ಮುಂಬಯಿ: ಟೀಮ್ ಇಂಡಿಯಾದ ಸ್ಟಾರ್ ಓಪನರ್ ಶುಭ್ಮನ್ ಗಿಲ್ ಇತ್ತೀಚೆಗೆ ಮುಕ್ತಾಯಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ನ 16ನೇ ಆವೃತ್ತಿಯಲ್ಲಿ (IPL 2023) ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ಋತುವಿನಲ್ಲಿ ಶುಭ್ಮನ್ ಗಿಲ್ ಮೂರು ಶತಕಗಳೊಂದಿಗೆ 890 ರನ್ ಗಳಿಸಿದ್ದಾರೆ. ಪಂದ್ಯಾವಳಿಯ. 23 ವರ್ಷದ ಆರಂಭಿಕ ಆಟಗಾರ ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಶತಕ (60 ಎಸೆತಗಳಲ್ಲಿ 129 ರನ್) ಗಳಿಸಿದ್ದರು. ಅದಕ್ಕಿಂತ ಮೊದಲು ಆರ್ಸಿಬಿ ಪರವೂ ಒಂದು ಶತಕ ಬಾರಿಸಿದ್ದರು.
ಗಿಲ್ ಹಾಲಿ ಋತುವಿನಲ್ಲಿ ಒಟ್ಟು ಒಟ್ಟು 890 ರನ್ ಬಾರಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ ಎನಿಸಿಕೊಂಡಿದ್ದರು. ವಿರಾಟ್ ಕೊಹ್ಲಿ 2016ರಲ್ಲಿ 973 ರನ್ ಬಾರಿಸಿ ಈ ಸಾಲಿನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಖ್ಯಾತಿ ತಮ್ಮದಾಗಿಸಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಕ್ರಿಕೆಟ್ ಕ್ಷೇತ್ರದಿಂದ ದೊಡ್ಡ ಮಟ್ಟದ ಹೊಗಳಿಕೆ ಲಭಿಸಿದೆ. ಅಲ್ಲದೆ, ಸಾಕಷ್ಟು ಮಂದಿ ಅವರನ್ನು ಭಾರತ ತಂಡದ ಬ್ಯಾಟಿಂಗ್ ಲೆಜೆಂಡ್ಗಳಾದ ವಿರಾಟ್ ಕೊಹ್ಲಿ ಹಾಗೂ ಸಚಿನ್ ತೆಂಡೂಲ್ಕರ್ ಅವರಿಗೆ ಹೋಲಿಕೆ ಮಾಡಲಾಗುತ್ತಿದೆ. ಆದರೆ, ಯುವ ಆಟಗಾರನನ್ನು ಈಗಲೇ ದಿಗ್ಗಜ ಆಟಗಾರರೊಂದಿಗೆ ಹೋಲಿಕೆ ಮಾಡುವುದು ಸರಿಯಲ್ಲ ಎಂಬುದಾಗಿ ಗುಜರಾತ್ ತಂಡದ ಮಾರ್ಗದರ್ಶಕ (ಮೆಂಟರ್) ಗ್ಯಾರಿ ಕಸ್ಟರ್ನ್ ಅವರು ಹೇಳಿದ್ದಾರೆ.
ಈ ಹಿಂದೆ ಭಾರತದ ಬ್ಯಾಟಿಂಗ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಅವರೊಂದಿಗೆ ರಾಷ್ಟ್ರೀಯ ತಂಡದ ಮುಖ್ಯ ತರಬೇತುದಾರರಾಗಿ ಕೆಲಸ ಮಾಡಿದ ಕರ್ಸ್ಟನ್ ಅವರು ಹಿರಿಯ ಆಟಗಾರರಿಗೆ ಗಿಲ್ ಅವರನ್ನು ಹೋಲಿಕೆ ಮಾಡುವುದು ಅನ್ಯಾಯ ಎಂದು ಹೇಳಿದ್ದಾರೆ. ಆದರೆ, ಗಿಲ್ಗೆ ಎಲ್ಲ ಸ್ವರೂಪದ ಕ್ರಿಕೆಟ್ನಲ್ಲಿ ಉತ್ತಮ ಆಟಗಾರನಾಗುವ ಅವಕಾಶಗಳು ಇವೆ ಎಂದು ಹೇಳಿದ್ದಾರೆ.
ಗಿಲ್ ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗುವುದು ನಿಶ್ಚಿತ. ಆದರೆ, ಈಗಷ್ಟೇ ಕ್ರಿಕೆಟ್ ಕ್ಷೇತ್ರದಲ್ಲಿ ಸಾಧನೆ ಮಾಡಲು ಹೊರಟಿರುವ ಅವರನ್ನು ಸಚಿನ್ ಮತ್ತು ವಿರಾಟ್ಗೆ ಹೋಲಿಸುವುದು ಅನ್ಯಾಯವಾಗುತ್ತದೆ” ಎಂದು ಕರ್ಸ್ಟನ್ ಕ್ರಿಕ್ಬಜ್ ಜತೆ ಮಾತನಾಡುತ್ತಾ ಹೇಳಿದ್ದಾರೆ.
ಇದನ್ನೂ ಓದಿ : Team India : ಐಪಿಎಲ್ ಬಳಿಕ ಈಗ ಭಾರತ ಕ್ರಿಕೆಟ್ ತಂಡ ಯಾವೆಲ್ಲ ಟೂರ್ನಿಯಲ್ಲಿ ಆಡಲಿದೆ?
ಭಾರತ ಕ್ರಿಕೆಟ್ ತಂಡಕ್ಕೆ ಮೂರು ಮಾದರಿಯ ಕ್ರಿಕೆಟ್ನಲ್ಲಿ ಯಶಸ್ವಿಯಾಗಿ ಆಡುವ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ ಎಂಬದಾಗಿಯೂ ಗಿಲ್ ಹೇಳಿದರು. ಇದೇ ವೇಳೆ ಅವರು ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ ಗಿಲ್ ಫಾರ್ಮ್ ಉಳಿಯಬಹುದೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಕ್ಕೂ ಸಕಾರಾತ್ಮಕ ಉತ್ತರ ನೀಡಿದ್ದಾರೆ.
ಶುಭ್ಮನ್ ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ ಭಾರ ತಂಡದ ಶ್ರೇಷ್ಠ ಆಟಗಾರನಾಗಲು ಎಲ್ಲಾ ಅರ್ಹತೆಗಳನ್ನು ಹೊಂದಿದ್ದಾರೆ. ಯಾವುದೇ ಸವಾಲುಗಳು ಮತ್ತು ಅಡೆತಡೆಗಳನ್ನು ಎದುರಿಸುವ ಶಕ್ತಿ ಹೊಂದಿದ್ದಾರೆ. ಅದನ್ನು ಅವರು ಹೇಗೆ ಬಳಸುತ್ತಾರೆ ಮತ್ತು ಹೇಗೆ ಪ್ರಗತಿ ಸಾಧಿಸುತ್ತಾರೆ ಎಂಬುದು ಅವರು ದೀರ್ಘಕಾಲೀನ ಯಶಸ್ಸನ್ನು ನಿರ್ಧರಿಸುತ್ತದೆ. ಎಂದು ಭಾರತದ ಮಾಜಿ ಕೋಚ್ ಹೇಳಿದ್ದಾರೆ.