ಬೆಂಗಳೂರು: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೆಲ್ (Dhruv Jurel) 90 ರನ್ ಗಳಿಸಿದ ನಂತರ ಸುನಿಲ್ ಗವಾಸ್ಕರ್ ಅವರು ಧ್ರುವ್ ಜುರೆಲ್ ಬಗ್ಗೆ ಕೊಂಡಾಡಿದ್ದಾರೆ. ಜುರೆಲ್ ಮುಂದಿನ ಎಂಎಸ್ ಧೋನಿ (MS Dhoni) ಎಂದು ಅವರು ಹೇಳಿದ್ದಾರೆ. ರಾಜ್ಕೋಟ್ನಲ್ಲಿ ನಡೆದ ಪಂದ್ಯದ ಮೊದಲ ಚೊಚ್ಚಲ ಇನಿಂಗ್ಸ್ನಲ್ಲಿ ಜುರೆಲ್ 46 ರನ್ ಗಳಿಸಿ ರಾಂಚಿಯಲ್ಲಿ ಭಾರತ ತಂಡಕ್ಕೆ ಕೊಡುಗೆ ನೀಡಿದ್ದರು.
A Salute for his father. 🫡🇮🇳
— Johns. (@CricCrazyJohns) February 25, 2024
– Dhruv Jurel is making his father proud who is a Kargil war veteran.pic.twitter.com/Q4GVIJLRAE
ಜುರೆಲ್ ಆರು ಬೌಂಡರಿಗಳು ಮತ್ತು ನಾಲ್ಕು ಸಿಕ್ಸರ್ ಗಳನ್ನು ಬಾರಿಸಿ 90 ರನ್ ಗಳಿಸಿದ ನಂತರ ಔಟಾದರು. “ಧ್ರುವ್ ಜುರೆಲ್ ಅವರು ಮುಂದಿನ ಎಂಎಸ್ ಧೋನಿ ಎಂದು ಭಾವಿಸುವಂತೆ ಮಾಡಿದ್ದಾರೆ. ಅವರು ಬುದ್ಧಿವಂತಿಕೆಯಿಂದ ಬ್ಯಾಟಿಂಗ್ ಮಾಡಿದರು. ಇಂಗ್ಲೆಂಡ್ ಬೌಲರ್ಗಳನ್ನು ಸಂಕಷ್ಟಕ್ಕೆ ನಿಲ್ಲಿಸಿದರು. ಎಂದು ಗವಾಸ್ಕರ್ ಜಿಯೋ ಸಿನೆಮಾದಲ್ಲಿ ಹೇಳಿದರು.
ರಾಜ್ಕೋಟ್ನಲ್ಲಿ ಬೆನ್ ಡಕೆಟ್ ಅವರು ರನ್ಔಟ್ ಮಾಡಿರುವ ಜುರೆಲ್ ಸಾಮರ್ಥ್ಯವನ್ನು ಗವಾಸ್ಕರ್ ಕೊಂಡಾಡಿದರು. ಅದು ಸುಲಭವಾಗಿರಲಿಲ್ಲ ಎಂದು ಹೇಳಿದರು.
ಜುರೆಲ್ ನಾಲ್ಕನೇ ಪಂದ್ಯದಲ್ಲಿ ಕುಲದೀಪ್ ಯಾದವ್ ಮತ್ತು ಆಕಾಶ್ ದೀಪ್ ಅವರೊಂದಿಗೆ ಪ್ರಮುಖ ಸೇರಿಸಿ ಭಾರತ ತಂಡವನ್ನು ತೊಂದರೆಯಿಂದ ಕಾಪಾಡಿದರು. ಭಾರತ 7 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿದ್ದಾಗ ಜುರೆಲ್ ಬ್ಯಾಟಿಂಗ್ಗೆ ಇಳಿದರು. ಎರಡನೇ ದಿನದಾಟದ ಅಂತ್ಯಕ್ಕೆ ಧ್ರುವ್ ಹಾಗೂ ಕುಲ್ದೀಪ್ 9 ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿದ್ದಾರೆ. ಇಬ್ಬರೂ ಭಾರತವನ್ನು 250 ರನ್ ಗಡಿ ದಾಟಿಸಿದರು.
ಇದನ್ನೂ ಓದಿ : R Ashwin : ಅನಿಲ್ ಕುಂಬ್ಳೆ ದಾಖಲೆ ಮುರಿದ ಆರ್ ಅಶ್ವಿನ್; ಏನದು ದಾಖಲೆ?
ಜೇಮ್ಸ್ ಆಂಡರ್ಸನ್ 28 ರನ್ ಗಳಿಸಿದ ಕುಲ್ದೀಪ್ ಅವರನ್ನು ಔಟ್ ಮಾಡಿದಾಗ ಅವರ ಜೊತೆಯಾಟ ಮುರಿದುಹೋಯಿತು. ಕುಲದೀಪ್ ಮತ್ತು ಧ್ರುವ್ 76 ರನ್ ಸೇರಿಸಿದರೆ, ಆಕಾಶ್ ಮತ್ತು ಜುರೆಲ್ 40 ರನ್ ಗಳಿಸಿದ್ದರು . ಶೋಯೆಬ್ ಬಶೀರ್ 5 ವಿಕೆಟ್ ಪಡೆದರೆ, ಟಾಮ್ ಹಾರ್ಟ್ಲೆ 3 ವಿಕೆಟ್ ಪಡೆದರು. ಹಿರಿಯ ವೇಗಿ ಆಂಡರ್ಸನ್ ತಮ್ಮ ಬೌಲಿಂಗ್ ಅಂಕಿಅಂಶಗಳಿಗೆ ಎರಡು ಸೇರಿಸಿದರು.
ಫಿಫ್ಟಿ ಬಾರಿಸಿ ತಂದೆಗೆ ಧ್ರುವ್ ಜುರೆಲ್ ಸೆಲ್ಯೂಟ್
ರಾಂಚಿ: ಭಾರತ ಕ್ರಿಕೆಟ್ ತಂಡದ ಧ್ರುವ್ ಜುರೆಲ್ (Dhruv Jurel) ಅವರು ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ (IND vs ENG Test Match) ಅಮೋಘ 90 ರನ್ ಗಳಿಸುವ ಮೂಲಕ ಭಾರತ ತಂಡವು ಬೃಹತ್ ಹಿನ್ನಡೆ ಅನುಭವಿಸುವುದನ್ನು ತಪ್ಪಿಸಿದ್ದಾರೆ. ಅಷ್ಟೇ ಅಲ್ಲ, ತಮ್ಮ ಎರಡನೇ ಟೆಸ್ಟ್ ಪಂದ್ಯದಲ್ಲಿಯೇ ಮೊದಲ ಅರ್ಧಶತಕ ಗಳಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮೊದಲ ಅರ್ಧಶತಕ ಸಿಡಿಸಿದ ಅವರು, ತಮ್ಮ ತಂದೆಗೆ ಸೆಲ್ಯೂಟ್ ಮಾಡುವ ಮೂಲಕ ಗೌರವ ಸೂಚಿಸಿದ್ದಾರೆ. ಅಂದಹಾಗೆ, ಜುರೆಲ್ ಅವರ ತಂದೆಯು ಕಾರ್ಗಿಲ್ ಯುದ್ಧದಲ್ಲಿ (Kargil War) ಹೋರಾಡಿದವರು ಎಂಬುದು ಗಮನಾರ್ಹ ಸಂಗತಿಯಾಗಿದೆ.
ಹೌದು, ಉತ್ತರ ಪ್ರದೇಶದ ಉದಯೋನ್ಮುಖ ಆಟಗಾರ ಧ್ರುವ್ ಜುರೆಲ್ ಅವರ ತಂದೆಯು ನೇಮ್ ಸಿಂಗ್ ಜುರೆಲ್ ಅವರು 1999ರಲ್ಲಿ ಪಾಕಿಸ್ತಾನದ ಜತೆ ನಡೆದ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ್ದಾರೆ. ಭಾರತೀಯ ಸೇನೆಯಲ್ಲಿ ನೇಮ್ ಸಿಂಗ್ ಜುರೆಲ್ ಅವರು ಹವಾಲ್ದಾರ್ ಆಗಿದ್ದರು. ಈಗ ಅವರು ನಿವೃತ್ತಿಯ ಜೀವನ ಸಾಗಿಸುತ್ತಿದ್ದು, ಮಗನನ್ನೂ ಸೇನೆಗೆ ಸೇರಿಸಲು ಬಯಸಿದ್ದರು. ಆದರೆ, ಧ್ರುವ್ ಜುರೆಲ್ ಅವರು ಕ್ರಿಕೆಟ್‌ನಲ್ಲಿ ಭವಿಷ್ಯ ಕಂಡುಕೊಂಡಿದ್ದು, ಇವರಿಗೆ ಕ್ರಿಕೆಟ್ ಕಿಟ್ ಕೊಡಿಸಲು ಧ್ರುವ್ ತಾಯಿ ಅವರು ಚಿನ್ನ ಅಡವಿಟ್ಟಿದ್ದರು ಎಂದು ತಿಳಿದುಬಂದಿದೆ.
ಬೃಹತ್ ಹಿನ್ನಡೆ ತಪ್ಪಿಸಿದ ಜುರೆಲ್
ನಾಲ್ಕನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಅತ್ಯಮೂಲ್ಯ 90 ರನ್ ಗಳಿಸಿದ ಜುರೆಲ್, ಭಾರತ ತಂಡವು ಹೆಚ್ಚಿನ ರನ್‌ಗಳ ಹಿನ್ನಡೆ ಅನುಭವಿಸುವುದನ್ನು ತಪ್ಪಿಸಿದರು. ಇಂಗ್ಲೆಂಡ್ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 353 ರನ್‌ಗಳನ್ನು ಬೆನ್ನತ್ತಿದ ಭಾರತ ತಂಡವು ಒಂದು ಹಂತದಲ್ಲಿ 176 ರನ್‌ಗಳ ಹಿನ್ನಡೆಯಲ್ಲಿದ್ದಾಗ 7 ವಿಕೆಟ್ ಬಿದ್ದಿದ್ದವು. ಆದ್ರೆ, ಧ್ರುಜ್ ಜುರೆಲ್ ಅವರು ತಾಳ್ಮೆಯ 90 ರನ್ ಗಳಿಸಿದ ಕಾರಣ ಭಾರತವು ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 46 ರನ್‌ಗಳ ಹಿನ್ನಡೆ ಅನುಭವಿಸಲು ಸಾಧ್ಯವಾಯಿತು.