ಬೆಂಗಳೂರು: ಗುರುವಾರ ನಡೆದ ಐಪಿಎಲ್ 2024ರ (IPL 2024) ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡದ 9 ರನ್ಗಳ ರೋಚಕ ಗೆಲುವಿನ ನಂತರ, ಆಸಕ್ತಿದಾಯಕ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮುಂಬೈ ಇಂಡಿಯನ್ಸ್ ತಂಡದ ಆಲ್ರೌಂಡರ್ ಮೊಹಮ್ಮದ್ ನಬಿ (Mohammed Nabi) ಆ ಪೋಸ್ಟ್ ಅನ್ನು ಮರು ಹಂಚಿಕೊಂಡಿದ್ದಾರೆ. ಆ ಪೋಸ್ಟ್ನಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ವಿಚಿತ್ರ ಎಂದು ಹೇಳಲಾಗಿತ್ತು. ಅದನ್ನು ನಬಿ ಹಂಚಿಕೊಳ್ಳುವ ಮೂಲಕ ಚರ್ಚೆ ಹುಟ್ಟು ಹಾಕಿದ್ದಾರೆ. ಹಾರ್ದಿಕ್ ಪಾಂಡ್ಯ (Hardik Pandya) ಅವರ ಕೆಲವೊಂದು ನಿರ್ಧಾರಗಳ ಬಗ್ಗೆ ಈಗಾಗಲೇ ಐಪಿಎಲ್ ವಲಯದಲ್ಲಿ ಜೋರು ಚರ್ಚೆಗಳು ನಡೆಯುತ್ತಿವೆ. ಹೀಗಾಗಿ ನವಿ ಕೂಡ ಅವರ ವಿರುದ್ಧ ತಿರುಗಿ ಬಿದ್ದರೇ ಎಂಬ ಅನುಮಾನ ವ್ಯಕ್ತಗೊಂಡಿದೆ.
ಇಜಾಜ್.ಅಜೀಜಿ 07 ಎಂಬ ಹೆಸರಿನ ವ್ಯಕ್ತಿಯೊಬ್ಬರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹೀಗೆ ಬರೆದಿದ್ದಾರೆ. ಅದು ಮುಂಬೈ ಇಂಡಿಯನ್ಸ್ ತಂಡದ ಕುರಿತಾಗಿದೆ. “ನಿಮ್ಮಲ್ಲಿ ನಾಯಕನ ಕೆಲವು ನಿರ್ಧಾರವು ತುಂಬಾ ವಿಚಿತ್ರ ಮತ್ತು ಆಶ್ಚರ್ಯಕರ. ತಂಡ ಜನರನ್ನು ಆಶ್ಚರ್ಯಗೊಳಿಸುತ್ತದೆ. ಅಂತೆಯೇ ನಬಿ ಇಂದು ಬೌಲಿಂಗ್ ಮಾಡಲಿಲ್ಲ ಎಂದು ಬರೆದುಕೊಂಡಿದೆ.
ಮತ್ತೊಂದು ಸ್ಟೋರಿಯಲ್ಲಿ ಹೀಗೆ ಬರೆಯಲಾಗಿದೆ. ” ಪ್ರೆಸಿಡೆಂಟ್ (ಅಧ್ಯಕ್ಷ) ಬಹಳ ಅಗತ್ಯ ಸಮಯದಲ್ಲಿ ಗೇಮ್ ಚೇಂಜರ್! ಎರಡು ಕ್ಯಾಚ್ ಗಳು ಮತ್ತು ಒಂದು ರನ್ ಔಟ್ ಮಾಡಿದ್ದಾರೆ.
ಅಫ್ಘಾನಿಸ್ತಾನದ ಅನುಭವಿ ಸ್ಪಿನ್ ಆಲ್ರೌಂಡರ್ ಮೊಹಮ್ಮದ್ ನಬಿ ಅವರನ್ನು ಐಪಿಎಲ್ 2024 ರ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಖರೀದಿಸಿತು. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ನಬಿ ಶೂನ್ಯಕ್ಕೆ ಔಟಾಗಿದ್ದರು. ಅವರು ಬೌಲಿಂಗ್ ಮಾಡದಿದ್ದರೂ, ಅವರು ಅಶುತೋಷ್ ಶರ್ಮಾ ಮತ್ತು ಶಶಾಂಕ್ ಸಿಂಗ್ ಅವರ ಕ್ಯಾಚ್ಗಳನ್ನು ಪಡೆದಿದ್ದಾರೆ. ಇಬ್ಬರು ಆಟಗಾರರು ಪಿಬಿಕೆಎಸ್ ತಂಡವನ್ನು ಮುಂಬೈ ವಿರುದ್ಧ ಗೆಲುವಿನತ್ತ ಕೊಂಡೊಯ್ಯಲು ಮುಂದಾಗಿದ್ದರು. ಕೊನೆಯ ವಿಕೆಟ್ ಆಗಿ ರನ್ ಔಟ್ ಕಗಿಸೊ ರಬಾಡ ಅವರ ವಿಕೆಟ್ ಕೂಡ ನಬಿಯ ಬೆಸ್ಟ್ ಫೀಲ್ಡಿಂಗ್ ಕೊಡುಗೆಯಾಗಿದೆ.
ಡಿಲೀಟ್ ಮಾಡಿದ ನಬಿ
ಮೊಹಮ್ಮದ್ ನಬಿ ಅವರು ಈ ಇನ್ಸ್ಟಾಗ್ರಾಮ್ ಸ್ಟೋರಿಯನ್ನು ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ. ಅವರು ಶೇರ್ ಮಾಡಿದ್ದಾರೆ ಎನ್ನಲಾಗುವ ಪೋಸ್ಟ್ ಶುಕ್ರವಾರ ಮಧ್ಯಾಹ್ನ ಅವರ ಪ್ರೊಫೈಲ್ನಲ್ಲಿ ಕಂಡಿರಲಿಲ್ಲ.
ಇನ್ಸ್ಟಾಗ್ರಾಮ್ ಬಳಕೆದಾರರು ಇಜಾಜ್.ಅಜೀಜಿ 07 ಎಂಬ ಡಿಸ್ಪಲೇ ಹೆಸರಿನಿಂದ ಮಾಡಿದ ಮೂಲ ಪೋಸ್ಟ್ ಇನ್ನೂ ವ್ಯಕ್ತಿಯ ಹ್ಯಾಂಡಲ್ನಲ್ಲಿದೆ. ಹೀಗಾಗಿ ಮೊಹಮ್ಮದ್ ನಬಿ ಈ ಪೋಸ್ಟ್ ಅನ್ನು ಮತ್ತೆ ಹಂಚಿಕೊಂಡಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ವೈರಲ್ ಆಗಿರುವ ಸ್ಕ್ರೀನ್ ಶಾಟ್ ಎಂಐ ಶಿಬಿರದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬ ಊಹಾಪೋಹಗಳಿಗೆ ಕಾರಣವಾಗಿದೆ. ಆದಾಗ್ಯೂ, ಘಟನೆಗೆ ಸಂಬಂಧಿಸಿದಂತೆ ಎಂಐ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈನ ನಿಧಾನಗತಿಯ ಓವರ್ ರೇಟ್ಗಾಗಿ ಪಾಂಡ್ಯಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
ಇದನ್ನೂ ಓದಿ: Preity Zinta : ರೋಹಿತ್ ಶರ್ಮಾಗಾಗಿ ಪ್ರಾಣ ಪಣಕ್ಕಿಡಲು ಸಿದ್ಧ; ಪ್ರೀತಿ ಜಿಂಟಾ ಹೇಳಿಕೆ ಸಿಕ್ಕಾಪಟ್ಟೆ ವೈರಲ್
“ಏಪ್ರಿಲ್ 18 ರಂದು ಮುಲ್ಲಾನ್ಪುರದ ಪಿಸಿಎ ನ್ಯೂ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರ ತಂಡವು ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದರು. ಕನಿಷ್ಠ ಓವರ್ ರೇಟ್ ಅಪರಾಧಗಳಿಗೆ ಸಂಬಂಧಿಸಿದ ಐಪಿಎಲ್ನ ನೀತಿ ಸಂಹಿತೆಯ ಅಡಿಯಲ್ಲಿ ಇದು ಅವರ ತಂಡದ ಮೊದಲ ಅಪರಾಧ. ಪಾಂಡ್ಯಗೆ 12 ಲಕ್ಷ ರೂ.ಗಳ ದಂಡ ವಿಧಿಸಲಾಗಿದೆ” ಎಂದು ಐಪಿಎಲ್ ಹೇಳಿಕೆಯಲ್ಲಿ ತಿಳಿಸಿದೆ