Site icon Vistara News

Dinesh Karthik Apologises: ಧೋನಿ ಅಭಿಮಾನಿಗಳಿಗೆ ಕೈ ಮುಗಿದು ಕ್ಷಮೆಯಾಚಿಸಿದ ದಿನೇಶ್​ ಕಾರ್ತಿಕ್​; ಕಾರಣವೇನು?

Dinesh Karthik Apologises

Dinesh Karthik Apologises: Dinesh Karthik Apologises For Leaving Out MS Dhoni From His All-Time India Playing XI

ಚೆನ್ನೈ: ಭಾರತಕ್ಕೆ 2 ವಿಶ್ವಕಪ್​ ಟ್ರೋಫಿ ಗೆದ್ದು ಕೊಟ್ಟ ಟೀಮ್​ ಇಂಡಿಯಾದ ಮಾಜಿ ನಾಯಕ ಹಾಗೂ ಆಟಗಾರ ಮಹೇಂದ್ರ ಸಿಂಗ್ ಧೋನಿ(MS Dhoni) ಅವರ ಅಭಿಮಾನಿಗಳಲ್ಲಿ ಕ್ರಿಕೆಟಿಗ ದಿನೇಶ್​ ಕಾರ್ತಿಕ್​(Dinesh Karthik) ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ(Dinesh Karthik Apologises).

ದಿನೇಶ್​ ಕಾರ್ತಿಕ್​ ಅವರು ಧೋನಿ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಲು ಕಾರಣವೆಂದರೆ, ಕೆಲ ದಿನಗಳ ಹಿಂದಷ್ಟೇ ದಿನೇಶ್​ ಕಾರ್ತಿಕ್​ ಅವರು ಸಾರ್ವಕಾಲಿಕ(All-Time India Playing XI) ನೆಚ್ಚಿನ ಟೀಮ್ ಇಂಡಿಯಾ ಪ್ಲೇಯಿಂಗ್​ ಇಲೆವೆನ್ ತಂಡವೊಂದನ್ನು ಘೋಷಿಸಿದ್ದರು. ಈ ತಂಡದಲ್ಲಿ ಮಹೇಂದ್ರ ಸಿಂಗ್​ ಧೋನಿಯ ಹೆಸರನ್ನು ಬಿಟ್ಟಿದ್ದರು. ಇದೇ ಕಾರಣಕ್ಕೆ ಕಾರ್ತಿಕ್​ ವಿರುದ್ಧ ಧೋನಿ ಅಭಿಮಾನಿಗಳು ರೊಚ್ಚಿಗೆದ್ದಿದ್ದರು. ನಿಮ್ಮ ಈ ತಂಡ ಸರಿಯಿಲ್ಲ. ದಿಗ್ಗಜ ಆಟಗಾರರನ್ನು ನೀಡು ಕಡೆಗಣಿಸಿದ್ದೀರಿ ಹೀಗೆ ಹಲವು ಕಮೆಂಟ್​ಗಳ ಮೂಲಕ ಡಿಕೆ ವಿರುದ್ಧ ಆಕ್ರೋಶ ಹೊರಹಾಕಿದ್ದರು.

ಇದನ್ನೂ ಓದಿ Dinesh Karthik : ದಕ್ಷಿಣ ಆಫ್ರಿಕಾದ ಲೀಗ್​ನಲ್ಲಿ ಪಾರ್ಲ್​ ರಾಯಲ್ಸ್​ ತಂಡ ಸೇರಿದ ದಿನೇಶ್ ಕಾರ್ತಿಕ್​

ಇದೀಗ ದಿನೇಶ್​ ಕಾರ್ತಿಕ್​, ಈ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಾನು ದೊಡ್ಡ ತಪ್ಪು ಮಾಡಿದೆ. ಇದು ಆಕಸ್ಮಿಕವಾಗಿ ಸಂಭವಿಸಿದೆ. ನಾನು ಪ್ರಕಟಿಸಿದ ತಂಡದಲ್ಲಿ ವಿಕೆಟ್ ಕೀಪರ್ ಸ್ಥಾನವನ್ನೇ ಮರೆತಿದ್ದೇನೆ. ಹಲವರು ರಾಹುಲ್ ದ್ರಾವಿಡ್ ಅವರನ್ನೇ ವಿಕೆಟ್ ಕೀಪರ್ ಎಂದು ತಪ್ಪಾಗಿ ಆಯ್ಕೆ ಮಾಡಿದ್ದಾರೆ. ಆದರೆ ನಾನು ದ್ರಾವಿಡ್ ಅವರನ್ನು ಕೀಪರ್ ಎಂದು ಪರಿಗಣಿಸಲಿಲ್ಲ. ಹನ್ನೊಂದರ ಬಳಗದಲ್ಲಿ ಧೋನಿ ಅವರನ್ನು ನಾನು ತೆಗೆದುಕೊಂಡಿಲ್ಲ. ನನ್ನಿಂದ ತಪ್ಪಾಗಿದೆ ಎಂದು ಧೋನಿ ಅಭಿಮಾನಿಗಳ ಬಳಿ ದಿನೇಶ್​ ಕಾರ್ತಿಕ್ ಕ್ಷಮೆ ಕೋರಿದರು.

“ವಿಕೆಟ್ ಕೀಪರ್ ಆಗಿರುವ ನಾನು ಒಂದು ತಂಡವನ್ನು ಆಯ್ಕೆ ಮಾಡುವಾಗ ವಿಕೆಟ್ ಕೀಪರ್ ಆಯ್ಕೆಯನ್ನೇ ಮರೆತಿರುವುದು ನಿಜಕ್ಕೂ ಬೇಸರದ ಸಂಗತಿ. ನನ್ನಿಂದ ತಪ್ಪಾಗಿದೆ. ಮಾಹಿ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರು. ಸಾರ್ವಕಾಲಿಕ ಹನ್ನೊಂದರ ಬಳಗವನ್ನು ಮತ್ತೊಮ್ಮೆ ಘೋಷಿಸಬೇಕಾದರೆ, ಒಂದು ಬದಲಾವಣೆ ಮಾಡಲಾಗುತ್ತದೆ. ಧೋನಿಯನ್ನು ಏಳನೇ ಕ್ರಮಾಂಕದಲ್ಲಿ ತೆಗೆದುಕೊಳ್ಳಲಾಗುವುದು. ಧೋನಿ ವಿಚಾರದಲ್ಲಿ ತಪ್ಪು ಮಾಡಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ” ಎಂದು ದಿನೇಶ್​ ಕಾರ್ತಿಕ್​ ಹೇಳಿದ್ದಾರೆ.

ಐಪಿಎಲ್​ನಲ್ಲಿ ಧೋನಿ ಬಳಿಕ ಅತೀ ಹೆಚ್ಚು ಪಂದ್ಯವಾಡಿದ ದಾಖಲೆ ಕೂಡ ದಿನೇಶ್ ಕಾರ್ತಿಕ್ ಹೆಸರಿನಲ್ಲಿದೆ. ದಿನೇಶ್ ಕಾರ್ತಿಕ್ 257 ಪಂದ್ಯಗಳಲ್ಲಿ 22 ಅರ್ಧಶತಕಗಳನ್ನು ಬಾರಿಸಿ 4,842 ರನ್‌ ಬಾರಿಸಿದ್ದಾರೆ. ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ 15 ಪಂದ್ಯಗಳಲ್ಲಿ 326 ರನ್​ ಬಾರಿಸಿದ್ದಾರೆ. ಇದೇ ವರ್ಷ ನಡೆದಿದ್ದ ಐಪಿಎಲ್​ 17ನೇ ಆವೃತ್ತಿಯಲ್ಲಿ ಅವರು ನಿವೃತ್ತಿ ಘೋಷಿಸಿದ್ದರು.

2004 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಪದಾರ್ಪಣೆ ಮಾಡಿದ ಕಾರ್ತಿಕ್​ ಭಾರತ ಪರ 26 ಟೆಸ್ಟ್‌ಗಳನ್ನು ಆಡಿ 1025 ರನ್ ಗಳಿಸಿದ್ದಾರೆ. 57 ಕ್ಯಾಚ್‌ಗಳು ಮತ್ತು 6 ಸ್ಟಂಪಿಂಗ್‌ಗಳನ್ನು ಮಾಡಿದ್ದಾರೆ. ಅವರು ತಮ್ಮ ಕೊನೆಯ ಟೆಸ್ಟ್ ಆಡಿದ್ದು 2018 ರಲ್ಲಿ. ಏಕದಿನದಲ್ಲಿ 94 ಪಂದ್ಯಗಳನ್ನು ಆಡಿ 1752 ರನ್ ಗಳಿಸಿದ್ದಾರೆ. 64 ಕ್ಯಾಚ್‌ಗಳು ಮತ್ತು 7 ಸ್ಟಂಪಿಂಗ್‌ಗಳನ್ನು ನಿರ್ವಹಿಸಿದ್ದಾರೆ. 60 ಟಿ20 ಪಂದ್ಯಗಳಿಂದ 686 ರನ್ ಗಳಿಸಿ, 30 ಕ್ಯಾಚ್‌ಗಳು ಮತ್ತು 8 ಸ್ಟಂಪಿಂಗ್‌ಗಳನ್ನು ಮಾಡಿದ್ದಾರೆ.

ಕಾರ್ತಿಕ್​ ಘೋಷಿಸಿದ್ದ ತಂಡ


ವೀರೇಂದ್ರ ಸೆಹ್ವಾಗ್, ರೋಹಿತ್ ಶರ್ಮ, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅನಿಲ್ ಕುಂಬ್ಳೆ, ಜಸ್​ಪ್ರೀತ್​ ಬುಮ್ರಾ, ಜಹೀರ್ ಖಾನ್. 12ನೇ ಆಟಗಾರನಾಗಿ ಹರ್ಭಜನ್ ಸಿಂಗ್​.

Exit mobile version