Dinesh Karthik Apologises: ಧೋನಿ ಅಭಿಮಾನಿಗಳಿಗೆ ಕೈ ಮುಗಿದು ಕ್ಷಮೆಯಾಚಿಸಿದ ದಿನೇಶ್​ ಕಾರ್ತಿಕ್​; ಕಾರಣವೇನು? - Vistara News

ಕ್ರೀಡೆ

Dinesh Karthik Apologises: ಧೋನಿ ಅಭಿಮಾನಿಗಳಿಗೆ ಕೈ ಮುಗಿದು ಕ್ಷಮೆಯಾಚಿಸಿದ ದಿನೇಶ್​ ಕಾರ್ತಿಕ್​; ಕಾರಣವೇನು?

Dinesh Karthik Apologises: ವಿಕೆಟ್ ಕೀಪರ್ ಆಗಿರುವ ನಾನು ಒಂದು ತಂಡವನ್ನು ಆಯ್ಕೆ ಮಾಡುವಾಗ ವಿಕೆಟ್ ಕೀಪರ್ ಆಯ್ಕೆಯನ್ನೇ ಮರೆತಿರುವುದು ನಿಜಕ್ಕೂ ಬೇಸರದ ಸಂಗತಿ. ನನ್ನಿಂದ ತಪ್ಪಾಗಿದೆ. ಧೋನಿ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರು ಎಂದು ಹೇಳುವ ಮೂಲಕ ದಿನೇಶ್​ ಕಾರ್ತಿಕ್ ಅವರು ಧೋನಿ(MS Dhoni)ಅಭಿಮಾನಿಗಳಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.

VISTARANEWS.COM


on

Dinesh Karthik Apologises
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚೆನ್ನೈ: ಭಾರತಕ್ಕೆ 2 ವಿಶ್ವಕಪ್​ ಟ್ರೋಫಿ ಗೆದ್ದು ಕೊಟ್ಟ ಟೀಮ್​ ಇಂಡಿಯಾದ ಮಾಜಿ ನಾಯಕ ಹಾಗೂ ಆಟಗಾರ ಮಹೇಂದ್ರ ಸಿಂಗ್ ಧೋನಿ(MS Dhoni) ಅವರ ಅಭಿಮಾನಿಗಳಲ್ಲಿ ಕ್ರಿಕೆಟಿಗ ದಿನೇಶ್​ ಕಾರ್ತಿಕ್​(Dinesh Karthik) ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ(Dinesh Karthik Apologises).

ದಿನೇಶ್​ ಕಾರ್ತಿಕ್​ ಅವರು ಧೋನಿ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಲು ಕಾರಣವೆಂದರೆ, ಕೆಲ ದಿನಗಳ ಹಿಂದಷ್ಟೇ ದಿನೇಶ್​ ಕಾರ್ತಿಕ್​ ಅವರು ಸಾರ್ವಕಾಲಿಕ(All-Time India Playing XI) ನೆಚ್ಚಿನ ಟೀಮ್ ಇಂಡಿಯಾ ಪ್ಲೇಯಿಂಗ್​ ಇಲೆವೆನ್ ತಂಡವೊಂದನ್ನು ಘೋಷಿಸಿದ್ದರು. ಈ ತಂಡದಲ್ಲಿ ಮಹೇಂದ್ರ ಸಿಂಗ್​ ಧೋನಿಯ ಹೆಸರನ್ನು ಬಿಟ್ಟಿದ್ದರು. ಇದೇ ಕಾರಣಕ್ಕೆ ಕಾರ್ತಿಕ್​ ವಿರುದ್ಧ ಧೋನಿ ಅಭಿಮಾನಿಗಳು ರೊಚ್ಚಿಗೆದ್ದಿದ್ದರು. ನಿಮ್ಮ ಈ ತಂಡ ಸರಿಯಿಲ್ಲ. ದಿಗ್ಗಜ ಆಟಗಾರರನ್ನು ನೀಡು ಕಡೆಗಣಿಸಿದ್ದೀರಿ ಹೀಗೆ ಹಲವು ಕಮೆಂಟ್​ಗಳ ಮೂಲಕ ಡಿಕೆ ವಿರುದ್ಧ ಆಕ್ರೋಶ ಹೊರಹಾಕಿದ್ದರು.

ಇದನ್ನೂ ಓದಿ Dinesh Karthik : ದಕ್ಷಿಣ ಆಫ್ರಿಕಾದ ಲೀಗ್​ನಲ್ಲಿ ಪಾರ್ಲ್​ ರಾಯಲ್ಸ್​ ತಂಡ ಸೇರಿದ ದಿನೇಶ್ ಕಾರ್ತಿಕ್​

ಇದೀಗ ದಿನೇಶ್​ ಕಾರ್ತಿಕ್​, ಈ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಾನು ದೊಡ್ಡ ತಪ್ಪು ಮಾಡಿದೆ. ಇದು ಆಕಸ್ಮಿಕವಾಗಿ ಸಂಭವಿಸಿದೆ. ನಾನು ಪ್ರಕಟಿಸಿದ ತಂಡದಲ್ಲಿ ವಿಕೆಟ್ ಕೀಪರ್ ಸ್ಥಾನವನ್ನೇ ಮರೆತಿದ್ದೇನೆ. ಹಲವರು ರಾಹುಲ್ ದ್ರಾವಿಡ್ ಅವರನ್ನೇ ವಿಕೆಟ್ ಕೀಪರ್ ಎಂದು ತಪ್ಪಾಗಿ ಆಯ್ಕೆ ಮಾಡಿದ್ದಾರೆ. ಆದರೆ ನಾನು ದ್ರಾವಿಡ್ ಅವರನ್ನು ಕೀಪರ್ ಎಂದು ಪರಿಗಣಿಸಲಿಲ್ಲ. ಹನ್ನೊಂದರ ಬಳಗದಲ್ಲಿ ಧೋನಿ ಅವರನ್ನು ನಾನು ತೆಗೆದುಕೊಂಡಿಲ್ಲ. ನನ್ನಿಂದ ತಪ್ಪಾಗಿದೆ ಎಂದು ಧೋನಿ ಅಭಿಮಾನಿಗಳ ಬಳಿ ದಿನೇಶ್​ ಕಾರ್ತಿಕ್ ಕ್ಷಮೆ ಕೋರಿದರು.

“ವಿಕೆಟ್ ಕೀಪರ್ ಆಗಿರುವ ನಾನು ಒಂದು ತಂಡವನ್ನು ಆಯ್ಕೆ ಮಾಡುವಾಗ ವಿಕೆಟ್ ಕೀಪರ್ ಆಯ್ಕೆಯನ್ನೇ ಮರೆತಿರುವುದು ನಿಜಕ್ಕೂ ಬೇಸರದ ಸಂಗತಿ. ನನ್ನಿಂದ ತಪ್ಪಾಗಿದೆ. ಮಾಹಿ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರು. ಸಾರ್ವಕಾಲಿಕ ಹನ್ನೊಂದರ ಬಳಗವನ್ನು ಮತ್ತೊಮ್ಮೆ ಘೋಷಿಸಬೇಕಾದರೆ, ಒಂದು ಬದಲಾವಣೆ ಮಾಡಲಾಗುತ್ತದೆ. ಧೋನಿಯನ್ನು ಏಳನೇ ಕ್ರಮಾಂಕದಲ್ಲಿ ತೆಗೆದುಕೊಳ್ಳಲಾಗುವುದು. ಧೋನಿ ವಿಚಾರದಲ್ಲಿ ತಪ್ಪು ಮಾಡಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ” ಎಂದು ದಿನೇಶ್​ ಕಾರ್ತಿಕ್​ ಹೇಳಿದ್ದಾರೆ.

ಐಪಿಎಲ್​ನಲ್ಲಿ ಧೋನಿ ಬಳಿಕ ಅತೀ ಹೆಚ್ಚು ಪಂದ್ಯವಾಡಿದ ದಾಖಲೆ ಕೂಡ ದಿನೇಶ್ ಕಾರ್ತಿಕ್ ಹೆಸರಿನಲ್ಲಿದೆ. ದಿನೇಶ್ ಕಾರ್ತಿಕ್ 257 ಪಂದ್ಯಗಳಲ್ಲಿ 22 ಅರ್ಧಶತಕಗಳನ್ನು ಬಾರಿಸಿ 4,842 ರನ್‌ ಬಾರಿಸಿದ್ದಾರೆ. ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ 15 ಪಂದ್ಯಗಳಲ್ಲಿ 326 ರನ್​ ಬಾರಿಸಿದ್ದಾರೆ. ಇದೇ ವರ್ಷ ನಡೆದಿದ್ದ ಐಪಿಎಲ್​ 17ನೇ ಆವೃತ್ತಿಯಲ್ಲಿ ಅವರು ನಿವೃತ್ತಿ ಘೋಷಿಸಿದ್ದರು.

2004 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಪದಾರ್ಪಣೆ ಮಾಡಿದ ಕಾರ್ತಿಕ್​ ಭಾರತ ಪರ 26 ಟೆಸ್ಟ್‌ಗಳನ್ನು ಆಡಿ 1025 ರನ್ ಗಳಿಸಿದ್ದಾರೆ. 57 ಕ್ಯಾಚ್‌ಗಳು ಮತ್ತು 6 ಸ್ಟಂಪಿಂಗ್‌ಗಳನ್ನು ಮಾಡಿದ್ದಾರೆ. ಅವರು ತಮ್ಮ ಕೊನೆಯ ಟೆಸ್ಟ್ ಆಡಿದ್ದು 2018 ರಲ್ಲಿ. ಏಕದಿನದಲ್ಲಿ 94 ಪಂದ್ಯಗಳನ್ನು ಆಡಿ 1752 ರನ್ ಗಳಿಸಿದ್ದಾರೆ. 64 ಕ್ಯಾಚ್‌ಗಳು ಮತ್ತು 7 ಸ್ಟಂಪಿಂಗ್‌ಗಳನ್ನು ನಿರ್ವಹಿಸಿದ್ದಾರೆ. 60 ಟಿ20 ಪಂದ್ಯಗಳಿಂದ 686 ರನ್ ಗಳಿಸಿ, 30 ಕ್ಯಾಚ್‌ಗಳು ಮತ್ತು 8 ಸ್ಟಂಪಿಂಗ್‌ಗಳನ್ನು ಮಾಡಿದ್ದಾರೆ.

ಕಾರ್ತಿಕ್​ ಘೋಷಿಸಿದ್ದ ತಂಡ


ವೀರೇಂದ್ರ ಸೆಹ್ವಾಗ್, ರೋಹಿತ್ ಶರ್ಮ, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅನಿಲ್ ಕುಂಬ್ಳೆ, ಜಸ್​ಪ್ರೀತ್​ ಬುಮ್ರಾ, ಜಹೀರ್ ಖಾನ್. 12ನೇ ಆಟಗಾರನಾಗಿ ಹರ್ಭಜನ್ ಸಿಂಗ್​.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Shakib Al Hasan: ಬಾಂಗ್ಲಾ ತಂಡದ ನಾಯಕ ಶಕಿಬ್​ ವಿರುದ್ಧ ಕೊಲೆ ಪ್ರಕರಣ ದಾಖಲು

Shakib Al Hasan: ಬಾಂಗ್ಲಾದೇಶದಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ನಡೆದ ಆಪಾದಿತ ಕೊಲೆಗೆ ಸಂಬಂಧಿಸಿದಂತೆ 147 ಜನರಲ್ಲಿ ಶಕಿಬ್​ ಕೂಡ ಸೇರಿದ್ದಾರೆ ಎಂದು ಢಾಕಾದ ಅಡಾಬೋರ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಇಎಸ್‌ಪಿಎನ್‌ ಕ್ರಿಕ್‌ ಇನ್‌ಫೋಗೆ ಖಚಿತಪಡಿಸಿದ್ದಾರೆ.

VISTARANEWS.COM


on

Shakib Al Hasan
Koo

ಢಾಕಾ: ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರದ ಸಮಯದಲ್ಲಿ ಕಿರಾಣಿ ಅಂಗಡಿಯ ಮಾಲಕರೊಬ್ಬರ ಹತ್ಯೆಗೆ ಸಂಬಂಧಿಸಿದಂತೆ ಮಾಜಿ ಪ್ರಧಾನಮಂತ್ರಿ ಶೇಖ್‌ ಹಸೀನಾ(Sheikh Hasina) ವಿರುದ್ಧ ಕೆಲ ದಿನಗಳ ಹಿಂದೆ ಕೊಲೆ ಪ್ರಕರಣ ದಾಖಲಿಸಲಾಗಿತ್ತು. ಇದೀಗ ಬಾಂಗ್ಲಾದೇಶ ಕ್ರಿಕೆಟ್ ತಂಡದ ನಾಯಕ ಶಕಿಬ್ ಅಲ್ ಹಸನ್(Shakib Al Hasan) ವಿರುದ್ಧವೂ ಕೊಲೆ ಪ್ರಕರಣದಲ್ಲಿ ಎಫ್ಐಆರ್ ದಾಖಲಾಗಿದೆ.

ಬಾಂಗ್ಲಾದೇಶದಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ನಡೆದ ಆಪಾದಿತ ಕೊಲೆಗೆ ಸಂಬಂಧಿಸಿದಂತೆ 147 ಜನರಲ್ಲಿ ಶಕಿಬ್​ ಕೂಡ ಸೇರಿದ್ದಾರೆ ಎಂದು ಢಾಕಾದ ಅಡಾಬೋರ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಇಎಸ್‌ಪಿಎನ್‌ ಕ್ರಿಕ್‌ ಇನ್‌ಫೋಗೆ ಖಚಿತಪಡಿಸಿದ್ದಾರೆ.

ರಫೀಕುಲ್ ಇಸ್ಲಾಂ ಎನ್ನುವ ವ್ಯಕ್ತಿ ಪ್ರಕರಣ ದಾಖಲಿಸಿದ್ದು, ಢಾಕಾದಲ್ಲಿ ನಡೆದ ಪ್ರತಿಭಟನೆಯ ವೇಳೆ ತನ್ನ ತಂದೆಯನ್ನು ಕೊಲೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಢಾಕಾದ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಶಕಿಬ್​ ಅಲ್ ಹಸನ್ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಶಕಿಬ್ ಮಾತ್ರವಲ್ಲ, ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಸೇರಿದಂತೆ ಒಟ್ಟು 500 ಮಂದಿಯನ್ನು ಇದರಲ್ಲಿ ಆರೋಪಿಗಳನ್ನಾಗಿ ಮಾಡಲಾಗಿದೆ.

ಮೀಸಲಾತಿಯ ವಿರುದ್ಧ ಸಾರ್ವಜನಿಕರು ದಂಗೆ ಎದ್ದ ಬಳಿಕ ಶೇಖ್ ಹಸೀನಾ ದೇಶದಿಂದ ಪಲಾಯನ ಮಾಡಿದ್ದರು. ಶಕೀಬ್ ಅಲ್ ಹಸನ್, ಶೇಖ್ ಹಸೀನಾಗೆ ಆತ್ಮೀಯರಾಗಿರುವ ಕಾರಣ ಅವರ ವಿರುದ್ಧ ಈ ಸುಳ್ಳು ಆರೋಪವನ್ನು ಕೂಡ ಮಾಡಿರುವ ಸಾಧ್ಯತೆ ಇದೆ. ಶಕಿಬ್ ಅಲ್ ಹಸನ್ ಅವರು ಕಳೆದ ಬಾಂಗ್ಲಾದೇಶ ಸಂಸತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಶೇಖ್‌ ಹಸೀನಾ ಅವರ ಪಕ್ಷವಾದ ಅವಾಮಿ ಲೀಗ್ ಪಕ್ಷದ ಪರವಾಗಿ ಮಗುರಾ-1ರಲ್ಲಿ ಚುನಾವಣೆ ಸ್ಪರ್ಧಿಸಿದ್ದ ಶಕೀಬ್ ಅಲ್ ಹಸನ್ ಭರ್ಜರಿ ಗೆಲುವು ಸಾಧಿಸಿದ್ದರು. ಇದೀಗ ಕೊಲೆ ಕೇಸ್​ನಲ್ಲಿ ಅವರ ಹೆಸರು ಕೇಳಿ ಬಂದಿದೆ.

ಎಫ್‌ಐಆರ್​ನಲ್ಲಿ ಶಕೀಬ್ 27 ಅಥವಾ 28ನೇ ಆರೋಪಿ ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಕ್ರಿಕ್‌ಇನ್ಫೋ ವರದಿ ಮಾಡಿದೆ. ಆದಾಗ್ಯೂ, ಶಕೀಬ್ ಆಗಸ್ಟ್ 5 ರಂದು ಬಾಂಗ್ಲಾದೇಶದಲ್ಲಿ ಇರಲಿಲ್ಲ, ಅಥವಾ ಹಸೀನಾ ರಾಜೀನಾಮೆಗೆ ಕಾರಣವಾದ ಪ್ರತಿಭಟನೆಯ ಸಮಯದಲ್ಲಿ ಶಕಿಬ್​ ಕೆನಡಾದಲ್ಲಿದ್ದರು. ಬ್ರಾಂಪ್ಟನ್‌ನಲ್ಲಿ ಆಡಲಾಗುತ್ತಿರುವ ಗ್ಲೋಬಲ್ ಟಿ 20 ಕೆನಡಾ ಲೀಗ್‌ನಲ್ಲಿ ಬಾಂಗ್ಲಾ ಟೈಗರ್ಸ್ ತಂಡವನ್ನು ಮುನ್ನಡೆಸುತ್ತಿದ್ದರು. ಅದಕ್ಕೂ ಮೊದಲು, ಶಕೀಬ್ ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಭಾಗವಹಿಸಲು ಯುಎಸ್‌ಎಯಲ್ಲಿದ್ದರು. ಒಟ್ಟಾರೆ ಈ ಕೇಸ್​ ಹಲವು ಅನುಮಾನ ಹುಟ್ಟಿಸಿದೆ.

Continue Reading

ಕ್ರೀಡೆ

Shraddha Kapoor- Shreyas Iyer: ಕ್ರಿಕೆಟಿಗ ಅಯ್ಯರ್​ ಜತೆ ಡೇಟಿಂಗ್ ಆರಂಭಿಸಿದ ನಟಿ ಶ್ರದ್ಧಾ ಕಪೂರ್‌; ಫೋಟೊ ವೈರಲ್​

Shraddha Kapoor- Shreyas Iyer: ಬಾಲಿವುಡ್‌ ಸ್ಟಾರ್‌ ನಟಿ ಶ್ರದ್ಧಾ ಕಪೂರ್‌(Shraddha Kapoor) ಇನ್‌ಸ್ಟಾಗ್ರಾಂ ಫಾಲೋವರ್ಸ್‌ ಸಂಖ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi)ಯವರನ್ನೇ ಹಿಂದಿಕ್ಕಿದ್ದಾರೆ.

VISTARANEWS.COM


on

Shraddha Kapoor- Shreyas Iyer
Koo

ಮುಂಬಯಿ: ಬಾಲಿವುಡ್‌ ನಟಿ ಶ್ರದ್ಧಾ ಕಪೂರ್‌(Shraddha Kapoor) ಅವರು ಟೀಮ್​ ಇಂಡಿಯಾದ ಮಧ್ಯಮ ಕ್ರಮಾಂಕದ ಆಟಗಾರ ಶ್ರೇಯಸ್​ ಅಯ್ಯರ್(Shreyas Iyer)​ ಜತೆ ಡೇಟಿಂಗ್​ ನಡೆಸಲು ಆರಂಭಿಸಿದಂತಿದೆ. ಇಬ್ಬರು ಜತೆಯಾಗಿ ಕಾಣಿಸಿಕೊಂಡ ಫೋಟೊ ಒಂದು ವೈರಲ್​ ಆಗಿದ್ದು, ಅಯ್ಯರ್​ ಬಗ್ಗೆ ಶ್ರದ್ಧಾ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಹೀಗಾಗಿ ಇಬ್ಬರು ಡೇಟಿಂಗ್​ ನಡೆಸುತ್ತಿರುವುದು ಪಕ್ಕಾ ಎಂದು ನೆಟ್ಟಿಗರು ಹೇಳಲಾರಂಭಿಸಿದ್ದಾರೆ.

ಸಿಯಟ್​ ಕ್ರಿಕೆಟ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಶ್ರದ್ಧಾ ಕಪೂರ್‌, ಮಾಧ್ಯಮದ ಜತೆ ಮಾತನಾಡುವ ವೇಳೆ “ನಾನು ಇಡೀ ಭಾರತ ತಂಡವನ್ನು ಬೆಂಬಲಿಸುತ್ತೇನೆ ಆದರೆ ನಾನು ಒಬ್ಬ ಆಟಗಾರನನ್ನು ಮಾತ್ರ ಆಯ್ಕೆ ಮಾಡಬೇಕಾದರೆ ಅದು ಶ್ರೇಯಸ್ ಅಯ್ಯರ್ ಆಗಿರುತ್ತದೆ. ಏಕೆಂದರೆ ನಾನು ಅವರ ವ್ಯಕ್ತಿತ್ವವನ್ನು ನಿಜವಾಗಿಯೂ ಇಷ್ಟಪಡುತ್ತೇನೆ” ಎಂದಿದ್ದರು. ಇದೀಗ ಈ ಜೋಡಿ ಬಹಳ ಆತ್ಮೀಯವಾಗಿ ಕಾಣಿಸಿಕೊಂಡಿರುವ ಫೋಟೊ ವೈರಲ್​ ಆಗಿದ್ದು ಶೀಘ್ರದಲ್ಲೇ ಇವರಿಬ್ಬರು ಹಸೆಮಣೆ ಏರುವ ಸಾಧ್ಯತೆ ಇದೆ ಎಂದು ನೆಟ್ಟಿಗರು ಕಮೆಂಟ್ ಮಾಡಲಾರಂಭಿಸಿದ್ದಾರೆ.

ಶ್ರೇಯಸ್​ ಅಯ್ಯರ್​ ‘ಸಿಯೆಟ್ ಅವಾರ್ಡ್ಸ್'(CEAT Cricket Awards)ನಲ್ಲಿ ವರ್ಷದ T20 ನಾಯಕತ್ವ ಪ್ರಶಸ್ತಿಯನ್ನು ಗೆದಿದ್ದರು. ಐಪಿಎಲ್ ಟೂರ್ನಿಯಲ್ಲಿ ನಾಯಕನಾಗಿ ತಂಡವನ್ನು 2 ಬಾರಿ ಫೈನಲ್‌ ತಲುಪಿಸಿದ ಸಾಧನೆಗೆ ಈ ಪ್ರಶಸ್ತಿ ಲಭಿಸಿತ್ತು. ಶ್ರೇಯಸ್​ ಅಯ್ಯರ್​ ಅವರು ಐಪಿಎಲ್​ನಲ್ಲಿ ಡೆಲ್ಲಿ ತಂಡದ ನಾಯಕನಾಗಿ ತಂಡವನ್ನು ಒಮ್ಮೆ ಫೈನಲ್​ ತಲುಪಿಸಿದ್ದರು. ಅಲ್ಲಿ ಮುಂಬೈ ವಿರುದ್ಧ ತಂಡ ಸೋಲು ಕಂಡು ರನ್ನರ್​ ಅಪ್​ ಪ್ರಶಸ್ತಿ ಪಡೆದಿತ್ತು. ಈ ಬಾರಿಯ ಆವೃತ್ತಿಯಲ್ಲಿ ಕೆಕೆಆರ್​ ತಂಡದ ನಾಯಕನಾಗಿ ಟ್ರೋಫಿ ಗೆದ್ದ ಸಾಧನೆ ಮಾಡಿದ್ದರು. 

ಇದನ್ನೂ ಓದಿ Shraddha Kapoor: ಮದುವೆ ಬಗ್ಗೆ ಶ್ರದ್ಧಾ ಕಪೂರ್ ಹೇಳಿದ್ದೇನು? ಹುಡುಗ ಯಾರು?

ಅಯ್ಯರ್​ ಇದುವೆರೆಗೆ 115 ಐಪಿಎಲ್​ ಪಂದ್ಯವನ್ನಾಡಿ 3127 ರನ್​ ಬಾರಿಸಿದ್ದಾರೆ. ಇದರಲ್ಲಿ 21 ಅರ್ಧಶತಕ ಒಳಗೊಂಡಿದೆ. 96 ಗರಿಷ್ಠ ವೈಯಕ್ತಿ ಮೊತ್ತವಾಗಿದೆ. ಭಾರತ ತಂಡದ ಪರ 51 ಟಿ20, 62 ಏಕದಿನ ಮತ್ತು 14 ಟೆಸ್ಟ್​ ಪಂದ್ಯಗಳನ್ನಾಡಿ ಒಟ್ಟು 4,336 ರನ್​ ಗಳಿಸಿದ್ದಾರೆ. ಟೆಸ್ಟ್​ನಲ್ಲಿ 1, ಏಕದಿನದಲ್ಲಿ 5 ಶತಕ ಬಾರಿಸಿದ್ದಾರೆ.

ಮೋದಿಯನ್ನು ಹಿಂದಿಕ್ಕಿದ ಶ್ರದ್ಧಾ ಕಪೂರ್‌


ಇತ್ತೀಚೆಗಷ್ಟೇ ತೆರೆ ಕಂಡು ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿರುವ ಸ್ತ್ರೀ 2 ಸಿನಿಮಾದ ಸಕ್ಸೆಸ್‌ ಸಂಭ್ರಮದಲ್ಲಿರುವ ಬಾಲಿವುಡ್‌ ಸ್ಟಾರ್‌ ನಟಿ ಶ್ರದ್ಧಾ ಕಪೂರ್‌(Shraddha Kapoor) ಸಿನಿಮಾ ಯಶಸ್ಸಿನ ಬೆನ್ನಲ್ಲೇ ಅವರ ಇನ್‌ಸ್ಟಾಗ್ರಾಂ ಫಾಲೋವರ್ಸ್‌ ಸಂಖ್ಯೆಯೂ ಭಾರೀ ಏರಿಕೆ ಆಗಿದ್ದು, ಪ್ರಧಾನಿ ನರೇಂದ್ರ ಮೋದಿ(Narendra Modi)ಯವರನ್ನೇ ಹಿಂದಿಕ್ಕಿದ್ದಾರೆ.

ಶ್ರದ್ಧಾ ಕಪೂರ್ ಇನ್‌ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ ಬರೋಬ್ಬರಿ 91.4 ಮಿಲಿಯನ್‌ಗೆ ಎರಿಕೆಯಾಗಿದೆ. ಪ್ರಧಾನಿ ಮೋದಿ ಇನ್‌ಸ್ಟಾಗ್ರಾಂನಲ್ಲಿ 91.3 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಟ್ವಿಟರ್‌ನಲ್ಲಿ ಮೋದಿ 101.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಆಮೂಲಕ ಅತಿ ಹೆಚ್ಚು ಫಾಲೋವರ್ಸ್‌ ಹೊಂದಿರುವ ಸೆಲೆಬ್ರಿಟಿಗಳಲ್ಲಿ ಶ್ರದ್ಧಾ ಮೂರನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿರುವ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಬರೋಬ್ಬರಿ 271 ಮಿಲಿಯನ್ ಇನ್‌ಸ್ಟಾ ಫಾಲೋವರ್ಸ್ ಹೊಂದಿದ್ದಾರೆ. ಎರಡನೇ ಸ್ಥಾನದಲ್ಲಿರುವ ನಟಿ ಪ್ರಿಯಾಂಕಾ ಚೋಪ್ರಾ 91.8 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಮೂರನೇ ಸ್ಥಾನವವನ್ನು ಇದೀಗ ಶ್ರದ್ಧ ಕಪೂರ್ ಆಕ್ರಮಿಸಿಕೊಂಡರೆ, ನರೇಂದ್ರ ಮೋದಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

Continue Reading

ಕ್ರೀಡೆ

Ritika Sajdeh: ಜೂನಿಯರ್​ ಹಿಟ್​ಮ್ಯಾನ್​ ನಿರೀಕ್ಷೆಯಲ್ಲಿ ರೋಹಿತ್​; ಪತ್ನಿಯ ಬೇಬಿ ಬಂಪ್‌ ವಿಡಿಯೊ ವೈರಲ್​

Ritika Sajdeh: ಬ್ಯುಸಿನೆಸ್ ಮ್ಯಾನೇಜರ್ ಆಗಿದ್ದ ರಿತಿಕಾ ಸಜ್ದೇಹ್ ಅವರನ್ನು ರೋಹಿತ್ ಶರ್ಮಾ 2015ರಲ್ಲಿ ಮದುವೆಯಾಗಿದ್ದರು. ಮದುವೆಗೂ ಮುನ್ನ ರೋಹಿತ್-ರಿತಿಕಾ ಇಬ್ಬರೂ 6 ವರ್ಷಗಳಿಂದ ಡೇಟಿಂಗ್‌ನಲ್ಲಿದ್ದರು

VISTARANEWS.COM


on

Ritika Sajdeh
Koo

ಮುಂಬಯಿ: ಹಿಟ್​ಮ್ಯಾನ್​ ಖ್ಯಾತಿಯ ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ(Rohit Sharma) ಅವರು ಸದ್ಯದಲ್ಲೇ ಎರಡನೇ ಮಗುವಿನ ತಂದೆಯಾಗುವ ನಿರೀಕ್ಷೆಯಲ್ಲಿದ್ದಾರೆ. ಹೌದು, ರೋಹಿತ್​ ಪತ್ನಿ ರಿತಿಕಾ ಸಜ್ದೇಹ್ (Ritika Sajdeh) ಗರ್ಭಿಣಿಯಾಗಿದ್ದಾರೆ ಎಂದು ವರದಿಯಾಗಿದೆ. ರಿತಿಕಾ ಬೇಬಿ ಬಂಪ್‌ ವಿಡಿಯೊ ಒಂದು ವೈರಲ್​ ಆಗುತ್ತಿದ್ದು, ರೋಹಿತ್​ ಅಭಿಮಾನಿಗಳು ಜೂನಿಯರ್​ ಹಿನ್​ಮ್ಯಾನ್​ ಶೀಘ್ರದಲ್ಲೇ ಬರಲಿದ್ದಾರೆ ಎಂದು ಕಮೆಂಟ್​ ಮಾಡಿದ್ದಾರೆ.

ರೋಹಿತ್​ ಶರ್ಮ ಮತ್ತು ರಿತಿಕಾ ಸಜ್ದೇಹ್(Ritika Sajdeh) ದಂಪತಿಗೆ ಈಗಾಗಲೇ ಓರ್ವ ಪುತ್ರಿ ಇದ್ದಾಳೆ. ಈಕೆಯ ಹೆಸರು ಸಮೈರಾ. ಇದೀಗ ಈ ಜೋಡಿ 2ನೇ ಮಗುವಿನ ನಿರೀಕ್ಷೆಯಲ್ಲಿ ಇದ್ದ ಹಾಗಿದೆ. ರಿತಿಯಾ ಮುಂಬೈಯಲ್ಲಿ ತಿರುಗಾಡುವುದನ್ನು ಪಾಪರಾಜಿಗಳು ಸೆರೆ ಹಿಡಿದಿದ್ದಾರೆ. ಈ ವಿಡಿಯೊದಲ್ಲಿ ರಿತಿಕಾ ಅವರ ಬೆಬಿ ಬಂಪ್‌ ದೃಶ್ಯವು ಸೆರೆಯಾಗಿದೆ. ಹಾಗಾಗಿ, ರೋಹಿತ್​ ಪತ್ನಿಯು ಗರ್ಭಿಣಿಯಾಗಿರುವುದು ದೃಢಪಟ್ಟಿದೆ.

ತನ್ನ ಬ್ಯುಸಿನೆಸ್ ಮ್ಯಾನೇಜರ್ ಆಗಿದ್ದ ರಿತಿಕಾ ಸಜ್ದೇಹ್ ಅವರನ್ನು ರೋಹಿತ್ ಶರ್ಮಾ 2015ರಲ್ಲಿ ಮದುವೆಯಾಗಿದ್ದರು. ಮದುವೆಗೂ ಮುನ್ನ ರೋಹಿತ್-ರಿತಿಕಾ ಇಬ್ಬರೂ 6 ವರ್ಷಗಳಿಂದ ಡೇಟಿಂಗ್‌ನಲ್ಲಿದ್ದರು. ಮದುವೆಯಾದ ಬಳಿಕವೂ ಕ್ರಿಕೆಟ್‌ ಪಂದ್ಯಗಳ ವೇಳೆ ಮೈದಾನದಲ್ಲಿದ್ದು ತನ್ನ ಪತಿ ರೋಹಿತ್​ಗೆ ರಿತಿಕಾ ಚಿಯರ್ ಮಾಡುತ್ತಿರುತ್ತಾರೆ.

ಇದನ್ನೂ ಓದಿ Rohit Sharma: ಮುಂಬೈ ಸ್ಟ್ರೀಟ್​ನಲ್ಲಿ ಜಾಲಿ ರೈಡ್‌ ಮಾಡಿದ ರೋಹಿತ್​; ವಿಡಿಯೊ ವೈರಲ್​

ಸದ್ಯ ರೋಹಿತ್​ ಶರ್ಮ(Rohit Sharma) ಅವರು ಯಾವುದೇ ಸರಣಿ ಇಲ್ಲದ ಕಾರಣ ವಿಶ್ರಾಂತಿಯಲ್ಲಿದ್ದಾರೆ. ತವರಾದ ಮುಂಬೈನಲ್ಲಿ ಜಾಲಿ ಮೂಡ್​ನಲ್ಲಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಮುಂಬೈಯ ಸ್ಟ್ರೀಟ್​ ಒಂದರಲ್ಲಿ ರೋಹಿತ್​ ನೀಲಿ ಬಣ್ಣದ ಲ್ಯಾಂಬೋರ್ಗಿನಿ(Lamborghini) ಕಾರಿನಲ್ಲಿ ಜಾಲಿ ರೈಡ್​ ಮಾಡಿರುವ ವಿಡಿಯೊ ವೈರಲ್​ ಆಗಿತ್ತು.

ರೋಹಿತ್​ ಅವರು ಲ್ಯಾಂಬೋರ್ಗಿನಿ ಕಾರಿನಲ್ಲಿ ಬರುತ್ತಿರುವ ವಿಡಿಯೊವನ್ನು ನೆಟ್ಟಿಗರೊಬ್ಬರು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ರೋಹಿತ್​ ರಸ್ತೆ ಬದಿಯಲ್ಲಿ ನಿಂತಿದ್ದ ಅಭಿಮಾನಿಗಳನ್ನು ಕಂಡು ಥಮ್ಸ್ ಅಪ್‌ ಮಾಡಿ ಮುಂದೆ ಸಾಗಿದ್ದರು. ರೋಹಿತ್​ ಏಕದಿನದಲ್ಲಿ ಲಂಕಾ ವಿರುದ್ಧ 264 ರನ್ ಬಾರಿಸಿದ್ದರು. ಇದೇ ಸಂಖ್ಯೆಯನ್ನು ತಮ್ಮ ಕಾರ್​ ನಂಬರ್​ ಆಗಿ ಬಳಸಿಕೊಂಡಿದ್ದಾರೆ.​

ಟಿ20 ವಿಶ್ವಕಪ್​ ಮುಗಿದ ಬಳಿಕ ಕುಟುಂಬ ಸಮೇತರಾಗಿ ವಿದೇಶಕ್ಕೆ ಪ್ರವಾಸ ಹೋಗಿದ್ದ ರೋಹಿತ್​ ಮುಂಬೈಗೆ ಮರಳಿದ್ದ ವೇಳೆಯೂ ಇದೇ ಕಾರಿನಲ್ಲಿ ವಿಮಾನ ನಿಲ್ದಾಣದಿಂದ ಮನೆಗೆ ತೆರಳಿದ್ದ ವಿಡಿಯೊ ಮೂರು ವಾರಗಳ ಹಿಂದೆ ವೈರಲ್​ ಆಗಿತ್ತು. ಸದ್ಯ ವಿಶ್ರಾಂತಿಯಲ್ಲಿರುವ ರೋಹಿತ್​ ಬಾಂಗ್ಲಾದೇಶ ವಿರುದ್ಧದ ಟೆಸ್ಟ್​ ಸರಣಿ ವೇಳೆಗೆ ತಂಡ ಸೇರಲಿದ್ದಾರೆ.

Continue Reading

ಕ್ರೀಡೆ

Cheteshwar Pujara: ಕೌಂಟಿಯಿಂದಲೂ ಹೊರಬಿದ್ದ ಚೇತೇಶ್ವರ ಪೂಜಾರ

Cheteshwar Pujara: ಎಡಗೈ ಬ್ಯಾಟರ್‌ ಹ್ಯೂಸ್‌‍ ಅವರು ಮುಂದಿನ ಋತುವಿನಲ್ಲಿ ಕೌಂಟಿ ಕ್ರಿಕೆಟ್‌ನ ಎಲ್ಲ ಚಾಂಪಿಯನ್‌ಷಿಪ್‌ ಮತ್ತು ಟಿ20 ವಿಟಾಲಿಟಿ ಬ್ಲಾಸ್ಟ್‌ ಪಂದ್ಯಗಳಿಗೆ ಲಭ್ಯವಿರುವ ಕಾರಣ ಚೇತೇಶ್ವರ ಪೂಜಾರ ಅವರನ್ನು ಕೈಬಿಡಲಾಗುವುದು ಎಂದು ಸಸೆಕ್ಸ್‌ ಕೌಂಟಿ ಕ್ಲಬ್​ ತಿಳಿಸಿದೆ.

VISTARANEWS.COM


on

Cheteshwar Pujara
Koo

ಲಂಡನ್​: ಟೀಮ್​ ಇಂಡಿಯಾದ ಟೆಸ್ಟ್‌ ಸ್ಪೆಷಲಿಸ್ಟ್‌, ಚೇತೇಶ್ವರ ಪೂಜಾರ(Cheteshwar Pujara) ಅವರ ಸಸೆಕ್ಸ್‌ ಕೌಂಟಿ(Sussex stint) ಕ್ರಿಕೆಟ್‌ ಕ್ಲಬ್‌ ಜತೆಗಿನ ಪಯಣ ಅಂತ್ಯ ಕಂಡಿದೆ. ಆಸ್ಟ್ರೇಲಿಯಾದ ಡೇನಿಯಲ್‌ ಹ್ಯೂಸ್‌‍(Daniel Hughes) ಅವರ ಸೇವೆ ಉಳಿಸಿಕೊಳ್ಳುವುದಕ್ಕಾಗಿ ಸಸೆಕ್ಸ್‌ ಕೌಂಟಿ ಕ್ರಿಕೆಟ್‌ ಕ್ಲಬ್‌ ತಂಡವು ಪೂಜಾರ ಅವರನ್ನು ಕೈಬಿಡಲು ನಿರ್ಧರಿಸಿದೆ.

ಎಡಗೈ ಬ್ಯಾಟರ್‌ ಹ್ಯೂಸ್‌‍ ಅವರು ಮುಂದಿನ ಋತುವಿನಲ್ಲಿ ಕೌಂಟಿ ಕ್ರಿಕೆಟ್‌ನ ಎಲ್ಲ ಚಾಂಪಿಯನ್‌ಷಿಪ್‌ ಮತ್ತು ಟಿ20 ವಿಟಾಲಿಟಿ ಬ್ಲಾಸ್ಟ್‌ ಪಂದ್ಯಗಳಿಗೆ ಲಭ್ಯವಿರುವ ಕಾರಣ ಚೇತೇಶ್ವರ ಪೂಜಾರ ಅವರನ್ನು ಕೈಬಿಡಲಾಗುವುದು ಎಂದು ಸಸೆಕ್ಸ್‌ ಕೌಂಟಿ ಕ್ಲಬ್​ ತಿಳಿಸಿದೆ.

ಪೂಜಾರ 2024ರಲ್ಲಿ ಸತತ ಮೂರನೇ ಬಾರಿಗೆ ಸಸೆಕ್ಸ್‌ ತಂಡಕ್ಕೆ ಮರಳಿದ್ದರು. ಹ್ಯೂಸ್‌‍ ತಂಡಕ್ಕೆ ಬರುವ ಮೊದಲು ಅವರು ಮೊದಲ ಏಳು ಚಾಂಪಿಯನ್‌ಷಿಪ್‌ ಪಂದ್ಯಗಳನ್ನು ಆಡಿದ್ದರು. ಹ್ಯೂಸ್‌‍ ಈ ವರ್ಷದ ಬ್ಲಾಸ್ಟ್‌ನ ಗುಂಪು ಹಂತಗಳಲ್ಲಿ ಐದು ಅರ್ಧಶತಕಗಳು ಸೇರಿದಂತೆ 43.07 ಸರಾಸರಿಯಲ್ಲಿ 560 ರನ್‌ ಗಳಿಸಿ ಗಮನ ಸೆಳೆದಿದ್ದರು. ಪೂಜಾರ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಇದೇ ಕಾರಣಕ್ಕೆ ಅವರನ್ನು ಕೈ ಬಿಟ್ಟು ಹ್ಯೂಸ್‌‍ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲು ಕ್ಲಬ್​ ನಿರ್ಧರಿಸಿದೆ. ರಾಷ್ಟ್ರೀಯ ತಂಡದ ಪರ ರನ್‌ ಕಲೆ ಹಾಕುವಲ್ಲಿ ವಿಫಲರಾದ ಕಾರಣ ಪೂಜಾರ ಅವರು ಟೀಮ್​ ಇಂಡಿಯಾದಿಂದ ದೂರ ಉಳಿದಿದ್ದಾರೆ.

ಇದನ್ನೂ ಓದಿ ತಾಯಿ ಕುಸಿದು ಬಿದ್ದ ಕೂಡಲೇ ಅಶ್ವಿನ್​ ನೆರವಿಗೆ ಬಂದದ್ದು ಚೇತೇಶ್ವರ ಪೂಜಾರ

​35 ವರ್ಷದ ಪೂಜಾರ ಕೊನೆಯ ಬಾರಿ ಭಾರತ ಪರ ಆಡಿದ್ದು ಜುಲೈ 2023 ರಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ. ಕಳಪೆ ಬ್ಯಾಟಿಂಗ್​ ಫಾರ್ಮ್​ನಿಂದಾಗಿ ಅವರು ತಂಡದಿಂದ ಹೊರಬಿದ್ದಿದ್ದರು. ಪೂಜಾರ ಎರಡೂ ಇನಿಂಗ್ಸ್​ನಲ್ಲಿ ಕಳಪೆ ಬ್ಯಾಟಿಂಗ್​ ಪ್ರದರ್ಶನ ತೋರಿದ್ದರು. ಅದರಲ್ಲೂ ಮೊದಲ ಇನಿಂಗ್ಸ್​ನಲ್ಲಿ ವಿಕೆಟ್​ಗೆ ಬಂದ ಚೆಂಡನ್ನು ಬ್ಯಾಟ್​ ಎತ್ತಿ ಹಿಡಿದು ಕ್ಲೀನ್​ ಬೌಲ್ಡ್​ ಆಗಿದ್ದರು. ಪೂಜಾರ ಈ ರೀತಿ ವಿಕೆಟ್​ ಒಪ್ಪಿಸಿದ್ದನ್ನು ಕಂಡು ಅನೇಕ ಮಾಜಿ ಕ್ರಿಕೆಟಿಗರು ಟೀಕೆ ವ್ಯಕ್ತಪಡಿಸಿದ್ದರು. ಪೂಜಾರ ಇದುವರೆಗೆ ಭಾರತ ಪರ 103 ಟೆಸ್ಟ್​ ಪಂದ್ಯ ಆಡಿ 7195 ರನ್​ ಬಾರಿಸಿದ್ದಾರೆ. ಇದರಲ್ಲಿ 19 ಶತಕ ಮತ್ತು 35 ಅರ್ಧಶತಕ ಒಳಗೊಂಡಿದೆ.

ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಅತ್ಯಧಿಕ ದ್ವಿಶತಕ ಬಾರಿಸಿದ ಮೊದಲ ಭಾರತೀಯ ಎಂಬ ದಾಖಲೆ ಚೇತೇಶ್ವರ ಹೆಸರಿನಲ್ಲಿದೆ. ಅವರು ಒಟ್ಟು 17* ದ್ವಿಶತಕ ಬಾರಿಸಿದ್ದಾರೆ. 61 ಶತಕಗಳು ಹಾಗೂ 78 ಅರ್ಧಶತಕಗಳು ಕೂಡ ಬಾರಿಸಿದ್ದಾರೆ. ಇನ್ನು ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 20 ಸಾವಿರ ರನ್ ಪೂರೈಸಿದ ಭಾರತದ 4ನೇ ಬ್ಯಾಟರ್ ಎಂಬ ಹೆಗ್ಗಳಿಕೆಯೂ ಪೂಜಾರ ಅವರದ್ದಾಗಿದೆ.

Continue Reading
Advertisement
Sexual assault
ಪ್ರಮುಖ ಸುದ್ದಿ13 mins ago

Sexual assault: ಶಾಲೆಗಳಲ್ಲಿ ಫೇಕ್‌ NCC ಕ್ಯಾಂಪ್‌ ಆಯೋಜಿಸಿ ಅತ್ಯಾಚಾರ; ಪ್ರಮುಖ ಆರೋಪಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ

Health Tips
ಆರೋಗ್ಯ29 mins ago

Health Tips: ನಿಂತು ಊಟ ಮಾಡುವುದಕ್ಕಿಂತ ಕೂತು ಊಟ‌ ಮಾಡಿದರೆ ಏನೇನು ಲಾಭಗಳಿವೆ ನೋಡಿ!

Nirmal Benny
ಸಿನಿಮಾ32 mins ago

Nirmal Benny: ಹೃದಯಾಘಾತದಿಂದ ಮಾಲಿವುಡ್‌ನ ಖ್ಯಾತ ನಟ ನಿರ್ಮಲ್ ಬೆನ್ನಿ ನಿಧನ

Self Harming
ಮೈಸೂರು40 mins ago

Self Harming : ಪ್ರೇಮ ವೈಫಲ್ಯಕ್ಕೆ ಯುವಕ ಆತ್ಮಹತ್ಯೆ; ಅಪ್ಪನ ಸಾಲಕ್ಕೆ ನೇಣು ಬಿಗಿದುಕೊಂಡ ಮಗ!

Shakib Al Hasan
ಕ್ರೀಡೆ42 mins ago

Shakib Al Hasan: ಬಾಂಗ್ಲಾ ತಂಡದ ನಾಯಕ ಶಕಿಬ್​ ವಿರುದ್ಧ ಕೊಲೆ ಪ್ರಕರಣ ದಾಖಲು

Fashion Trend
ಫ್ಯಾಷನ್44 mins ago

Fashion Trend: ಜೆನ್‌ ಜಿ ಫ್ಯಾಷನ್‌‌‌ಗೆ ಎಂಟ್ರಿ ಕೊಟ್ಟ ವೈಬ್ರೆಂಟ್‌ ಕ್ವಿರ್ಕಿ ಲೆಗ್ಗಿಂಗ್ಸ್!

PM Modi Ukraine Visit
ವಿದೇಶ53 mins ago

PM Modi Ukraine Visit: ಉಕ್ರೇನ್‌ಗೆ ಬಂದಿಳಿದ ಪ್ರಧಾನಿ ಮೋದಿ- ಝೆಲೆನ್ಸ್ಕಿಗೆ ಆತ್ಮೀಯ ಅಪ್ಪುಗೆ

Consolidated Fund Misuse
ಪ್ರಮುಖ ಸುದ್ದಿ55 mins ago

Consolidated Fund Misuse: 1,494 ಕೋಟಿ ಸಂಚಿತ ನಿಧಿ ದುರ್ಬಳಕೆ; ಸಿಎಂ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು!

Physical abuse
ಕ್ರೈಂ1 hour ago

Physical Abuse : 10 ವರ್ಷದ ಅಪ್ರಾಪ್ತೆ ಮೇಲೆ ಎರಗಿದ ಕಾಮುಕ; ಅತ್ಯಾಚಾರದ ವೇಳೆ ಕಿರುಚಾಡಿದ್ದಕ್ಕೆ ಕೊಲೆಗೈದ ಹಂತಕ

Minister MB Patil statement in janandolana programme by congress party at ramanagara
ಪ್ರಮುಖ ಸುದ್ದಿ1 hour ago

MB Patil: ಸಿಎಂ ಆಯ್ತು, ಈಗ ಸಚಿವ ಎಂಬಿ ಪಾಟೀಲ್‌ ವಿರುದ್ಧ ಪ್ರಾಸಿಕ್ಯೂಶನ್‌ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ದೂರು

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ3 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌