Site icon Vistara News

ಸಾನಿಯಾ ಮಿರ್ಜಾ ಡಿವೋರ್ಸ್ ಬಗ್ಗೆ ತಂದೆ ಇಮ್ರಾನ್ ಹೇಳಿದ್ದೇನು? ಇಲ್ಲಿದೆ ಅಸಲಿ ಸತ್ಯ!

Sania Mirzas father Imran Mirza

ಹೈದಾರಾಬಾದ್:‌ ಭಾರತದ ಟೆನಿಸ್‌ ತಾರೆ ಸಾನಿಯಾ ಮಿರ್ಜಾ (Sania Mirza) ಹಾಗೂ ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್‌ ಮಲಿಕ್‌(Shoaib Malik) ಅವರ ದಾಂಪತ್ಯ ಜೀವನ ಅಂತ್ಯದ ಬಗ್ಗೆ ಸಾನಿಯಾ ತಂದೆ ಇಮ್ರಾನ್​ ಮಿರ್ಜಾ(Imran Mirza) ಪ್ರತಿಕ್ರಿಯೆ ನೀಡಿದ್ದಾರೆ.

ಪಿಟಿಐಗೆ ಪ್ರತಿಕ್ರಿಕೆ ನೀಡಿದ ಇಮ್ರಾನ್​ ಮಿರ್ಜಾ, “ನನ್ನ ಮಗಳು ಮಲಿಕ್​ಗೆ​ ಖುಲಾ ನೀಡಿದ್ದಾಳೆ. ಖುಲಾ ಎಂದರೆ ಸ್ತ್ರೀ ತನ್ನ ಪತಿಯಿಂದ ಬಿಡುಗಡೆ ಕೇಳುವ ಸ್ವಾತಂತ್ರ್ಯ. ಇದು ಸಮ್ಮತಿಯ ವಿಚ್ಛೇದನವಾಗಿದ್ದು, ಗಂಡನೊಂದಿಗೆ ತನಗೆ ಬಾಳ್ವೆ ಮಾಡಲು ಇಷ್ಟವಿಲ್ಲ ಎಂದಾದಲ್ಲಿ ಆಕೆ ಖುಲಾ ನೀಡಿ ಬೇರೆ ಆಗಬಹುದಾಗಿದೆ. ಅದನ್ನೇ ಗಂಡು ನೀಡಿದಲ್ಲಿ ಇದನ್ನು ತಲಾಕ್‌ ಎನ್ನಲಾಗುತ್ತದೆ” ಎಂದು ಹೇಳಿದ್ದಾರೆ.

ಕಳೆದ ಒಂದು ವರ್ಷದಿಂದಲೂ ಸಾನಿಯಾ ಮಿರ್ಜಾ ಹಾಗೂ ಶೋಯೆಬ್‌ ಮಲಿಕ್‌ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಬಿಟ್ಟಿದೆ. ಇಬ್ಬರೂ ವಿಚ್ಛೇದನ ಪಡೆದಿದ್ದಾರೆ ಎಂಬ ವದಂತಿಗಳು ಹರಡಿದ್ದವು. “ಒಡೆದ ಹೃದಯ ಎಲ್ಲಿಗೆ ಹೋಗುತ್ತದೆ? ಅಲ್ಲಾನ ಬಳಿ” ಎಂಬುದಾಗಿ ಸಾನಿಯಾ ಮಿರ್ಜಾ ಅವರು 2 ದಿನಗಳ ಹಿಂದಷ್ಟೇ ಪೋಸ್ಟ್‌ ಮಾಡಿದ್ದು ಕೂಡ ವೈರಲ್‌ ಆಗಿತ್ತು. ಇದೀಗ ಇಬ್ಬರೂ ವಿಚ್ಛೇದನ ಪಡೆದುಕೊಂಡಿರುವು ಖಚಿತವಾಗಿದೆ. ಶೋಯೆಬ್‌ ಮಲಿಕ್‌ ಅವರು ಅವರು ಪಾಕಿಸ್ತಾನದ ನಟಿ ಸನಾ ಜಾವೇದ್‌ (Sana Javed) ಅವರನ್ನು ಮದುವೆಯಾಗಿದ್ದಾರೆ. ಇದರೊಂದಿಗೆ ಸಾನಿಯಾ ಹಾಗೂ ಶೋಯೆಬ್‌ ನಡುವಿನ 13 ವರ್ಷದ ದಾಂಪತ್ಯವು ಕೊನೆಗೊಂಡಂತಾಗಿದೆ.

ಇದನ್ನೂ ಓದಿ ಸಾನಿಯಾ ಜತೆ ಇರಲು ನಂಗೆ ಟೈಮ್​ ಇಲ್ಲ, ಭಾರತ, ಪಾಕ್​ ಒಂದು ಮಾಡುವುದು ಹೇಗೆ ಎಂದ ಶೋಯೆಬ್​ ಮಲಿಕ್​!

ಸಾನಿಯಾ ಮಿರ್ಜಾ ಹಾಗೂ ಶೋಯೆಬ್‌ ಮಲಿಕ್‌ ಅವರು 2010ರಲ್ಲಿ ಮದುವೆಯಾಗಿದ್ದರು. ಹೈದರಾಬಾದ್‌ನ ತಾಜ್‌ ಕೃಷ್ಣಾ ಹೋಟೆಲ್‌ನಲ್ಲಿ ಹೈದರಾಬಾದ್‌ ಮುಸ್ಲಿಂ ಸಮುದಾಯದ ಸಂಪ್ರದಾಯದಂತೆ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಗೆ ಇಜಾನ್‌ ಎಂಬ ಪುತ್ರನಿದ್ದಾನೆ.

ಶೋಯೆಬ್‌ ಮಲಿಕ್‌ ಹಾಗೂ ಪಾಕಿಸ್ತಾನದ ನಟಿ ಆಯೇಷಾ ಒಮರ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಕೂಡ ಇದಕ್ಕೂ ಮೊದಲು ಕೇಳಿಬಂದಿದ್ದವು. ಆದರೆ, ವಿಚ್ಛೇದನದ ಕುರಿತು ಸಾನಿಯಾ ಮಿರ್ಜಾ ಆಗಲಿ, ಶೋಯೆಬ್‌ ಮಲಿಕ್‌ ಆಗಲಿ, ಇದುವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೀಗ, ಶೋಯೆಬ್‌ ಮಲಿಕ್‌ ಅವರು ಸನಾ ಜಾವೇದ್‌ ಅವರನ್ನು ಮದುವೆಯಾಗುವ ಮೂಲಕ ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಶೋಯೆಬ್‌ ಮಲಿಕ್‌ ಅವರಿಗೆ ಇದು ಮೂರನೇ ಮದುವೆಯಾದರೆ, ಸನಾ ಜಾವೇದ್‌ ಅವರಿಗೆ ಎರಡನೇ ಮದುವೆ ಎಂದು ತಿಳಿದುಬಂದಿದೆ.

Exit mobile version