Site icon Vistara News

ಬಾಲಿವುಡ್​ ನಟಿಯರೊಂದಿಗೆ ದುಬೈನಲ್ಲಿ ಹೊಸ ವರ್ಷ ಆಚರಿಸಲಿದ್ದಾರೆ ಧೋನಿ!

MS Dhoni's Dubai Vacation

ದುಬೈ: ಇನ್ನೇನು 2 ದಿನಗಳು ಕಳೆದರೆ ಹೊಸ ವರ್ಷಕ್ಕೆ(New Year 2024) ಕಾಲಿಡಲಿದ್ದೇವೆ. ಜಗತ್ತೇ ಹೊಸ ವರ್ಷವನ್ನು ಸಂಭ್ರಮದಿಂದ ಆಹ್ವಾನಿಸಲು ಸಿದ್ಧತೆ ನಡೆಸಿದೆ. ಟೀಮ್​ ಇಂಡಿಯಾದ ಮಾಜಿ ನಾಯಕ ಹಾಗೂ ಆಟಗಾರ ಮಹೇಂದ್ರ ಸಿಂಗ್​ ಧೋನಿ(MS Dhoni) ಪರಿವಾರ ಕೂಡ ಹೊಸ ವರ್ಷವನ್ನು ಅದ್ಧೂರಿಯಾಗಿ ಆಚರಿಸುವ ಸಲುವಾಗಿ ದುಬೈನಲ್ಲಿ ಬೀಡುಬಿಟ್ಟಿದೆ. ಇವರ ಜತೆ ಬಾಲಿವುಡ್​ನ ಸ್ಟಾರ್​ ನಟಿಯರಾದ ಕೃತಿ ಸನೋನ್(Kriti Sanon) ಮತ್ತು ಅವರ ಸಹೋದರಿ ನೂಪೂರ್​ ಸನೋನ್​(Nupur Sanon) ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಸನೋನ್ ಸಹೋದರಿಯರು ಧೋನಿ ಪರಿವಾರದೊಂದಿಗೆ ದುಬೈನಲ್ಲಿ ಪಾರ್ಟಿ ಮಾಡಿರುವ ಫೋಟೊಗಳು ವೈರಲ್​ ಆಗಿದೆ. ಧೋನಿ ಕುಟುಂಬದ ಜತೆಗೇ ಹೊಸ ವರ್ಷದ ಸಂಭ್ರಮಾಚರಣೆಯನ್ನು ಕೂಡ ಸನೋನ್ ಸಹೋದರಿಯರು ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಸಿಂಗ್​, ಮಗಳು ಝೀವಾ ಕಳೆದ ಒಂದು ತಿಂಗಳಿನಿಂದ ದುಬೈನಲ್ಲಿ ಕಾಲ ಕಳೆಯುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಕ್ರಿಸ್​ಮಸ್​ ಆಚರಿಸಿದ ಫೋಟೊ ಮತ್ತು ವಿಡಿಯೊ ಕೂಡ ವೈರಲ್​ ಆಗಿತ್ತು. ರಿಷಭ್​ ಪಂತ್​ ಕೂಡ ಈ ವೇಳೆ ಜತೆಗಿದ್ದರು.

ನೂಪೂರ್​ ಸನೋನ್ ಅವರು ಧೋನಿ ಜತೆ ಜತೆ ತೆಗಸಿಕೊಂಡ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಧೋನಿಯನ್ನು ಹೊಸ ಕೇಶ ವಿನ್ಯಾಸದೊಂದಿಗೆ ಕಂಡು ಕೆಲ ನೆಟ್ಟಿಗರು ನೀವು ಕೂಡ ಬಾಲಿವುಡ್ ನಟರಂತೆ ಕಾಣುತ್ತೀರಾ ಎಂದು ಕಮೆಂಟ್​ ಮಾಡಿದ್ದಾರೆ.

ರೆಡಿಯಾಗಲು ಒಂದು ಗಂಟೆ ಬೇಕು

ಇತ್ತೀಚೆಗಷ್ಟೇ ಧೋನಿ ಸಂದರ್ಶನವೊಂದರಲ್ಲಿ ತಮ್ಮ ಹೊಸ ಕೇಶ ವಿನ್ಯಾಸದಿಂದ ಅನುಭವಿಸುವ ಕಷ್ಟವನ್ನು ತಿಳಿಸಿದ್ದರು. “ಮೊದಲು ನಾನು ಜಾಹೀರಾತು ಚಿತ್ರಗಳಿಗೆ ಹೋಗುತ್ತಿದ್ದಾಗ, ಸಾಮಾನ್ಯವಾಗಿ 20 ನಿಮಿಷಗಳಲ್ಲಿ ಕೂದಲು, ಮೇಕಪ್ ಎಲ್ಲದರಲ್ಲೂ ಸಿದ್ಧವಾಗುತ್ತಿದ್ದೆ. ಆದರೆ, ಈಗ 1 ಗಂಟೆ, 5 ನಿಮಿಷಗಳು ತೆಗೆದುಕೊಳ್ಳುತ್ತದೆ. ಇದು ಸ್ವಲ್ಪ ಬೇಸರವಾಗಿದೆ. ನನ್ನ ಎಲ್ಲಾ ಅಭಿಮಾನಿಗಳು ಹೇರ್ ಸ್ಟೈಲ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಸ್ವಲ್ಪ ಸಮಯದವರೆಗೆ ಅದನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತೇನೆ” ಎಂದು ಹೇಳಿದ್ದಾರೆ.

ನಿವೃತ್ತಿ ಬಳಿಕ ಸೇನೆಯಲ್ಲಿ ಕೆಲಸ

ಧೋನಿ(MS Dhoni) ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿ ಕೆಳವು ವರ್ಷಗಳಾಗಿವೆ. ಕೇವಲ ಐಪಿಎಲ್​ ಟೂರ್ನಿಯಲ್ಲಿ(IPL 2024) ಮಾತ್ರ ಆಡುತ್ತಿದ್ದಾರೆ. ಮುಂದಿನ ವರ್ಷ ನಡೆಯುವ ಟೂರ್ನಿಯ ಬಳಿಕ ಧೋನಿ ಎಲ್ಲ ಮಾದರಿಯ ಕ್ರಿಕಟ್​ಗೂ ಗುಡ್​ಬೈ ಹೇಳಲಿದ್ದಾರೆ. ನಿವೃತ್ತಿ ಬಳಿಕ ಏನು ಮಾಡಲಿದ್ದೀರ ಎಂದು ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಧೋನಿ. ಸದ್ಯಕ್ಕೆ ನಾನು ಕ್ರಿಕೆಟ್​ ಬಗ್ಗೆ ಮಾತ್ರ ಯೋಚಿಸುತ್ತಿದ್ದೇನೆ. ಆದರೆ ಒಂದಂತು ನಿಜ, ಕ್ರಿಕೆಟ್​ನಿಂದ ನಿವೃತ್ತಿಯಾದ ಬಳಿಕ ಕೆಲ ಕಾಲ ಆರ್ಮಿಯಲ್ಲಿ ಕರ್ತವ್ಯ ನಿರ್ವಹಿಸುತ್ತೇನೆ ಅದು ನನ್ನ ಜೀವನದ ಪ್ರಮುಖ ಗುರಿ ಮಾಹಿ ಹೇಳಿದ್ದರು.

Exit mobile version