Site icon Vistara News

Dhyanchand Birthday: ರನ್ ನಂತೆ ಗೋಲು ಬಾರಿಸುತ್ತಿದ್ದ ಧ್ಯಾನ್ ಚಂದ್!

ಮಯೂರಲಕ್ಷ್ಮೀ

1925… ಡಾನ್ ಬ್ರಾಡ್ ಮ್ಯಾನ್ ಅಡೆಲೇಡ್​ನಲ್ಲಿ ಭಾರತದ ಆಟಗಾರರೊಬ್ಬರನ್ನು ಗಮನಿಸುತ್ತಿದ್ದರು. “ನಾನು ಕ್ರಿಕೆಟ್ ಆಟದಲ್ಲಿ ರನ್ ಬಾರಿಸುವಂತೆ ಗೋಲ್ ಬಾರಿಸುತ್ತಿದ್ದಾರೆ. ಇವರು ನಿಜವಾಗಿಯೂ ಶ್ರೇಷ್ಠ ಹಾಕಿ ಆಟಗಾರ” ಎಂದು ಹೊಗಳಿದರು.

ಹಾಗೆ ಅಂದು ಮನ್ನಣೆ ಪಡೆದ ಭಾರತೀಯನ ನಾಲ್ಕು ಕೈಗಳಲ್ಲಿ ನಾಲ್ಕು ಹಾಕಿ ಸ್ಟಿಕ್ ಹಿಡಿದ ಪ್ರತಿಮೆ ಆಸ್ಟ್ರೇಲಿಯಾದ ವಿಯೆನ್ನಾದಲ್ಲಿ ನಿರ್ಮಿಸಲಾಯಿತು. ಇದು ಭಾರತೀಯನಿಗೆ ವಿಶ್ವ ನೀಡಿದ ಗೌರವ. ಅವರೇ ಭಾರತರತ್ನ, ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್.(Dhyanchand Birthday)

dhyan chand statue


ತನ್ನ ದೇಶ ಬರ್ಲಿನ್ನಲ್ಲಿ ಜಯ ಗಳಿಸಿದ ನಂತರ ತಾನು ಪ್ರತಿನಿಧಿಸಿದ ಭಾರತದ ತಿರಂಗಾವನ್ನು ಡ್ರೆಸ್ಸಿಂಗ್ ರೂಮಿನಲ್ಲಿ ಹಾರಿಸಿ ಬ್ರಿಟನ್ನಿನ ದೇಶ ಭಕ್ತಿ ಗೀತೆಯ ಬದಲಾಗಿ ವಂದೇ ಮಾತರಂ ಹಾಡಿದ ಅಪ್ರತಿಮ ದೇಶಭಕ್ತ . ತನ್ನ ಸೇನೆಗೆ ಫೀಲ್ಡ್ ಮಾರ್ಷಲ್ ಆಗಿ ನೇಮಿಸುವ ಪ್ರಸ್ತಾವನೆಯನ್ನು ಮುಂದಿಟ್ಟಾಗ ವಿನಮ್ರವಾಗಿ ತಿರಸ್ಕರಿಸಿದ ಮಹಾತ್ಮ.

dhyan chand statue


ಅಲಹಾಬಾದ್ ನಲ್ಲಿ ಜನಿಸಿದ ಧ್ಯಾನ್ ಚಂದ್ ಅವರ ತಂದೆ ಬ್ರಿಟಿಷ್ ಸೇನೆಯಲ್ಲಿದ್ದರು. ತಮ್ಮ ಹದಿನಾರನೆಯ ವಯಸ್ಸಿನಲ್ಲಿ ಸೇನೆ ಸೇರಿದ ಧ್ಯಾನ್ ಹಗಲು ಇರುಳೆನ್ನದೆ ಹಾಕಿ ಅಭ್ಯಾಸದಲ್ಲಿ ತೊಡಗಿದನು. ಮುಂದೆ ಭಾರತೀಯ ಬ್ರಿಟಿಷ್ ತಂಡವನ್ನು ಪ್ರತಿನಿಧಿಸಿದರು. ಸತತ ಭಾರತಕ್ಕೆ ಮೂರು ಚಿನ್ನದ ಪದಕ ಗಳಿಸಿದ ದಾಖಲೆಗಳ ವೀರ ಇವರು.

ಇದನ್ನೂ ಓದಿ ರಾಜ ಮಾರ್ಗ ಅಂಕಣ | ವೈರಿ ಕೋಟೆಯನ್ನು ಪುಡಿಗಟ್ಟುತ್ತಿದ್ದ ಹಾಕಿ ಆಟದ ವಿಶ್ವವಿಜೇತ ಧ್ಯಾನ್‌ಚಂದ್‌ಗೆ Happy Birthday!

1928, 1932, 1936ರ ಒಲಿಂಪಿಕ್ಸ್ ನಲ್ಲಿ ಭಾಗಿಯಾಗಿದ್ದರು. 1928ರ ಅಮ್ಸ್ಟರ್ಡಂ ಒಲಿಂಪಿಕ್ಸ್ ನಲ್ಲಿ ಒಟ್ಟು 29 ಗೋಲುಗಳು, 1935ರ ಆಸ್ಟ್ರೇಲಿಯಾ ಪ್ರವಾಸದ 43 ಮ್ಯಾಚುಗಳಲ್ಲಿ 584 ಗೋಲುಗಳಿಗೆ ಕಾರಣವಾದರು.

dhyan chand statue


ಮೇಜರ್ ಧ್ಯಾನ್ ಚಂದ್

ಭಾರತೀಯ ಸೇನೆಯಲ್ಲಿ ಮೇಜರ್ ಆಗಿ ಸೇವೆ ಸಲ್ಲಿಸಿ 51ನೆಯ ವಯಸ್ಸಿನಲ್ಲಿ ನಿವೃತ್ತಿ ಹೊಂದಿದರು. ತಮ್ಮ ಸೇವೆಯ ನಂತರ ಝಾನ್ಸಿಯಲ್ಲಿ ಕೋಚ್ ಆಗಿ ಮುಂದುವರಿದರು. ತಮ್ಮ ಕೊನೆಯ ದಿನಗಳಲ್ಲಿ ಲಿವರ್ ಕ್ಯಾನ್ಸರ್ ನಿಂದ ಬಳಲಿದರು. ಭಾರತದ ಸರ್ವ ಶ್ರೇಷ್ಠ ಹಾಕಿ ಮಾಂತ್ರಿಕ ಇಹ ಲೋಕ ಬಿಟ್ಟು ಹೊರಡುವಾಗ ಬದುಕಿನ ಹೋರಾಟದಲ್ಲಿ ಸೋತು ಹೋಗಿದ್ದರು. ನಿಧನದ ಸಮಯದಲ್ಲಿ ಅವರ ಬಳಿ ಚಿಕಿತ್ಸೆಗೂ ಹಣವಿರಲಿಲ್ಲ. ವಿಶ್ವದ ಮನ್ನಣೆಯ ಹಂಬಲ, ಹಣದ ಆಮಿಷಕ್ಕೆ ಎಂದೂ ಒಳಗಾಗಲಿಲ್ಲ. ಇದು ಧ್ಯಾನ್ ಚಂದ್(mejar dhyanchand) ಅವರ ಮೇರು ವ್ಯಕ್ತಿತ್ವಕ್ಕೆ ನಿದರ್ಶನ.

Exit mobile version