ಬೆಂಗಳೂರು: ಐಪಿಎಲ್ (IPL 2023) ವೀಕ್ಷಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. ಕ್ರಿಕೆಟ್ ಅಭಿಮಾನಿಗಳೆಲ್ಲರೂ ಐಪಿಎಎಲ್ ಪಂದ್ಯಗಳನ್ನು ಒಂದು ಕ್ಷಣವೂ ಬಿಡದೇ ನೋಡುತ್ತಿದ್ದಾರೆ. ಹೀಗಾಗಿ ನೇರ ಪ್ರಸಾರ ವೀಕ್ಷಣೆಯ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಅಂತೆಯೇ ಐಪಿಎಲ್ ಹಾಲಿ ಆವೃತ್ತಿಯ ಟಿವಿ ನೇರ ಪ್ರಸಾರದ ಹಕ್ಕು ಪಡೆದುಕೊಂಡಿರುವ ಡಿಸ್ನಿ ಸ್ಟಾರ್ ಒಟ್ಟು ವೀಕ್ಷಕರ ಲೆಕ್ಕದಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ಬಾರ್ಕ್ ನೀಡಿರುವ ಅಂಕಿ ಅಂಶದ ಪ್ರಕಾರ ಆರಂಭಿಕ 19 ಪಂದ್ಯಗಳನ್ನು ಒಟ್ಟು 36.9 ಕೋಟಿ ಮಂದಿ ವೀಕ್ಷಣೆ ಮಾಡಿದ್ದಾರೆ. ಇದು ಐಪಿಎಲ್ ಇತಿಹಾಸದಲ್ಲಿಯೇ ರೆಕಾರ್ಡ್ ಎಂದು ಹೇಳಲಾಗಿದೆ.
ಮೊದಲ 19 ಪಂದ್ಯಗಳ ನೇರ ಪ್ರಸಾರದಲ್ಲಿ ಡಿಸ್ನಿ ಕಂಪನಿಯು ಒಟ್ಟು 11350 ಕೋಟಿ ನಿಮಿಷಗಳ ವೀಕ್ಷಣೆ ಸಮಯವನ್ನು ಗಳಿಸಿದೆ. ಡಿಸ್ನಿ ಸ್ಟಾರ್ ಸಂಸ್ಥೆಯ ಕೂಡ ತಡೆ ರಹಿತವಾಗಿ ಎಲ್ಲ ಪಂದ್ಯಗಳನ್ನು ವೀಕ್ಷಣೆಯ ಅನುಭವವನ್ನು ಪ್ರೇಕ್ಷಕರಿಗೆ ನೀಡಿದೆ.
ಕಳೆದ ಆವೃತ್ತಿಗೆ ಹೋಲಿಸಿದರೆ ಪಂದ್ಯಗಳ ವೀಕ್ಷಣೆಯಲ್ಲಿ ಶೇಕಡಾ 5 ಬೆಳವಣಿಗೆಯನ್ನು ಕಂಡಿದೆ. ಮೊದಲ 19 ಪಂದ್ಯಗಳ ನೇರ ಪ್ರಸಾರದಲ್ಲಿ ಇದು ಗರಿಷ್ಠ ಸಾಧನೆಯಾಗಿದೆ. ಡಿಜಿಟಲ್ ವೀಕ್ಷಕರ ಸಂಖ್ಯೆ ಹೆಚ್ಚಳವಾಗುವುದರ ಜತೆಗೆ ಟಿವಿ ವೀಕ್ಷಕರ ಪ್ರಮಾಣವೂ ಏರುಗತಿಯಲ್ಲಿ ಸಾಗುತ್ತಿದೆ.
ಐಪಿಎಲ್ 16ನೇ ಆವೃತ್ತಿಯ ಮೊದಲ 19 ಪಂದ್ಯಗಳ ವೀಕ್ಷಣೆ ಮೂಲಕ ಡಿಸ್ನಿ ಸ್ಟಾರ್ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿದೆ. ಈ ಮೂಲಕ ದಾಖಲೆಯ ಆರಂಭವನ್ನು ಪಡೆದುಕೊಂಡಿದೆ. ಐಪಿಎಲ್ ಹಾಲಿ ಆವೃತ್ತಿಯ ಕೇವಲ 19 ಪಂದ್ಯಗಳ ಮೂಲಕ ಕಳೆದ ವರ್ಷದ ಒಟ್ಟಾರೆ ವೀಕ್ಷಕರ ಸಂಖ್ಯೆಯ ಸನಿಹಕ್ಕೆ ಬಂದಿದೆ. ಅದೇ ರೀತಿ ಎಲ್ಲ ವಯೋಮಾನದವರು ಟಿವಿ ವೀಕ್ಷಣೆಯಲ್ಲಿ ತೊಡಗಿರುವುದು ಕಂಡು ಬಂದಿದೆ. ಡಿಸ್ನಿ ಸ್ಟಾರ್ ಮೇಲಿನ ಪ್ರೀತಿಗಾಗಿ ನಾವು ಆಭಾರಿ ಎಂದು ಡಿಸ್ನಿ ಸ್ಟಾರ್‌ನ ಮುಖ್ಯಸ್ಥರಾದ ಸಂಜೋಗ್ ಗುಪ್ತಾ ಅವರು ಹೇಳಿದ್ದಾರೆ.
ದೇಶದ ಕೆಲವು ಸೆಲೆಬ್ರಿಟಿಗಳೊಂದಿಗೆ ಡಿಸ್ನಿ ಸ್ಟಾರ್ ಸಹಯೋಗವನ್ನೂ ಹೊಂದಿದೆ. ಇದರ ಮೂಲಕ ಐಪಿಎಲ್ನ ಆಕರ್ಷಣೆಯನ್ನು ಹೆಚ್ಚಿಸಲಾಗಿದೆ. ರಣವೀರ್ ಸಿಂಗ್, ಸಲ್ಮಾನ್ ಖಾನ್, ಪ್ರಿಯಾಂಕಾ ಚೋಪ್ರಾ, ಪೂಜಾ ಹೆಗ್ಡೆ ಮತ್ತು ನಂದಮೂರಿ ಬಾಲಕೃಷ್ಣ ಸೇರಿದಂತೆ ಜನಪ್ರಿಯ ತಾರೆಗಳು ಡಿಸ್ನಿ ಜತೆ ಒಪ್ಪಂದ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ : IPL 2023 : ಐಪಿಎಲ್ನಲ್ಲಿ ಡಿಜಿಟಲ್ ಪ್ರಸಾರದೆಡೆಗೆ ವಾಲಿದ ಜಾಹೀರಾತುದಾರರು, ಜಿಯೊಗೆ ಭರ್ಜರಿ ಲಾಭ
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಮತ್ತು ಕೆಎಲ್ ರಾಹುಲ್ ಅವರಂತಹ ಕೆಲವು ದೊಡ್ಡ ಕ್ರಿಕೆಟ್ ತಾರೆಗಳೊಂದಿಗೂ ಸ್ಟಾರ್ ಸ್ಪೋರ್ಟ್ಸ್ ಸಹಯೋಗ ಹೊಂದಿದೆ. ‘ಸ್ಟಾರ್ಸ್ ಆನ್ ಸ್ಟಾರ್’ ಕಾರ್ಯಕ್ರಮದ ಮೂಲಕ ಆಟವನ್ನು ಮೀರಿ ಅಭಿಮಾನಿಗಳಿಗೆ ಹತ್ತಿರವಾಗುತ್ತಿದ್ದಾರೆ ಈ ಕ್ರಿಕೆಟಿಗರು. ರಾಜಸ್ಥಾನ್ ರಾಯಲ್ಸ್, ಕೋಲ್ಕೊತಾ ನೈಟ್ರೈಡರ್ಸ್ , ಲಕ್ನೊ ಸೂಪರ್ ಜಯಂಟ್ಸ್ , ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ಜತೆ ವಿಶೇಷ ಪಾಲುದಾರಿಕೆಯನ್ನೂ ಪಡೆದುಕೊಂಡಿದೆ. ಆಟಗಾರರು ಮತ್ತು ತರಬೇತುದಾರರೊಂದಿಗೆ ಸಂದರ್ಶನಗಳು ಮತ್ತು ಇತರ ಉತ್ತೇಜಕ ವಿಷಯವನ್ನು ಒದಗಿಸುತ್ತದೆ. ಅದು ಲೀಗ್‌ನ ಒಟ್ಟಾರೆ ನಿಶ್ಚಿತಾರ್ಥವನ್ನು ಹೆಚ್ಚಿಸಲು ಸಹಾಯ ಮಾಡಿದೆ.
ಡಿಸ್ನಿ ಸ್ಟಾರ್‌ನ ಅಭಿಮಾನಿ ಕೇಂದ್ರಿತ ವಿಧಾನ ಮತ್ತು ಪ್ರಸಾರ ತಂತ್ರಜ್ಞಾನದಲ್ಲಿನ ಆವಿಷ್ಕಾರಗಳು ಅಭಿಮಾನಿಗಳ ಮೆಚ್ಚುಗೆ ಗಳಿಸಿವೆ. ಟಿವಿಯಲ್ಲಿ ಐಪಿಎಲ್ ನೋಡುವ ಪ್ರೇಕ್ಷಕರಿಗೆ ಸಾಟಿಯಿಲ್ಲದ ಅನುಭವಗಳನ್ನು ನೀಡುತ್ತಿದೆ.