ್ಟಿಲೇರಿದ ಮಹೇಂದ್ರ ಸಿಂಗ್ ಧೋನಿ
To
— Mihir Diwakar (@mihir_diwakar) January 5, 2024
The Electronic and Print Media,
REAL FACE OF MS DHONI EXPOSED!
With utmost pain and consternation I wish to clarify that the story implanted and run on electronic and print media about cheating #msd is utterly baseless and is done to defame me to destroy my social…
ಧೋನಿಯ ಆರೋಪ
2017ರಲ್ಲಿ ದಿವಾಕರ್ ಅವರು ಧೋನಿಯೊಂದಿಗೆ ಜಾಗತಿಕವಾಗಿ ಕ್ರಿಕೆಟ್ ಅಕಾಡೆಮಿ ಸ್ಥಾಪಿಸಲು ಒಪ್ಪಂದ ಮಾಡಿಕೊಂಡಿದ್ದರು. ಆದರೆ, ದಿವಾಕರ್ ಒಪ್ಪಂದದಲ್ಲಿ ವಿವರಿಸಿರುವ ಷರತ್ತುಗಳನ್ನು ಪಾಲಿಸಲು ವಿಫಲರಾಗಿದ್ದು 15 ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಅಕಾಡೆಮಿಯ ಮಿಹಿರ್ ದಿವಾಕರ್, ಸೌಮ್ಯ ವಿಶ್ವಾಸ್ ವಿರುದ್ಧ ರಾಂಚಿ ನ್ಯಾಯಾಲಯದಲ್ಲಿ ಧೋನಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. ಜತೆಗೆ ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಧೋನಿ ಹಲವು ಬಾರಿ ನೋಟಿಸ್ ನೀಡಿದ್ದರು ಎನ್ನಲಾಗಿತ್ತು.