ಮುಂಬೈ ಐಪಿಎಲ್ ನ 2024ರ (IPL 2024) ಅಧಿಕೃತ ಪ್ರಸಾರಕ ಡಿಸ್ನಿ ಸ್ಟಾರ್ 17ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ದಾಖಲೆಯೊಂದಿಗೆ ಆರಂಭಿಸಿದೆ. ಐಪಿಎಲ್ 2024 ರ ಮೊದಲ ದಿನದಂದು 16.8 ಕೋಟಿ ವಿಶಿಷ್ಟ ವೀಕ್ಷಕರು 1276 ಕೋಟಿ ನಿಮಿಷಗಳ ವೀಕ್ಷಣೆಯ ಸಮಯವನ್ನು ದಾಖಲಿಸಿದೆ. ಐಪಿಎಲ್ನ 17 ನೇ ಸೀಸನ್ ಐಪಿಎಲ್ ಆರಂಭಿಕ ದಿನದಂದು ಅತಿ ಹೆಚ್ಚು ಟಿವಿ ವೀಕ್ಷಣೆಗೆ (TV viewers) ಸಾಕ್ಷಿಯಾಯಿತು. ಡಿಸ್ನಿ ಸ್ಟಾರ್ ನೆಟ್ವರ್ಕ್ನಲ್ಲಿ ಏಕಕಾಲದಲ್ಲಿ ಪ್ರಸಾರವನ್ನು 6.1 ಕೋಟಿ ವೀಕ್ಷಕರು ವೀಕ್ಷಿಸಿದರು.
ಸ್ಟಾರ್ ಸ್ಪೋರ್ಟ್ಸ್ ವಕ್ತಾರರು “ಇದು ಒಂದು ಸ್ಮರಣೀಯ ಸಾಧನೆಯಾಗಿದ್ದು, ಸ್ಟಾರ್ ಸ್ಪೋರ್ಟ್ಸ್ ಮೇಲಿನ ಅಭಿಮಾನಿಗಳ ಪ್ರೀತಿಯ ಪ್ರತಿಫಲನವಾಗಿದೆ. ಇದು ನೆಟ್ವರ್ಕ್ ಅಚಲ ಬದ್ಧತೆಗೆ ಸಾಧ್ಯವಾಗಿದೆ. ಕ್ರಿಕೆಟ್ ಮತ್ತು ಐಪಿಎಲ್ ಅನ್ನು ಬೆಳೆಸಲು ಸ್ಟಾರ್ ಸ್ಪೋರ್ಟ್ಸ್ ನಿರಂತರವಾಗಿ ಕೈಗೊಂಡಿರುವ ವ್ಯಾಪಕ ಶ್ರೇಣಿಯ ಉಪಕ್ರಮಗಳಿಗೆ ಬೆಂಬಲ ನೀಡಿದ್ದಕ್ಕಾಗಿ ನಾವು ನಮ್ಮ ಎಲ್ಲಾ ಪಾಲುದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ ಮತ್ತು ಬಿಸಿಸಿಐಗೆ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ವೇಗವನ್ನು ಮುಂದುವರಿಸಲು ಮತ್ತು ಅಭೂತಪೂರ್ವ ವೀಕ್ಷಕರನ್ನು ತಲುಪಲು ನಾವು ವಿಶ್ವದ ಅತಿದೊಡ್ಡ ಕ್ರೀಡಾಕೂಟದಲ್ಲಿ ನಮ್ಮ ಸಾಮರ್ಥ್ಯವನ್ನು ಮುಂದುವರಿಸುತ್ತೇವೆ ಎಂದು ಹೇಳಿದರು.
ವೀಕ್ಷಕ ವಿವರಣೆ ತಂಡದಲ್ಲಿರುವ ಸ್ಟಾರ್ಗಳು ಇವರು
ನವಜೋತ್ ಸಿಂಗ್ ಸಿಧು ಅವರು ಭಾರತದ ವಿಶ್ವ ಚಾಂಪಿಯನ್ ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್, ರವಿ ಶಾಸ್ತ್ರಿ, ಸುನಿಲ್ ಗವಾಸ್ಕರ್ ಮತ್ತು ಕ್ರಿಸ್ ಶ್ರೀಕಾಂತ್. ಸ್ಟೀವ್ ಸ್ಮಿತ್ ಮತ್ತು ಸ್ಟುವರ್ಟ್ ಬ್ರಾಡ್, ಬ್ರಿಯಾನ್ ಲಾರಾ, ಮ್ಯಾಥ್ಯೂ ಹೇಡನ್, ಕೆವಿನ್ ಪೀಟರ್ಸನ್, ಜಾಕ್ ಕಾಲಿಸ್ ಮತ್ತು ಡೇಲ್ ಸ್ಟೇನ್ ಅವರೊಂದಿಗೆ ಟಾಟಾ ಐಪಿಎಲ್ 2024 ಅನ್ನು ಪ್ರಸ್ತುತಪಡಿಸಿದರು. ಸಿಎಸ್ಕೆಯ ಮಾಜಿ ತಾರೆಗಳಾದ ಅಂಬಾಟಿ ರಾಯುಡು, ಮುರಳಿ ವಿಜಯ್, ಎಲ್ ಬಾಲಾಜಿ ಮತ್ತು ಸುಬ್ರಮಣ್ಯಂ ಬದ್ರಿನಾಥ್, ಐಪಿಎಲ್ ಚಾಂಪಿಯನ್ಗಳಾದ ವಿನಯ್ ಕುಮಾರ್ ಮತ್ತು ವೇಣುಗೋಪಾಲ್ ರಾವ್ ಅವರು ಡಿಸ್ನಿ ಸ್ಟಾರ್ನ 9 ಭಾಷೆಗಳಲ್ಲಿ ಪ್ರಾದೇಶಿಕ ಫೀಡ್ನ ಮುಂಚೂಣಿಯಲ್ಲಿದ್ದರು.
ಜಿಯೊಗೆ 11.3 ಕೋಟಿ ವೀಕ್ಷಕರು
ಡಿಜಿಟಲ್ನಲ್ಲಿ ಜಿಯೋ ಸಿನೆಮಾ ಐಪಿಎಲ್ನ ಮೊದಲ ದಿನದಂದು 11.3 ಕೋಟಿ ವೀಕ್ಷಕರನ್ನು ಗಳಿಸಿದೆ. ಐಪಿಎಲ್ 2023 ರ ಮೊದಲ ದಿನಕ್ಕಿಂತ ಇದು 51% ಜಿಗಿತವನ್ನು ದಾಖಲಿಸಿದೆ ಎಂದು ಜಿಯೊ ಹೇಳಿಕೊಂಡಿದೆ. ಮೊದಲ ದಿನ ಜಿಯೋ ಸಿನೆಮಾದಲ್ಲಿ ಒಟ್ಟು ವೀಕ್ಷಣೆಯ ಸಮಯ 660 ಕೋಟಿ ನಿಮಿಷಗಳು.
ಇದನ್ನೂ ಓದಿ : IPL 2024 : ಅಪ್ಪನ ಸಿಕ್ಸರ್ಗೆ ಚಿಯರ್ಸ್ ಹೇಳಿದ ಕ್ಲಾಸೆನ್ ಪುತ್ರಿ, ಇಲ್ಲಿದೆ ವಿಡಿಯೊ
ಸ್ಟಾರ್ ಸ್ಪೋರ್ಟ್ಸ್ ಪ್ರಮುಖ ಡಿಟಿಎಚ್ ಪ್ಲಾಟ್ ಫಾರ್ಮ್ ಗಳಲ್ಲಿ ಅಟ್ಮೋಸ್ ಸೌಂಡ್ ನೊಂದಿಗೆ 4 ಕೆ ನಲ್ಲಿ ಐಪಿಎಲ್ ಪ್ರಸಾರ ಪ್ರಾರಂಭಿಸಿದೆ.
ಸ್ಟಾರ್ ಸ್ಪೋರ್ಟ್ಸ್ ವಿಶೇಷ ಚೇತನರಿಗಾಗಿ, ದೃಷ್ಟಿಹೀನರು, ಕಿವುಡರು ಅಥವಾ ಶ್ರವಣದೋಷವುಳ್ಳ ಅಭಿಮಾನಿಗಳಿಗಾಗಿ ಕಾಮೆಂಟರಿ ಮತ್ತು ಸಂಜ್ಞೆ ಭಾಷೆಯ ವಿಶೇಷ ಫೀಡ್ ಅನ್ನು ಪ್ರಾರಂಭಿಸಿದೆ. ಇದು ಈ ಐಪಿಎಲ್ ಅನ್ನು ನಿಜವಾಗಿಯೂ ಒಳಗೊಳ್ಳುವಂತೆ ಮಾಡುತ್ತದೆ. ವಿಶ್ವದ ಯಾವುದೇ ಪ್ರಮುಖ ಕ್ರೀಡಾಕೂಟವು ವಿಕಲಚೇತನರಿಗೆ ಲೈವ್ ಫೀಡ್ ಹೊಂದಿರುವುದು ಇದೇ ಮೊದಲು.