ಮುಂಬಯಿ: ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ ನಡದ ಮುಂಬೈ ಇಂಡಿಯನ್ಸ್ (IPL 2023) ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆರು ವಿಕೆಟ್ಗಳಿಂದ ಸೋಲು ಅನುಭವಿಸಿತ್ತು. ಪಂದ್ಯದಲ್ಲಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಮಡಿ 18 ಎಸೆತಗಳಲ್ಲಿ 4 ಬೌಂಡರಿ ಮತ್ತು 6 ಸೇರಿದಂತೆ 30 ರನ್ ಗಳಿಸಿದ್ದರು. ಆದರೆ ವಿಕೆಟ್ ಕೀಪಿಂಗ್ಗೆ ಬಂದಿರಲಿಲ್ಲ. ಅದಕ್ಕೆ ಕಾರಣ ಏನು ಎಂದು ಆರ್ಸಿಬಿ ಮುಖ್ಯ ಕೋಚ್ ಸಂಜಯ್ ಬಂಗಾರ್ ಮಾಹಿತಿ ಕೊಟ್ಟಿದ್ದಾರೆ. ದಿನೇಶ್ ಕಾರ್ತಿಕ್ ಅವರಿಗೆ ಫಿಟ್ನೆಸ್ ಸಮಸ್ಯೆ ಇದೆ ಎಂಬುದಾಗಿ ಅವರು ಹೇಳಿದ್ದಾರೆ. ಆರ್ಸಿಬಿ ಪರ ಬ್ಯಾಟಿಂಗ್ನಲ್ಲಿ ಎಡವಿರುವ ದಿನೇಶ್ ಕಾರ್ತಿಕ್ ಈ ಮುಂಬಯಿ ವಿರುದ್ಧ ಫಾರ್ಮ್ ಕಂಡುಕೊಂಡಿದ್ದರು. ಆದರೆ, ಫಿಟ್ನೆಸ್ ಕಳೆದುಕೊಂಡಿದ್ದಾರೆ/
ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ಮೊದಲ ಇನಿಂಗ್ಸ್ನ ಕೊನೇ ಓವರ್ನಲ್ಲಿ ಔಟಾದ ನಂತರ ಪೆವಿಲಿಯನ್ಗೆ ಹೋಗುವ ಹಾದಿಯಲ್ಲಿ ಬಳಲಿದಂತೆ ಕಂಡು ಬಂದರು. ಬಳಿಕ ಅವರು ಆಟಕ್ಕೆ ಇಳಿಯಲಿಲ್ಲ. ಅನುಜ್ ರಾವತ್ ವಿಕೆಟ್ಕೀಪಿಂಗ್ ಜವಾಬ್ದಾರಿ ವಹಿಸಿಕೊಂಡರು.
ಕಾರ್ತಿಕ್ ಪೆವಿಲಿಯನ್ಗೆ ಹಿಂದಿರುಗುವಾಗ ನಿರ್ಜಲೀಕರಣಕ್ಕೊಳಗಾಗಿದ್ದರು. ಹೀಗಾಗಿ ವಾಂತಿ ಮಾಡಿದ್ದರು ಎಂದು ಆರ್ಸಿಬಿ ಮುಖ್ಯ ಕೋಚ್ ಸಂಜಯ್ ಬಂಗಾರ್ ಹೇಳಿದ್ದಾರೆ. ಆಟಗಳ ನಡುವೆ ಸಾಕಷ್ಟು ಸಮಯವಿದೆ ಮತ್ತು ಅವರು ಸಮಯಕ್ಕೆ ಸರಿಯಾಗಿ ಫಿಟ್ ಆಗಿರಬೇಕು ಎಂದು ತರಬೇತುದಾರ ಹೇಳಿದ್ದಾರೆ. ಅಲ್ಲದೆ, ದಿನೇಶ್ ಕಾರ್ತಿಕ್ ನಮ್ಮ ತಂಡದ ಪ್ರಮುಖ ಸದಸ್ಯ ಎಂಬುದಾಗಿ ಹೇಳಿಕೊಂಡಿದ್ದಾರೆ.
ಇನ್ನಿಂಗ್ಸ್ ಸಮಯದಲ್ಲಿ, ದಿನೇಶ್ ಕಾರ್ತಿಕ್ ಅನಾರೋಗ್ಯಕ್ಕೆ ಒಳಗಾಗಲು ಪ್ರಾರಂಭಿಸಿದರು, ಅವರು ಸ್ವಲ್ಪ ನಿರ್ಜಲೀಕರಣಕ್ಕೆ ಒಳಗಾಗಿದ್ದರು ಮತ್ತು ಹಿಂದಿರುಗುವಾಗ ಅವರು ವಾಂತಿ ಮಾಡಿಕೊಂಡರು. ಮುಂದಿನ ಪಂದ್ಯಕ್ಕೆ ಸಾಕಷ್ಟು ಸಮಯವಿದೆ. ಅಷ್ಟರಲ್ಲಿ ಅವರು ಸುಧಾರಿಸಿಕೊಳ್ಳಲಿದ್ದಾರೆ. ಅವರು ನಮ್ಮ ತಂಡದ ಪ್ರಮುಖ ಸದಸ್ಯರಾಗಿದ್ದಾರೆ ಎಂದು ಸಂಜಯ್ ಬಂಗಾರ್ ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಬ್ಯಾಟಿಂಗ್ ವೈಫಲ್ಯ ಒಪ್ಪಿಕೊಂಡ ಬಂಗಾರ್
ಆರ್ಸಿಬಿಯ ಯುವ ಭಾರತೀಯ ಬ್ಯಾಟ್ಸ್ಮನ್ಗಳಾದ ಅನುಜ್ ರಾವತ್ ಮತ್ತು ಶಹಬಾಜ್ ಅಹ್ಮದ್ ಬ್ಯಾಟಿಂಗ್ನಲ್ಲಿ ಪ್ರಗತಿ ಸಾಧಿಸಿಲ್ಲ ಎಂದು ಬಂಗಾರ್ ಒಪ್ಪಿಕೊಂಡಿದ್ದಾರೆ. ಇದೇ ವೇಳೆ ಅವರು ಮಹಿಪಾಲ್ ಲಾಮ್ರೊರ್ ತಮ್ಮ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡಿದ್ದಾರೆ ಎಂದು 50 ವರ್ಷದ ಮಾಜಿ ಆಟಗಾರ ಹೇಳಿದ್ದಾರೆ. ಕೋಲ್ಕತಾ ನೈಟ್ ರೈಡರ್ಸ್ ಉದಯೋನ್ಮುಖ ಬ್ಯಾಟರ್ ರಿಂಕು ಸಿಂಗ್ ಅವರ ಉದಾಹರಣೆಯನ್ನು ಉಲ್ಲೇಖಿಸಿ ಯುವ ಆಟಗಾರರೊಂದಿಗೆ ತಾಳ್ಮೆಯಿಂದಿರಬೇಕು ಎಂದು ಅವರು ಹೇಳಿದರು.
ಇದನ್ನೂ ಓದಿ ವ: IPL 2023 : ಕೊಹ್ಲಿ ಔಟಾಗುತ್ತಿದ್ದಂತೆ ಮಾವಿನ ಹಣ್ಣು ತಿಂದು ಸಂಭ್ರಮಿಸಿದ ಎಲ್ಎಸ್ಜಿ ಬೌಲರ್ ನವಿನ್ ಉಲ್ ಹಕ್
“ನಮ್ಮ ಯುವ ಬ್ಯಾಟರ್ಗಳಿಂದ ಉತ್ತಮ ಮೊತ್ತ ಮೂಡಿ ಬರುತ್ತಿಲ್ಲ. ಆದರೆ ಲಾಮ್ರೋರ್ ಅವಕಾಶಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಯುವ ಆಟಗಾರರು ಹಚ್ಚು ತಾಳ್ಮೆಯಿಂದ ಇರಬೇಕು ಹಾಗೂ ಅವಕಾಶಕ್ಕಾಗಿ ಕಾಯಬೇಕು ಎಂದು ಹೇಳಿದರು.