Site icon Vistara News

Mohammed Shami : ಮೈದಾನದಲ್ಲೇ ನಮಾಜ್ ಮಾಡಲು ಹೋಗಿ ಅರ್ಧಕ್ಕೆ ನಿಲ್ಲಿಸಿದರೇ ಶಮಿ?

Mohammed Shami

ಬೆಂಗಳೂರು: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ವಿಶ್ವ ಕಪ್ 2023ರ (ICC World Cup 2023) 33 ನೇ ಪಂದ್ಯದಲ್ಲಿ ಭಾರತದ ಸ್ಟಾರ್ ವೇಗಿ ಮೊಹಮ್ಮದ್ ಶಮಿ (Mohammed Shami) ಐದು ವಿಕೆಟ್​ಗಳನ್ನು ಪಡೆಯುವ ಮೂಲಕ ಶ್ರೀಲಂಕಾ ವಿರುದ್ಧ 302 ರನ್​ಗಳ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದಾಗ್ಯೂ, ಐದು ವಿಕೆಟ್ ಸಾಧನೆ ಮಾಡಿದ ಕೂಡಲೇ ಶಮಿ ‘ಸಜ್ದಾ’ (ಮುಸ್ಲಿಂ ನಮಸ್ಕಾರ) ಮಾಡಲು ಮುಂದಾಗಿ ಕೊನೆಗೆ ಟೀಕಾಕಾರರ ಬಾಯಿಗೆ ಆಹಾರವಾಗುತ್ತೇನೆ ಎಂಬ ಭಯಕ್ಕೆ ನಿಲ್ಲಿಸಿದರೇ ಎಂಬ ವಿಷಯ ಚರ್ಚೆಗೆ ಕಾರಣವಾಯಿತು. ಅವರ ನಡೆ ಪಾಕಿಸ್ತಾನದ ಅಭಿಮಾನಿಗಳನ್ನು ಕೆರಳಿಸಿತು. ಭಾರತೀಯ ಅಭಿಮಾನಿಗಳು ಈ ಸಂಗತಿಯನ್ನು ಮೀಮ್ಸ್​ ಆಗಿ ಪರಿವರ್ತಿಸಿದರು. ಹೀಗಾಗಿ ಪರ ವಿರೋಧ ಚರ್ಚೆ ಜೋರಾಗಿ ನಡೆಯಿತು.

ಇಸ್ಲಾಂ ಧರ್ಮದಲ್ಲಿ ಸಜ್ದಾ ಅಥವಾ ಸುಜುದ್​ ಎಂದು ಕರೆಯುವ ಆಚರಣೆಯನ್ನು ಮಾಡಲಾಗುತ್ತದೆ. ಅದು ದೇವರಿಗೆ ನಮಸ್ಕರಿಸುವ ಕ್ರಿಯೆ. ಹೀಗಾಗಿ ಇಸ್ಲಾಂ ಧರ್ಮಕ್ಕೆ ಸೇರಿದವರು ತಮಗೆ ಒಳ್ಳೆಯದಾದರೆ ಸಜ್ದಾ ಮಾಡುವ ಮೂಲಕ ದೇವರಿಗೆ ಧನ್ಯವಾದ ಹೇಳುತ್ತಾರೆ. ಕ್ರಿಕೆಟ್ ವಿಚಾರಕ್ಕೆ ಬಂದಾಗ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡದ ಆಟಗಾರರು ಈ ರೀತಿ ಮಾಡುವುದನ್ನು ನೋಡಿದ್ದೇವೆ. ಈ ಪ್ರಕ್ರಿಯೆ ಭಾರತದ ಅಭಿಮಾನಿಗಳ ವಿರೋಧಕ್ಕೆ ಕಾರಣವಾಗಿದ್ದೂ ಇದೆ. ಮೊಹಮ್ಮದ್ ಶಮಿ ಕೂಡ ಇದೇ ರೀತಿ ಮಾಡಲು ಹೋಗಿದ್ದಾರೆ ಎಂಬುದು ಕೆಲವರ ಅಭಿಪ್ರಾಯ. ಶಮಿ ಅಭಿಮಾನಿಗಳ ಟೀಕೆಗೆ ಹೆದರಿ ಅರ್ಧಕ್ಕೆ ನಿಲ್ಲಿಸಿದ್ದಾರೆ ಎಂಬುದಾಗಿ ಅವರಿಗೆ ಲೇವಡಿ ಮಾಡಿದ್ದಾರೆ. ಈ ವಿಚಾರ ಸೋಶಿಯಲ್​ ಮೀಡಿಯಾಗಳಲ್ಲಿ ಪರ ವಿರೋಧ ಚರ್ಚೆಗೆ ಕಾರಣವಾಯಿತು.

ಭಾರತ-ಶ್ರೀಲಂಕಾ ಪಂದ್ಯದ ಹೈಲೈಟ್​

ರೋಹಿತ್​ ಶರ್ಮಾ ನೇತೃತ್ವದ ಭಾರತ ಗುರುವಾರ ಶ್ರೀಲಂಕಾ ವಿರುದ್ಧ 302 ರನ್​ಗಳ ಭರ್ಜರಿ ಜಯದೊಂದಿಗೆ 2023 ರ ವಿಶ್ವಕಪ್​ನ ಸೆಮಿಫೈನಲ್​ನಲ್ಲಿ ಸ್ಥಾನ ಪಡೆದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಈ ಮೂಲಕ 2023ರ ವಿಶ್ವಕಪ್​ನಲ್ಲಿ ಭಾರತ ಸತತ 7ನೇ ಗೆಲುವು ದಾಖಲಿಸಿದೆ.

ಇದನ್ನೂ ಓದಿ : Shubhman Gill : ಸಾರಾ, ಸಾರಾ ಎಂದು ಕೂಗಿದವರಿಗೆ ಎಚ್ಚರಿಕೆ ಕೊಟ್ಟ ವಿರಾಟ್​ ಕೊಹ್ಲಿ

ಮೊದಲು ಬ್ಯಾಟ್ ಮಾಡಿದ ಭಾರತ 8 ವಿಕೆಟ್ ನಷ್ಟಕ್ಕೆ 357 ರನ್ ಕಲೆಹಾಕಿತು ಭಾರತದ ಪರ ಶುಬ್ಮನ್ ಗಿಲ್ 92 ರನ್ ಗಳಿಸಿದರೆ, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಕ್ರಮವಾಗಿ 88 ಮತ್ತು 82 ರನ್ ಗಳಿಸಿದರು. ಶ್ರೀಲಂಕಾ ಪರ ದಿಲ್ಶಾನ್ ಮಧುಶಂಕಾ 80 ರನ್ ನೀಡಿ 5 ವಿಕೆಟ್ ಪಡೆದರು.

ಜಸ್ಪ್ರೀತ್ ಬುಮ್ರಾ ಮೊದಲ ಎಸೆತದಲ್ಲಿ ಪಥುಮ್ ನಿಸ್ಸಾಂಕಾ ಅವರನ್ನು ಔಟ್ ಮಾಡುವ ಮೂಲಕ ಆರಂಭಿಕ ಪ್ರಗತಿಯನ್ನು ಸಾಧಿಸಿದರು/ ಮತ್ತು ಮೊಹಮ್ಮದ್ ಸಿರಾಜ್ ಶೀಘ್ರದಲ್ಲೇ ಇನ್ನೂ ಮೂರು ವಿಕೆಟ್​​ಗಲನ್ನು ಪಡೆದರು, ಶ್ರೀಲಂಕಾವನ್ನು 4/3 ಕ್ಕೆ ಇಳಿಸಿದರು. ಮೊಹಮ್ಮದ್ ಶಮಿ 5 ವಿಕೆಟ್ ಪಡೆದರು. ಲಂಕಾ ತಂಡ 19.4 ಓವರ್​ಗಳಲ್ಲಿ ಕೇವಲ 55 ರನ್​ಗಳಿಗೆ ಆಲ್​ಔಟ್ ಆಯಿತು.

Exit mobile version