ಬೆಂಗಳೂರು: ವಿಶ್ವ ಕಪ್ನ ತನ್ನ ಕೊನೇ ಲೀಗ್ ಪಂದ್ಯದಲ್ಲಿ ಭಾರತ ತಂಡ ನೆದರ್ಲ್ಯಾಂಡ್ಸ್ ವಿರುದ್ಧ (ind vs ned) ದೊಡ್ಡ ಮೊತ್ತ ಸ್ಕೋರ್ ಬಾರಿಸಿದೆ. ಶ್ರೇಯಸ್ ಅಯ್ಯರ್ ಹಾಗೂ ಕೆ. ಎಲ್ ರಾಹುಲ್ ಅವರ ಶತಕದ ನೆರವಿನಿಂದ 4 ವಿಕೆಟ್ ನಷ್ಟಕ್ಕೆ 410 ರನ್ ಬಾರಿಸಿದೆ. ಇದು ವಿಶ್ವ ಕಪ್ ಇತಿಹಾಸದಲ್ಲಿ ಭಾರತ ತಂಡದ ಎರಡನೇ ಗರಿಷ್ಠ ಮೊತ್ತವಾಗಿದೆ. ಏತನ್ಮಧ್ಯೆ ಭಾರತ ತಂಡದ ಬ್ಯಾಟರ್ಗಳು ಈ ಪಂದ್ಯದಲ್ಲಿ ಒಟ್ಟು 16 ಸಿಕ್ಸರ್ಗಳನ್ನು ಬಾರಿಸಿದ್ದಾರೆ. ಇದು ವಿಶ್ವ ಕಪ್ ಇತಿಹಾಸದಲ್ಲಿ ಭಾರತ ತಂಡ ತಂಡವೊಂದರ ವಿರುದ್ಧ ಬಾರಿಸಿದ ಎರಡನೇ ಗರಿಷ್ಠ ಸಿಕ್ಸರ್ಗಳಾಗಿವೆ.
Hundred for KL rahul with a six 🥵🔥🔥
— MSDìan IRONman (@I_Am_IRONman_07) November 12, 2023
Fastest hundred by an Indian in world Cup🔥#INDvsNED #klrahul pic.twitter.com/NUykFVvRvd
ಭಾರತ ತಂಡ 2007 ವಿಶ್ವ ಕಪ್ನಲ್ಲಿ ಬರ್ಮುಡಾ ತಂಡದ ವಿರುದ್ಧ ಪಂದ್ಯದಲ್ಲಿ ಭಾರತ ತಂಡ 18 ಸಿಕ್ಸರ್ಗಳನ್ನು ಬಾರಿಸಿದ್ದ ಇದುವರೆಗಿನ ಗರಿಷ್ಠ ಸಿಕ್ಸರ್ಗಳು. ಆ ಪಂದ್ಯದಲ್ಲಿ ಭಾರತ ತಂಡ 5 ವಿಕೆಟ್ಗೆ 413 ರನ್ ಬಾರಿಸಿತ್ತು. ಇದು ವಿಶ್ವ ಕಪ್ ಇತಿಹಾಸದಲ್ಲಿ ಭಾರತದ ಗರಿಷ್ಠ ಮೊತ್ತವಾಗಿದೆ.
Innings Break!
— BCCI (@BCCI) November 12, 2023
A batting display full of fireworks as centuries from Shreyas Iyer & KL Rahul light up Chinnaswamy 💥#TeamIndia post 410/4 in the first innings 👏👏
Scorecard ▶️ https://t.co/efDilI0KZP#CWC23 | #MenInBlue | #INDvNED pic.twitter.com/eYeIDYrJum
ಬೆಂಗಳೂರಿನ ಪಂದ್ಯದಲ್ಲಿ ರೋಹಿತ್ ಶರ್ಮಾ 2 ಸಿಕ್ಸರ್, ಶುಭ್ಮನ್ ಗಿಲ್ 4 ಸಿಕ್ಸರ್, ವಿರಾಟ್ ಕೊಹ್ಲಿ 1 ಸಿಕ್ಸರ್, ಶ್ರೇಯಸ್ ಐಯ್ಯರ್ 5 ಸಿಕ್ಸರ್ ಹಾಗೂ ಕೆ. ಎಲ್ ರಾಹುಲ್ 4 ಸಿಕ್ಸರ್ ಬಾರಿಸಿದ್ದಾರೆ. ಬೆಂಗಳೂರಿನ ಸ್ಟೇಡಿಯಮ್ನ ಮೂಲೆ ಮೂಲೆಗೂ ಭಾರತದ ಬ್ಯಾಟರ್ಗಳು ಸಿಕ್ಸರ್ ಬಾರಿಸಿದ ಅಭಿಮಾನಿಗಳನ್ನು ರಂಜಿಸಿದರು.
ವಿಶೇಷ ದಾಖಲೆ ಬರೆದ ಕೆ. ಎಲ್ ರಾಹುಲ್
ಬೆಂಗಳೂರು: ಭಾರತ ತಂಡದ ವಿಕೆಟ್ಕೀಪರ್ ಬ್ಯಾಟರ್ ಕೆ.ಎಲ್ ರಾಹುಲ್ ನೆದರ್ಲ್ಯಾಂಡ್ಸ್ ವಿರುದ್ಧದದ ವಿಶ್ವ ಕಪ್ ಪಂದ್ಯದಲ್ಲಿ ಶತಕ ಬಾರಿಸಿದ್ದಾರೆ. ಅರು ಈ ಪಂದ್ಯದಲ್ಲಿ ಶತಕ ಬಾರಿಸಿದ ಎರಡನೇ ಆಟಗಾರ. ಅವರಿಗಿಂತ ಮೊದಲು ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಕೂಡ ಶತಕ ಬಾರಿಸಿದ್ದಾರೆ. ಆದರೆ, ರಾಹುಲ್ ಪಾಲಿಗೆ ಈ ಶತಕ ವಿಶೇಷ ಸಾಧನೆಯಾಗಿದೆ.
ನೆದರ್ಲೆಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೆಎಲ್ ರಾಹುಲ್ 62 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ವಿಶ್ವಕಪ್ನಲ್ಲಿ ಅತಿ ವೇಗದ ಶತಕ ಬಾರಿಸಿದ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ವೇಳೆ ಅವರು 2023 ರ (ಹಾಲಿ ಆವೃತ್ತಿಯ) ವಿಶ್ವಕಪ್ನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ 63 ಎಸೆತಗಳಲ್ಲಿ ಶತಕ ಬಾರಿಸಿದ ರೋಹಿತ್ ಶರ್ಮಾ ಅವರ ದಾಖಲೆ ಅವರು ಮುರಿದರು.
ಇದನ್ನೂ ಓದಿ: Rohit Sharma: ಅರ್ಧಶತಕ ಬಾರಿಸಿ ಹಲವು ದಾಖಲೆ ಬರೆದ ರೋಹಿತ್ ಶರ್ಮ
ರಾಹುಲ್ 64 ಎಸೆತಗಳಲ್ಲಿ 102 ರನ್ ಗಳಿಸುವ ಹಾದಿಯಲ್ಲಿ 11 ಬೌಂಡರಿ ಮತ್ತು ನಾಲ್ಕು ಸಿಕ್ಸರ್ಗಳನ್ನು ಬಾರಿಸಿದರು, ಇದು ವಿಶ್ವಕಪ್ ಪಂದ್ಯದಲ್ಲಿ ಭಾರತವನ್ನು ಎರಡನೇ ಅತಿ ಹೆಚ್ಚು ಮೊತ್ತಕ್ಕೆ (410/4) ಮುನ್ನಡೆಸಿತು. ಇದು ರಾಹುಲ್ ಅವರ ಆರನೇ ಏಕದಿನ ಶತಕವಾಗಿದೆ. ಭಾರತದ 5ನೇ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಜೊತೆಗೂಡಿ 208 ರನ್ಗಳ ಜೊತೆಯಾಟವಾಡಿದ್ದು, ಇದು ಏಕದಿನ ವಿಶ್ವಕಪ್ನಲ್ಲಿ ನಾಲ್ಕನೇ ವಿಕೆಟ್ಗೆ ಅತಿ ಹೆಚ್ಚು ರನ್ಗಳ ಜೊತೆಯಾಟದ ದಾಖಲೆಯಾಗಿದೆ.
ವಿಶ್ವಕಪ್ ನಲ್ಲಿ ಭಾರತದ ಆಟಗಾರರ ವೇಗದ ಶತಕ (ಎಸೆತಗಳ ಪ್ರಕಾರ )
62 – ಕೆಎಲ್ ರಾಹುಲ್ ವಿರುದ್ಧ ನೆದರ್ಲ್ಯಾಂಡ್ಸ್ , ನ. 12, 2023
63 – ರೋಹಿತ್ ಶರ್ಮಾ ವಿರುದ್ಧ ಆಫ್ಘನ್ 2023
81 – ವೀರೇಂದ್ರ ಸೆಹ್ವಾಗ್ ವಿರುದ್ಧ ಬಿಇಆರ್, 2007
83 – ವಿರಾಟ್ ಕೊಹ್ಲಿ ವಿರುದ್ಧ ಬ್ಯಾನ್, 2011